ಅಂಜುಂ ಪರ್ವೇಜ್ಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ
ಬೆಂಗಳೂರು, ಜೂನ್ 7: ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ (1994 ಬ್ಯಾಚ್) ಅವರನ್ನು ಕರ್ನಾಟಕ ಸರ್ಕಾರವು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.
ಈ ಹಿಂದೆ ಹುದ್ದೆ ನಿರೀಕ್ಷೆಯಲ್ಲಿದ್ದ ಅಂಜುಂ ಪರ್ವೇಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಖಾಲಿ ಇದ್ದ ಹುದ್ದೆಗೆ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಅರಣ್ಯ ಸಂರಕ್ಷಣೆ, ಪರಿಸರ ನಿರ್ವಹಣೆ ಹಾಗೂ ಹವಾಮಾನ ಬದಲಾವಣೆ ಸಂಬಂಧಿತ ಪ್ರಮುಖ ಕಾರ್ಯಗಳನ್ನು ಅವರು ಮುನ್ನಡೆಸಲಿದ್ದಾರೆ.
