Home ಅಪರಾಧ Allegation of husband molestation: Wife commits suicide by jumping into lake with...

Allegation of husband molestation: Wife commits suicide by jumping into lake with two children in Bagepalli| ಪತಿ ಕಿರುಕುಳ ಆರೋಪ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಪತ್ನಿ ಆತ್ಮಹತ್ಯೆ

49
0
Bagepalli Police Station

ಬಾಗೇಪಲ್ಲಿ:

ಗಂಡನ ಕಿರುಕುಳದಿಂದ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ  ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮಿಟ್ಟೇಮರಿ ಬಳಿ ನಡೆದಿದೆ.

 ಮೃತರನ್ನು ರಾಧ(28) ಹಾಗೂ ಹೆಣ್ಣು ಮಕ್ಕಳಾದ ಪೂರ್ವಿಕ(5) ಮತ್ತು ಒಂದು ವರ್ಷದ ಮಗು ಎಂದು ಗುರುತಿಸಲಾಗಿದೆ.

ಮದ್ಯ ವ್ಯಸನಿಯಾಗಿದ್ದ ಗಂಡ ಮಲ್ಲಿಕಾರ್ಜುನ ಹೆಂಡತಿಗೆ ದಿನ ನಿತ್ಯ ಚಿತ್ರಹಿಂಸೆ ನೀಡಿ ತವರು ಮನೆಯಿಂದ ಹಣ ತರುವಂತೆ ಪಿಡಿಸುತ್ತಿದ್ದ ಎನ್ನಲಾಗಿದ್ದು, ಇತ್ತೀಚೆಗೆ ರಾಧ ಹೆಸರಿನಲ್ಲಿ ಅತ್ತೆ ಮಾವ ಖರೀದಿ ಮಾಡಿ ನೀಡಿದ ನಿವೇಶನ ಮಾರಾಟ ಮಾಡುವಂತೆ ಹೆಂಡತಿಗೆ ಪೀಡಿಸುತ್ತಿದ್ದ. ಇದಕ್ಕೆ ರಾಧ ನಿರಾಕರಿಸಿ  ಹೆಣ್ಣು ಮಕ್ಕಳಿದ್ದಾರೆ ನಾನು ನಿವೇಶನ ಮಾರಾಟ ಮಾಡುವುದಿಲ್ಲ ಎಂದು  ತಿಳಿಸಿದ್ದಳು ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಗಂಡನ ಕಿರುಕುಳ ಹೆಚ್ಚಾದಾಗ ತವರು ಮನೆಗೆ ಹೋಗಿ ಬರುವುದಾಗಿ ಎಂದು ಗಂಡನ ಮನೆಯಲ್ಲಿ ತಿಳಿಸಿ ಪುತ್ರಿಯರಾದ ಪೂರ್ವಿಕ ಮತ್ತು ಒಂದು ವರ್ಷದ ಮಗುವನ್ನು ಕರೆದುಕೊಂಡು ಬಾಗೇಪಲ್ಲಿ ಬಸ್‍ನಲ್ಲಿ ಪ್ರಯಾಣಿಸಿ ಮಾರ್ಗಮಧ್ಯೆದ ಮಿಟ್ಟೇಮರಿ ಗ್ರಾಮದಲ್ಲಿ ತನ್ನ ಮಕ್ಕಳೊಂದಿಗೆ ಇಳಿದು ಸಮೀಪದ ಮಿಟ್ಟೇಮರಿ ಬಳಿ  ಕೆರೆಗೆ ಬುಧವಾರ ಹಾರಿ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ ಶವಗಳು ನೀರಿನಲ್ಲಿ ತೆಲುತ್ತಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಶವಗಳನ್ನು ಶವಗಾರಕ್ಕೆ ಅಂಬುಲೆನ್ಸ್ ನಲ್ಲಿ ಸಾಗಿಸಿ ಶವ ಪರೀಕ್ಷೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.‌ ಪೊಲೀಸರು ಗಂಡ ಮಲ್ಲಿಕಾರ್ಜುನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here