Home ಅಪರಾಧ ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿ ಗೂಂಡಾ ಕಾಯ್ದೆ ಅಡಿ ಬಂಧನ

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿ ಗೂಂಡಾ ಕಾಯ್ದೆ ಅಡಿ ಬಂಧನ

61
0
bengaluru-city-police-logo

ಬೆಂಗಳೂರು:

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನವೀನ್ ಎಂಬುವವರನ್ನು ಗೂಂಡಾ ಕಾಯ್ದೆ ಅಡಿ ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ನವೀನ್ ಎಂ ಎನ್(28) ನಗರದಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಮಾನವ ಕಳ್ಳಸಾಗಾಟದ ಮೂಲಕ ಕರೆತಂದು ಅಕ್ರಮವಾಗಿ ವಿವಿಧ ಸ್ಥಳಗಳಲ್ಲಿ ವೇಶ್ಯಾವಾಟಿಕೆಗೆ ದೂಡುತ್ತಿದ್ದನು.

ಈ ಹಿಂದೆ ಸಿಸಿಬಿ ಪೊಲೀಸರು ಜಯನಗರ, ಜೆಪಿ ನಗರ ಹಾಗೂ ಕೆ ಎಸ್ ಲೇಔಟ್ ಮತ್ತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ವೇಶ್ಯಾವಾಟಿಕೆ ದಂಧೆ ಕೇಸಿನಲ್ಲಿ ಈತನನ್ನು ಬಂಧಿಸಿದ್ದರು.

ಆರೋಪಿ ನವೀನ್ ಪದೇ ಪದೇ ತನ್ನ ದಂಧೆ ಮುಂದುವರೆಸಿದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆ ಅಡಿ ಬಂಧಿಸಲು ಸಿಸಿಬಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ನಂತರ ವರದಿಯನ್ನು ಡಿಸಿಪಿ ಕೆಪಿ ರವಿಕುಮಾರ್ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ನವೀನ್ ಬಂಧನಕ್ಕೆ ಶಿಫಾರಸು ಮಾಡಿದ್ದರು. ಸದ್ಯ ಆದೇಶದನ್ವಯ ನವೀನ್ ನನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here