Home ರಾಜಕೀಯ ಯತ್ನಾಳ್, ಕತ್ತಿ ಹೊರತು ಎಲ್ಲರೂ ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲ: ಡಿಸಿಎಂ ಗೋವಿಂದ ಕಾರಜೋಳ

ಯತ್ನಾಳ್, ಕತ್ತಿ ಹೊರತು ಎಲ್ಲರೂ ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲ: ಡಿಸಿಎಂ ಗೋವಿಂದ ಕಾರಜೋಳ

57
0

ಬೆಂಗಳೂರು:

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೊರತುಪಡಿಸಿ ಉಳಿದ 118 ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲಿಸಿದ್ದು, ಅವರ ಕಾರ್ಯಕ್ಕೆ ಸಮಾ ಧಾನ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಖಾಸಗಿ ಹೋಟೆಲಿನಲ್ಲಿ ನಡೆದ ಎರಡು ಎರಡು ದಿನಗಳ ಶಾಸಕರ ಸಮಾಲೋಚನಾ ಸಭೆ ಬಳಿಕ ಜಂಟಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಯ ಸಭೆಯಲ್ಲಿ ಒಬ್ಬರಿಂದ ಶಾಸಕರು ಮಾತ್ರ ಸಚಿವರು, ಮುಖ್ಯ ಮಂತ್ರಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಉಳಿದಂತೆ ಎಲ್ಲರೂ ಮುಖ್ಯಮಂತ್ರಿ ನಾಯಕತ್ವದ ಬಗ್ಗೆ ಅಚಲ ನಿಷ್ಟೆ, ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಹೆಸ ರು ಪ್ರಸ್ತಾಪಿಸದೆ ಯಡಿಯೂರಪ್ಪ ನಾಯಕತ್ವದ ಬಗ್ಗೆ ಎಲ್ಲರಲ್ಲೂ ಒಮ್ಮತವಿರುವುದಾಗಿ ಅವರು ತಿಳಿಸಿದರು. 118 ಜನ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮ‌ ಕೆಲಸ‌ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾ ಯ ವ್ಯಕ್ತಪಡಿಸಿ ಅವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಯಡಿಯೂರಪ್ಪ ಕೆಲಸಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಆದಾಯ ಮುಕ್ಕಾಲು ಪಾಲು ಬರದಿದ್ದರೂ ಕೊರೊನಾ ನಿಯಂತ್ರಣವನ್ನು ದೇಶಕ್ಕೆ ಮಾದರಿಯಾಗಿ ನಿರ್ವಹಣೆ ಮಾಡಿದ್ದಾರೆ. ನರೆಹಾನಿ ನಡುವೆ ಕೂಡ ಉತ್ತಮ ಕೆಲಸ ಮಾಡಿದ್ದಾರೆ.

ಎರಡು ದಿನ ವಿಭಾಗಾವಾರು ಶಾಸಕರ ಸಭೆ ನಡೆಸಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿ ಯವರೆಗೂ ನಡೆಸಿದ ಸಭೆಯಲ್ಲಿ ಪ್ರವಾಹ ಹಾನಿ, ಬೆಳೆ ನಷ್ಟ ಕುರಿತು ಎಲ್ಲ ಚರ್ಚೆ ನಡೆಸಿದ್ದೇವೆ. 2019-20ರ ಅ ನಾಹುತ, 2020-21ರ ಪ್ರವಾಹ ಅನಾಹುತ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿದ್ದೇವೆ. ಸರ್ಕಾರದ ಕೊರೊನಾ ನಿರ್ವ ಹಣೆ ಇಡೀ ದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಯಡಿಯೂರ ಪ್ಪ ನಾಯಕತ್ವದಲ್ಲಿ ಕೊರೊನಾ ಉತ್ತಮ ನಿರ್ವ ಹಣೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು. ಶಾಸಕರ ಸಭೆ ಬಗ್ಗೆ ಬಹುತೇಕ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಉಳಿದ ಅವಧಿಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ವಿವರಣೆಯನ್ನು ಮುಖ್ಯಮಂತ್ರಿಗೆ ನೀಡಿದರು. ‌

ಶಾಸಕರು ತಮಗೆ ಕೊಟ್ಟಿರುವ ಅನುದಾನದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಮಾಡುವ ಭರವಸೆ ಕೊಟ್ಟಿದ್ದಾರೆ. ಮಳೆ, ಪ್ರವಾಹದಿಂದ ಕೊಚ್ಚಿ ಹೋದ ರಸ್ತೆ, ಕೆರೆ ಕಟ್ಟಲೆ ಮನೆಗೆ ಹೆಚ್ಚುವರಿ ಅನುದಾನ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. 25 ಕೋಟಿ ಅನುದಾನ ಪ್ರತಿ ಕ್ಷೇತ್ರಕ್ಕೆ ಕೊಡುವ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆ ಎಂದರು.

ಆರ್ಥಿಕ‌ ಸ್ಥಿತಿ‌ ಸುಧಾರಣೆ ನಿರೀಕ್ಷೆಯಲ್ಲಿ ಹೆಚ್ಚಿನ ಅನುದಾನ ನೀಡುವ ಆಶ್ವಾಸನೆ ಕೊಡಲಾಗಿದೆ. ಈ ಬಾರಿ ಅಭಿ ವೃದ್ಧಿಗೆ ಒತ್ತು ಕೊಡುವ ಬಜೆಟ್ ನೀಡುವ ಭರವಸೆಯನ್ನು ಯಡಿಯೂರಪ್ಪ ಕೊಟ್ಟಿದ್ದಾರೆ ಎಂದರು. ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಮ್ಮ ಪಕ್ಷದ ಎಲ್ಲ ಶಾಸಕರ‌ ಜೊತೆ ಎರಡು ದಿನ ಸಮಾಲೋಚನೆ ನಡೆಸಲಾಯಿತು. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವ ಸಲಹೆ ಬೇಡಿಕೆ ಬಂದಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ, ನೆರೆ, ಉಪ ಚುನಾವಣೆ, ಕೊರೊನಾ ಎದುರಾಯಿತು. ಹೀಗಾಗಿ ಹಣಕಾಸು ಇಲಾಖೆಗೆ ಬರಬೇಕಾದ ಆದಾ ಯ ಕೊರತೆಯಾಯಿತು. ಅಭಿವೃದ್ಧಿ ಕಾರ್ಯ ಕುಂಠಿತವಾಯಿತು. ಇದನ್ನು ಶಾಸಕರು ನಮ್ಮ‌ಗಮನಕ್ಕೆ ತಂದಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದಿದೆ.

ಹಣಕಾಸು ಸ್ಥಿತಿ ಸುಧಾರಿಸುತ್ತಿದೆ ಹಾಗಾಗಿ ಶಾಸಕರ ಸಭೆ ಕರೆದು ಅಪೂ ರ್ಣ ಕಾಮಗಾರಿ ಮುಗಿಸಲು ಮತ್ತು ಮುಂದಿನ ಯೋಜನೆಗಳ ಕುರಿತು ಒಟ್ಟಿಗೆ ಸೇರಿ ಅಭಿವೃದ್ಧಿ ದೃಷ್ಟಿಯಲ್ಲಿ‌ ರಾಜ್ಯವನ್ನು ಯಾವ ರೀತಿ ಕೊಂಡೊಯ್ಯಬೇಕು ಎಂದು ಚರ್ಚೆ ನಡೆಸಲಾಯಿತು ಎಂದರು. ವಾರದಲ್ಲಿ ಎರಡು ದಿನ ಸಚಿವರು ಶಾಸಕರಿಗೆ ಸಿಗಬೇಕು ಎನ್ನುವ ಸಲಹೆ ಬಂದಿದೆ. ಪ್ರತಿ ಬುಧವಾರ, ಗುರುವಾರ ಕಚೇರಿಯಲ್ಲಿ ಸಚಿವರು ಲಭ್ಯವಿದ್ದತೆ ನಮ್ಮ ಕಷ್ಟ ಹೇಳಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವ ಬೇಡಿಕೆ ಇಟ್ಟ ರು ಇದಕ್ಕೆ ಸಹಮತ ವ್ಯಕ್ತಪಡಿಸಲಾಯಿತು ಎಂದು ಅವರು ವಿವರಿಸಿದರು. ಮುಖ್ಯಮಂತ್ರಿ ಅವರು ಎಲ್ಲಾ ಶಾಸಕರ ಸಮಸ್ಯೆ, ಅಹವಾಲು, ಅಭಿವೃದ್ದಿ ಯೋಜನೆ, ಕಾಮಗಾರಿಗಳು ಹಾಗೂ ಸರ್ಕಾರ ಸಚಿವರ ನಡುವಿನ ಹೊಂದಾಣಿಕೆ ಬಗ್ಗೆ ಕೂಲಂಕುಷವಾಗಿ ಚೆರ್ಚೆ ನಡೆಸಿದ್ದಾರೆ.

2023 ಕ್ಕೆ ಅಧಿಕಾರಕ್ಕೆ ಬರಲು ಯಾವ ಯಾವ ಕಾರ್ಯಸೂಚಿ‌ ನಿರೂಪಿಸಬೇಕು‌ ಎಂದು ಶಾಸಕರು ಸಲಹೆ ಕೊಟ್ಟಿದ್ದಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಹೊರಗಡೆ ಸಾರ್ವಜನಿಕ ಹೇಳಿಕೆ ನೀಡಬಾರದು. ಟೀಕೆ‌ ಮಾಡಬಾರದು ಎನ್ನುವ ಭಾವನೆಯ ನ್ನು ಶಾಸಕರು ವ್ಯಕ್ತಪಡಿಸಿದ್ದಾರೆ. ಅದೆಲ್ಲವನ್ನೂ ಗಮನದಲ್ಲಿರಿಸಿ ನಾವೆಲ್ಲಾ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡ ಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನವರಿ 11, 12, 13 ಮೂರು‌ ದಿನ ಗ್ರಾಪಂ‌ ಸದಸ್ಯರಿಗೆ ಅಭಿನಂದೆನೆ ಸಲ್ಲಿಸಲು ಐದು ತಂಡದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಜನವರಿ 16, 17 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದಾರೆ.

ಭದ್ರಾವತಿಯಲ್ಲಿ ಕಾರ್ಯಕ್ರಮ ಇದೆ. ಬೆಳಗಾವಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಚಿಂತನೆ ಇದ್ದು ಅಲ್ಲಿಗೆ‌ ಕರೆಸುವ ಪ್ರ ಯತ್ನ ನಡೆಸುವುದಾಗಿ ಅವರು ತಿಳಿಸಿದರು. ಸಚಿವ ಸೋಮಣ್ಣ ಮಾತನಾಡಿ, ‌ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

ಪಕ್ಷಕ್ಕೆ ಅಧ್ಯಕ್ಷರು ದೊಡ್ಡವರು, ಸರ್ಕಾರಕ್ಕೆ‌ ಮುಖ್ಯಮಂತ್ರಿ ದೊಡ್ಡವರು. ಸರ್ಕಾರ ಎಂದರೆ ಸರ್ಕಾರವೇ, ಸರ್ಕಾರದ ಮುಖ್ಯಸ್ಥರಿಗೆ ಮುಜುಗರವಾದಾಗಾ ಅದನ್ನು ಸಹೋದ್ಯೋಗಿ ಯಾಗಿ ನಾನು ಖಂಡಿಸುತ್ತೇನೆ. ಯತ್ನಾಳ್ ವಿರುದ್ಧ ಕ್ರಮದ ವಿಚಾರದಲ್ಲಿ ಯಾವಾಗ ಏನಾಗಬೇಕೋ ಆಗಲಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ, ಒಳ್ಳೆಯ ಕೆಲಸ ಮಾಡುತ್ತಿದೆ, ಹೊಸ ವರ್ಷ ಬಂದಿದೆ, ಎಲ್ಲ ಒಳ್ಳೆಯದಾಗಲಿದೆ ಎಂದರು. UNI

LEAVE A REPLY

Please enter your comment!
Please enter your name here