Home ಬೆಂಗಳೂರು ನಗರ ಸಂಸತ್ ನಲ್ಲಿ ಠೇವಣಿ ವಿಮೆ & ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ ಅಂಗೀಕಾರ

ಸಂಸತ್ ನಲ್ಲಿ ಠೇವಣಿ ವಿಮೆ & ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ ಅಂಗೀಕಾರ

72
0

ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ ಎಲ್ಲ ಠೇವಣಿದಾರರಿಗೆ ಅನುಕೂಲ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ಕೃತಜ್ಞತೆ : ಸಂಸದ ತೇಜಸ್ವೀ ಸೂರ್ಯ

ನವದೆಹಲಿ:

ಸೋಮವಾರ ಸಂಸತ್ ನಲ್ಲಿ ಅಂಗೀಕಾರವಾದ ‘ಠೇವಣಿ ವಿಮೆ & ಸಾಲ ಖಾತರಿ (ತಿದ್ದುಪಡಿ) ಮಸೂದೆ 2021’ ರಿಂದ, ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿ ಸಂಕಷ್ಟಕ್ಕೀಡಾಗಿರುವ ಎಲ್ಲ ಠೇವಣಿದಾರರಿಗೆ ಪರಿಹಾರ ದೊರಕಿದಂತಾಗಿದ್ದು, ಮಸೂದೆ ಅಂಗೀಕರಗೊಳಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಅಭಿನಂದನೆಗಳನ್ನು ತಿಳಿಸಿರುವ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು, ತಿದ್ದುಪಡಿಗೊಂಡಿರುವ ಮಸೂದೆ ಅನ್ವಯ ಸಂಕಷ್ಟಕ್ಕೊಳಗಾಗುವ ಬ್ಯಾಂಕ್ ಗಳಿಂದ 90 ದಿನಗಳ ಅವಧಿಯಲ್ಲಿ 5 ಲಕ್ಷದಷ್ಟು ಠೇವಣಿ ಹಿಂತೆಗೆದುಕೊಳ್ಳುವ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಈ ಹಿಂದಿನ ನಿಯಮಾವಳಿಗಳ ಅನ್ವಯ ಸುಮಾರು 8-10 ವರ್ಷಗಳವರೆಗೂ ಕಾಯಬೇಕಾದ ಅವಧಿಯನ್ನು ಮೊಟಕುಗೊಳಿಸಿರುವುದರಿಂದ ಠೇವಣಿದಾರರ ಹಿತಾಸಕ್ತಿ ಕಾಯಲು ಸಾಕಷ್ಟು ಅನುಕೂಲವಾಗಲಿದೆ ಎಂದು ವಿವರಿಸಿದರು.

ಕೆಂದ್ರ ಹಣಕಾಸು ಸಚಿವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಸಂಸದರು, ” ಅಂಗೀಕಾರಗೊಂಡಿರುವ ಮಸೂದೆಯಲ್ಲಿನ ತಿದ್ದುಪಡಿಯ ಅನ್ವಯ ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ 40 ಸಾವಿರಕ್ಕೂ ಅಧಿಕ ಠೇವಣಿದಾರರಿಗೆ (ಹೆಚ್ಚಿನ ಪ್ರಮಾಣದಲ್ಲಿ ಹಿರಿಯ ನಾಗರಿಕರು, ಮಧ್ಯಮ ವರ್ಗ, ನಿವೃತ್ತ ನೌಕರರು) ಅನುಕೂಲವಾಗಲಿದ್ದು, ಸಾಮಾನ್ಯ ನಾಗರಿಕರ ಹಿತಾಸಕ್ತಿಗೆ ಪೂರಕವಾಗಿ ಸ್ಪಂದಿಸಿರುವ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, 90 ದಿನಗಳ ಸಮಯಮಿತಿಯಲ್ಲಿ 5 ಲಕ್ಷದ ವರೆಗಿನ ಮೊತ್ತ ಪಡೆಯಲು ಅನುಕೂಲವಾಗವ ನಿಟ್ಟಿನಲ್ಲಿ ಮಸೂದೆ ಜಾರಿಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ.

ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ ಒಟ್ಟು 41,804 ಠೇವಣಿದಾರರಲ್ಲಿ 31,576 ಜನರು 5 ಲಕ್ಷದ ವರೆಗಿನ ಠೇವಣಿ ಮೊತ್ತ ಹೊಂದಿದವರಾಗಿದ್ದು, ತಿದ್ದುಪಡಿ ಗೊಂಡಿರುವ ಮಸೂದೆ ಅನ್ವಯ ಶೇ. 75.53 ರಷ್ಟು ಠೇವಣಿದಾರರಿಗೆ 261 ಕೋಟಿ ರೂ, ಮೊತ್ತವನ್ನು ಅಧಿನಿಯಮ ಹೊರಡಿಸಿದ 90 ದಿನಗಳ ಅವಧಿಯಲ್ಲಿ ಪಾವತಿಯಾಗಲಿದ್ದು, ಉಳಿದ 10 ಸಾವಿರ ಠೇವಣಿದಾರರಿಗೆ (5 ಲಕ್ಷಕ್ಕೂ ಅಧಿಕ ಮೊತ್ತದ ಠೇವಣಿ) 511 ಕೋಟಿ ರೂ,ಗಳಷ್ಟು ಠೇವಣಿಯನ್ನು ಪಾವತಿಸಲಾಗುವುದು ” ಎಂದು ವಿವರಿಸಿದರು.

ಶ್ರೀ ಗುರುರಾಘವೇಂದ್ರ ಬ್ಯಾಂಕ್ ನ ಅನಿಶ್ಚಿತ ಸ್ಥಿತಿಗತಿ :

ಶ್ರೀ ಗುರು ರಾಘವೇಂದ್ರ ಬ್ಯಾಂಕ್ ನಲ್ಲಿನ ಹಲವು ಅಕ್ರಮಗಳ ದೂರಿನ ಆಧಾರದಲ್ಲಿ ಜನವರಿ 10, 2020 ರಂದು, ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ ನ 35A ಅಧಿನಿಯಮದಡಿ ಬ್ಯಾಂಕ್ ವಹಿವಾಟಿನ ಮೇಲೆ ನಿಯಂತ್ರಕ ನಿರ್ಬಂಧಗಳನ್ನು ಹೇರಿದ ಆರ್ ಬಿ ಐ, ಕೇವಲ 27 ಜನರಿಗೆ 937 ಕೋಟಿ ರೂ, ಗಳ ಸಾಲ ಮಂಜೂರಾತಿಯಿಂದ ಶೇ,70ರಷ್ಟು ದಿವಾಳಿಯಂಚಿ (ಕಾರ್ಯನಿರ್ವಹಿಸದ ಸ್ವತ್ತುಗಳು)ಗೆ ನೂಕಲ್ಪಟ್ಟಿದ್ದು, ಬ್ಯಾಂಕ್ ನ ಅಂದಿನ ಆಡಳಿತ ಮಂಡಳಿಯು ದೋಷಪೂರಿತ ಸಾರ್ವಜನಿಕ ವ್ಯಾಜ್ಯಗಳನ್ನು (ಪಿ.ಎಲ್) ದಾಖಲಿಸುವ ಮೂಲಕ ಠೇವಣಿದಾರರನ್ನು ದಾರಿತಪ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನೂತನ ಆಡಳಿತಾಧಿಕಾರಿಗಳು ಬ್ಯಾಂಕ್ ನ ಪುನಶ್ಚೇತನಕ್ಕೆ ಪ್ರಯತ್ನಿಸಿದ್ದು, ಮಸೂದೆ ತಿದ್ದುಪಡಿಯಿಂದ ಠೇವಣಿದಾರರಿಗೆ ಇನ್ನಷ್ಟು ಅನುಕೂಲವಾಗಲಿದೆ.

“ಕಳೆದ ವರ್ಷ ಕೇಂದ್ರ ಸರ್ಕಾರವು, ಬ್ಯಾಂಕ್ ಅಕೌಂಟ್ ಹೊಂದಿರುವವರ ವಿಮಾ ಮೊತ್ತವನ್ನು 1 ಲಕ್ಷದಿಂದ 5 ಲಕ್ಷದ ವರೆಗೆ ವಿಸ್ತರಿಸಲಾಗಿದ್ದು, 2020 ರ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್ ಗೆ ತಿದ್ದುಪಡಿ ತಂದು ಎಲ್ಲ ರೀತಿಯ ಬ್ಯಾಂಕ್ ಗಳನ್ನು ಆರ್ ಬಿ ಐ ನ ಅಧೀನದಲ್ಲಿ ಒಳಪಡಿಸಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಐತಿಹಾಸಿಕ ತೀರ್ಮಾನಗಳಲ್ಲೊಂದು. ಸಹಕಾರಿ ಬ್ಯಾಂಕ್ ಗಳಲ್ಲಿ ಇದರಿಂದ ಪಾರದರ್ಶಕತೆಗೆ ಒತ್ತು ಸಿಗಲಿದ್ದು, ಇನ್ನಷ್ಟು ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಇದರಿಂದ ಸಹಕಾರಿಯಾಗಲಿದೆ.ಬಜೆಟ್ ಅಧಿವೇಶನದಲ್ಲಿ ತಿಳಿಸಿರುವಂತೆ, ಎಲ್ಲ ಠೇವಣಿದಾರರ ಹಿತಾಸಕ್ತಿಗೆ ಪೂರಕವಾದ ಮಸೂದೆಗೆ ತಿದ್ದುಪಡಿ ತಂದು ಸಂಸತ್ ನ ಎರಡೂ ಸದನಗಳಲ್ಲಿ ಅಂಗೀಕಾರಗೊಳಿಸಿರುವುದು ಅಭಿನಂದನಾರ್ಹ ” ಎಂದು ಇದೇ ಸಂದರ್ಭದಲ್ಲಿ ಸಂಸದ ತೇಜಸ್ವೀ ಸೂರ್ಯ ವಿವರಿಸಿದರು.

ಠೇವಣಿ ವಿಮಾ ನಿಯಮವು ಎಲ್ಲ ರೀತಿಯ ಶೇ.98.3 ರಷ್ಟು ಬ್ಯಾಂಕ್ ಖಾತೆದಾರರಿಗೆ ಅನುಕೂಲವಾಗಲಿದ್ದು, ಪಿ.ಎಂ.ಸಿ ಬ್ಯಾಂಕ್ ನ 9,15,775 ಠೇವಣಿದಾರರಿಗೂ ಇದರಿಂದ ಅನುಕೂಲವಾಗಲಿದೆ.

LEAVE A REPLY

Please enter your comment!
Please enter your name here