Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಳಗಾವಿ
  • ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ – ಸಿಎಂ
  • ಬೆಳಗಾವಿ

ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ – ಸಿಎಂ

The Bengaluru Live December 23, 2021 10:00 PM
ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ – ಸಿಎಂ

ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ – ಸಿಎಂ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿ:

ಮತಾಂತರ ನಿಷೇಧ ಕಾಯ್ದೆ ಜನಪರ ಹಾಗೂ ಸಂವಿಧಾನಬದ್ಧವಾದ ಕಾಯ್ದೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಶೇಷವಾಗಿ ಎಸ್ ಸಿ ಎಸ್ ಟಿ, ಬಡವರ ಪರವಾದ ಕಾಯ್ದೆಯಾಗಿದೆ. ಬರುವ ದಿನಗಳಲ್ಲಿ ಎಲ್ಲಾ ಜನಾಂಗಗಳ ರಕ್ಷಣೆ ಜೊತೆ ಅವರ ಸ್ವಾಭಿಮಾನವನ್ನು ಎತ್ತಿಹಿಡಿಯಲು ನೆರವಾಗುತ್ತದೆ. ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರದ ಸ್ಪಷ್ಟ ನೀತಿಯಿದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆಯಿರುವ ಜನರಿಗೆ ಆಸೆ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರಕ್ಕೆ ಒತ್ತಾಯ ಮಾಡುತ್ತಿರುವುದಕ್ಕೆ ಸರ್ಕಾರದ ವಿರೋಧವಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನ ದ್ವಿಮುಖ ನೀತಿ : ಇಂದು ಮತಾಂತರ ನಿಷೇಧ ಕಾಯ್ದೆ ವಿಧಾನಮಂಡಲದಲ್ಲಿ ಸರ್ವಾನುಮತದಿಂದ ಪಾಸ್ ಮಾಡಲಾಗಿದೆ. ಇಂದಿನ ದಿನವನ್ನು ಕಾಯ್ದೆಯ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಲಾಗಿತ್ತು. ವಿರೋಧ ಪಕ್ಷದವರು ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡದೇ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಅವರ ಕಾಲದಲ್ಲಿಯೇ ಈ ಕಾಯ್ದೆಯ ರಚನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಾನೂನು ಸಚಿವರ ಪರಿಶೀಲನೆಯ ನಂತರ ಸಚಿವ ಸಂಪುಟದಲ್ಲಿ ಕಾಯ್ದೆಯನ್ನು ಮಂಡಿಸಲು ಸ್ವತ: ಸಿದ್ದರಾಮಯ್ಯನವರೇ ಒಪ್ಪಿಗೆ ನೀಡಿದ್ದರು. ಸಚಿವ ಸಂಪುಟದಲ್ಲಿ ಮಂಡಿಸಲು ಒಪ್ಪಿಗೆ ನೀಡುವುದೆಂದರೆ ಕಾಯ್ದೆಯನ್ನು ಒಪ್ಪಿದಂತೆಯೇ ಅಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ನಂತರ ವಿಧಾನಮಂಡಲದಲ್ಲಿ ಅದೇ ಕಾಯ್ದೆಗೆ ಅವರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ನ ದ್ವಿಮುಖ ನೀತಿಯನ್ನು ತೋರುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕಾರಣ : ಯಡಿಯೂರಪ್ಪನವರು ಈ ಕಾಯ್ದೆಯ ಕರಡನ್ನು ಸಿದ್ಧಪಡಿಸಿದ್ದಲ್ಲ. ಮನವಿಯನ್ನು ಅವರು ನೀಡಿದ್ದರೂ ಕಾನೂನು ಆಯೋಗಕ್ಕೆ ಕಳಿಸಿದರು. 2014 ರಲ್ಲಿ ಆಯೋಗದಿಂದ ವರದಿ ಬಂದ ನಂತರ ನಂತರ ಕಾಂಗ್ರೆಸ್ ನವರು ಕರಡನ್ನು ಸಿದ್ಧಪಡಿಸಿದ್ದರು. ಆಯೋಗದ ವರದಿಯನ್ನು ನಿರಾಕರಿಸಿ ಕಾಯ್ದೆಯನ್ನು ವಿರೋಧಿಸಲು ಕಾಂಗ್ರೆಸ್ ಬಳಿ ಮೂರು ವರ್ಷದ ಅವಧಿಯಿತ್ತು. ವರದಿಯನ್ನು ಅನುಮೋದಿಸಿ ಕರಡು ಕಾಯ್ದೆಯನ್ನೂ ಸಿದ್ಧಪಡಿಸಿ ಸಚಿವ ಸಂಪುಟದಲ್ಲಿ ಮಂಡಿಸುವವರೆಗಿನ ಎಲ್ಲ ಪ್ರಕ್ರಿಯೆಗಳನ್ನೂ ಕೈಗೊಂಡಿದ್ದರು. ಆಗ ಕಾಯ್ದೆಯನ್ನು ಬೆಂಬಲಿಸಿದ್ದ ಕಾಂಗ್ರೆಸ್ ನವರು ಈಗ ಕೇವಲ ವೋಟ್ ಬ್ಯಾಂಕ್ ಹಾಗೂ ರಾಜಕಾರಣಕ್ಕಾಗಿ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ನ ಎಸ್ ಸಿ ಎಸ್ ಟಿ ವಿರೋಧಿ ನಿಲುವು: ಕಾಂಗ್ರೆಸ್ ಪಕ್ಷದವರು ಮತಾಂತರ ನಿಷೇಧ ಕಾಯ್ದೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜನತೆ ಅವರ ತಂತ್ರಗಳನ್ನು ಗಮನಿಸುತ್ತಿದ್ದಾರೆ. ಎಸ್ ಸಿ ಎಸ್ ಟಿ ವಿರೋಧಿ ನಿಲುವನ್ನು ಕಾಂಗ್ರೆಸ್ ಇಂದು ಸದನದಲ್ಲಿ ಪ್ರದರ್ಶಿಸಿದೆ. ಈ ಸಮುದಾಯಕ್ಕೆ ಹೆಚ್ಚಿನ ರಕ್ಷಣೆ ಕೊಡುವ ಕೆಲಸವನ್ನು ಕಾಂಗ್ರೆಸ್ ಈ ಮೂಲಕ ವಿರೋಧಿಸುತ್ತಿದೆ. ಆರ್ಟಿಕಲ್ 46 ನಲ್ಲಿ ಕಾನೂನನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದಾಗಿ ಸಂವಿಧಾನದಲ್ಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಬಹುಮತದ ಕೊರತೆಯಿರುವುದರಿಂದ ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇದ ಕಾಯ್ದೆ ಪಾಸ್ ಆಗುವ ವಿಶ್ವಾಸವಿದೆಯೇ ಎಂಬುದಕ್ಕೆ ಪ್ರತಿಕ್ರಯಿಸಿ ಇಂದಿನ ಬೆಳವಣಿಗೆಗಳಿಂದ ಪರಿಷತ್ತಿನ ಸದಸ್ಯರ ಭಾವನೆಗಳು ಬದಲಾಗಿ ಮಸೂದೆಗೆ ಅಂಗೀಕಾರ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಒಮಿಕ್ರಾನ್ ತಡೆಗೆ ಸಕಲ ಸಿದ್ಧತೆ : ಒಮಿಕ್ರಾನ್ ತಡೆಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಕೇಂದ್ರ ಹಾಗೂ ರಾಜ್ಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಒಮಿಕ್ರಾನ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಆಸ್ಪತ್ರೆ, ಬೆಡ್, ಆಕ್ಸಿಜನ್ ಹಾಗೂ ಮೂಲಸೌಕರ್ಯಗಳ ಪೂರೈಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಕಿತ್ತೂರು ಅರಮನೆ ಪ್ರತಿರೂಪ ನಿರ್ಮಾಣ: ಡಿಪಿಆರ್ ಸಲ್ಲಿಸಲು ಮುಖ್ಯಮಂತ್ರಿ ಸೂಚನೆ
Next: ಮತಾಂತರ ನಿಷೇಧ ಕಾಯ್ದೆ; ಅಧಿವೇಶನದಲ್ಲೇ ಮಂಗಳಾರತಿ ಮಾಡಿಸಿಕೊಂಡ ಕಾಂಗ್ರೆಸ್ ನಾಯಕರು

Related Stories

ಬೆಂಗಳೂರಿನ ಜಾರಿ ನಿರ್ದೇಶನಾಲಯ ಕಚೇರಿಯ ಪ್ರವೇಶದ್ವಾರ — ಸಂಗ್ರಹ ಚಿತ್ರ
  • ಅಪರಾಧ
  • ಕರ್ನಾಟಕ
  • ಬೆಳಗಾವಿ

ಬೆಳಗಾವಿ ಹೂಡಿಕೆ ವಂಚನೆ ಪ್ರಕರಣ: ₹427.16 ಕೋಟಿ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದ ಇಡಿ

The Bengaluru Live October 31, 2026 1:11 PM
ಕರ್ನಾಟಕದ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ಭಾವಚಿತ್ರ.
  • ಬೆಂಗಳೂರು ನಗರ
  • ಕರ್ನಾಟಕ
  • ಬೆಳಗಾವಿ
  • ರಾಜಕೀಯ

ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ; ಸಿಎಂ ಸಂತಾಪ

The Bengaluru Live October 30, 2026 10:30 AM
ಅಕ್ಟೋಬರ್ 27ರಂದು ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಬಾಸ್ಕೆಟ್‌ಬಾಲ್ ಆಡುತ್ತಿರುವ ಕೆಡೆಟ್‌ಗಳು.
  • ಕರ್ನಾಟಕ
  • ಕ್ರೀಡೆ
  • ಬೆಳಗಾವಿ

ಬೆಳಗಾವಿಯಲ್ಲಿ ಐದು ಮಿಲಿಟರಿ ಶಾಲೆಗಳ 175 ಕೆಡೆಟ್‌ಗಳ ಕ್ರೀಡಾ–ಶೈಕ್ಷಣಿಕ ಸ್ಪರ್ಧೆ

The Bengaluru Live October 27, 2026 7:30 PM

Latest Post

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ ಗಾಳಿಯಂತ್ರಗಳ ಚಿತ್ರವಿರುವ ಕ್ರೆಡಲ್ ಹಿನ್ನೆಲೆಯ ಮುಂದೆ ಹಾರ ಧರಿಸಿದ ಪೇಟಧಾರಿ ವ್ಯಕ್ತಿ ಮತ್ತು ಗುಲಾಬಿ ಸೀರೆಯುಟ್ಟ ಮಹಿಳೆ ಉಡುಗೊರೆ ವಿನಿಮಯ ಮಾಡುತ್ತಿರುವುದು
  • ಕರ್ನಾಟಕ

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ

November 21, 2026 9:40 AM
ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್ ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್

November 21, 2026 9:36 AM
ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

November 21, 2026 2:34 AM
₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಲಿ ಜಾಕೆಟ್ ಧರಿಸಿ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ, 20-11 ದಿನಾಂಕದ ಕನ್ನಡ ವೇದಿಕೆ ಬ್ಯಾನರ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ

November 21, 2026 2:28 AM
ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ ಕರ್ನಾಟಕ ಸರ್ಕಾರದ ಲಾಂಛನವಿರುವ ಮರದ ಹೊದಿಕೆಯ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಬಳಿ ಕುಳಿತಿರುವ ಸಮವಸ್ತ್ರಧಾರಿ ಹಿರಿಯ ಪೊಲೀಸ್ ಅಧಿಕಾರಿಗಳು
  • ಬೆಂಗಳೂರು ನಗರ

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ: ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಶಿವಕುಮಾರ್ ಎಚ್ಚರಿಕೆ

November 20, 2026 10:24 PM
‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ ಸಭಾಂಗಣದಲ್ಲಿ ಉದ್ದನೆಯ ಮೇಜುಗಳ ಸುತ್ತ ಕುಳಿತಿರುವ ಅಧಿಕಾರಿಗಳು, ನಗರ ಯೋಜನಾ ಸಲಹೆಗಾರರು ಮತ್ತು ನಾಗರಿಕ ಸಂಸ್ಥೆಗಳ ಪ್ರತಿನಿಧಿಗಳು
  • ಬೆಂಗಳೂರು ನಗರ

‘ಬಜೆಟ್ ಟು ಆಕ್ಷನ್’ ಯೋಜನೆಗಳ ಪ್ರಗತಿ ಪರಿಶೀಲನೆ: ಜಿಬಿಎ ಕ್ರಿಯಾ ಯೋಜನೆಯ 518 ಹಾಗೂ ತಜ್ಞರು ಪಟ್ಟಿ ಮಾಡಿದ 118 ಯೋಜನೆಗಳ ಪರಿಶೀಲಿಸಿದ ಬೆಂಗಳೂರು ಉತ್ತರ ನಗರ ಪಾಲಿಕೆ

November 20, 2026 9:35 PM

ನೀವು ತಪ್ಪಿಸಿಕೊಂಡಿರಬಹುದು

ಗಾಳಿಯಂತ್ರಗಳ ಚಿತ್ರವಿರುವ ಕ್ರೆಡಲ್ ಹಿನ್ನೆಲೆಯ ಮುಂದೆ ಹಾರ ಧರಿಸಿದ ಪೇಟಧಾರಿ ವ್ಯಕ್ತಿ ಮತ್ತು ಗುಲಾಬಿ ಸೀರೆಯುಟ್ಟ ಮಹಿಳೆ ಉಡುಗೊರೆ ವಿನಿಮಯ ಮಾಡುತ್ತಿರುವುದು
  • ಕರ್ನಾಟಕ

ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ

The Bengaluru Live November 21, 2026 9:40 AM
ನೀಲಿ ಜಾಕೆಟ್ ಮತ್ತು ಕೆಂಪು ಶಲ್ಯ ಧರಿಸಿ, ಹೂಗಳಿಂದ ಅಲಂಕರಿಸಿದ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಅಧಿಕಾರಿಗಳು ನಿಂತಿದ್ದಾರೆ
  • ಕರ್ನಾಟಕ

ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್

The Bengaluru Live November 21, 2026 9:36 AM
ಟೆಂಟ್‌ನ ಕೆಳಗೆ ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ, ಹಿಂದೆ ಭಾವಚಿತ್ರಗಳ ಬ್ಯಾನರ್ ಇರುವಾಗ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ ನೀಲಿ ಜಾಕೆಟ್ ಧರಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ

The Bengaluru Live November 21, 2026 2:34 AM
ನೀಲಿ ಜಾಕೆಟ್ ಧರಿಸಿ, ಹೂಗಳಿಂದ ಅಲಂಕರಿಸಿದ ಪೀಠದ ಬಳಿ, 20-11 ದಿನಾಂಕದ ಕನ್ನಡ ವೇದಿಕೆ ಬ್ಯಾನರ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ

The Bengaluru Live November 21, 2026 2:28 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕದ ಬ್ಯಾಟರಿ ಎನರ್ಜಿ ಸ್ಟೋರೇಜ್ ಮಾದರಿ ಅಧ್ಯಯನ: ಕ್ರೆಡಲ್‌ಗೆ ಪಂಜಾಬ್ ನಿಯೋಗ ಭೇಟಿ, ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ
  • ನ.23ರಿಂದ 25ರವರೆಗೆ ಜಪಾನ್ ಪ್ರವಾಸ: ನಗರ ಯೋಜನೆ ಅಧ್ಯಯನ, ಹೂಡಿಕೆ ಆಕರ್ಷಣೆಗೆ ನಿಯೋಗ ಮುನ್ನಡೆಸಲಿರುವ ಸಿಎಂ ಶಿವಕುಮಾರ್
  • ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ: ಲಗ್ಗೆರೆಯಲ್ಲಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಶಿವಕುಮಾರ್, ರಾಜರಾಜೇಶ್ವರಿ ನಗರದಲ್ಲಿ ₹441 ಕೋಟಿ ಕಾಮಗಾರಿ
  • ₹16,000 ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಪಂಚಾಯತ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಶಿವಕುಮಾರ್: ಅನುದಾನ ದುರ್ಬಳಕೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ
©Copyright 2025 The Bengaluru Live All rights reserved. | MoreNews by AF themes.