Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಗದಗ
  • ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ : ಡಾ. ಕೆ. ಸುಧಾಕರ್‌
  • ಗದಗ

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ : ಡಾ. ಕೆ. ಸುಧಾಕರ್‌

The Bengaluru Live May 22, 2021 7:30 PM
ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ : ಡಾ. ಕೆ. ಸುಧಾಕರ್‌

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ : ಡಾ. ಕೆ. ಸುಧಾಕರ್‌

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಗದಗ ಮೆಡಿಕಲ್‌ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಕ್ಕೆ ಸೂಚನೆ

ಗದಗ:

ಹಳೇ ಮೈಸೂರು ಮತ್ತು ಬೆಂಗಳೂರು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಹಿಂದುಳಿದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವೈದ್ಯರು ಮತ್ತು ತಜ್ಞರ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಲಾಗುವುದು. ಕೆಲ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಕೋವಿಡ್‌ ಪರಿಸ್ಥಿತಿಐನ್ನು ಶುಕ್ರವಾರ ಪರಾಮರ್ಶೆ ನಡೆಸಿದ ಅವರು ಈ ಭರವಸೆ ನೀಡಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಮತ್ತು ತಜ್ಞರ ಹುದ್ದೆ ಖಾಲಿಯಿವೆ. ಅವುಗಳ ನೇಂಕಕ್ಕೆ ಆದ್ಯತೆ ನೀಡಲಾಗುವುದು. ಇಲ್ಲವಾದಲ್ಲಿ ಗ್ರಾಮೀಣ ಭಾಗದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹಿಂತಿರುಗಿದ ಕೂಡಲೇ ಈ ಬಗ್ಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ತಾಲ್ಲೂಕು ಆಸ್ಪತ್ರೆ ಆಗಿದ್ದರೂ ಇನ್ನೂ ೩೦ ಹಾಸಿಗೆಗಳ ಆಸ್ಪತ್ರೆ ಆಗಿರುವ ಶಿರಹಟ್ಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ ಆರು ವೆಂಟಿಲೇಟರ್‌ ಮತ್ತು ಐವತ್ತು ಆಕ್ಸಿಜನ್‌ ಹಾಸಿಗೆಗಳನ್ನು ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೆಡಿಕಲ್‌ ಕಾಲೇಜು ಆಸ್ಪತ್ರೆಯ ನಿರ್ಮಾಣ ಕಾರ್ಯ ವಿಳಂಬ ಆಗುತ್ತಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಕೆವಿಆರ್‌ ಕಂಪನಿ ಮುಖ್ಯಸ್ಥರ ಜತೆ ಶೀಘ್ರದಲ್ಲಿ ವಿಡಿಯೋ ಸಂವಾದ ನಡೆಸಲಾಗುವುದು. ಆಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

Dr Sudhakar in Gadag1

ಹೆಚ್ಚುವರಿಯಾಗಿ ಆಕ್ಸಿಜನ್‌ ಕಾನ್ಸಟ್ರೇಟರ್ಸ್‌ಗಳನ್ನು ಜಿಲ್ಲೆಗೆ ಕಳುಹಿಸಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಮ್ಸ್‌ನಲ್ಲಿ ೨೭೦ ವೈದ್ಯರು ಇದ್ದಾರೆ. ೮೭ ಬೋಧಕ ಹುದ್ದೆಗಳು ಖಾಲಿ ಇವೆ. ಅವುಗಳ ನೇಮಕಕ್ಕೆ ಎರಡು ವಾರದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ನೋಂದಣಿ ಆಗಬೇಕು ಎಲ್ಲಾ ೪೫೦ ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲು ಇಡಲಾಗಿದೆ. ಕೋವಿಡ್‌ ಯೇತರ ರೋಗಗಳ ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಅವರಿಗೆ ಸಾಸ್ಟ್‌ನಿಂದ ನೋಂದಣಿ ಆಗದಿದ್ದರೂ ನೆರವು ನೀಡಬೇಕು. ಖಾಸಗಿ ೫೪ ಆಸ್ಪತ್ರೆಗಳ ಪೈಕಿ ೮ ಆಸ್ಪತ್ರೆಗಳು ಮಾತ್ರ ಸಾಸ್ಟ್‌ನಲ್ಲಿ ನೋಂದಣಿ ಆಗಿರುವುದರಿಂದ ಉಳಿದವುಗಳನ್ನು ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದರು.

ಆಕ್ಸಿಜನ್‌ನ ನ್ಯಾಯಸಮ್ಮತ ಬಳಕೆ ಆಗಬೇಕು. ಆಡಿಟ್‌ ಮಾಡಬೇಕು, ಅದಕ್ಕೆ ತಜ್ಞರಿರುವ ಸಮಿತಿ ರಚಿಸಬೇಕು. ಈ ರೀತಿ ಮಾಡುತ್ತಿರುವುದರಿಂದ ಆಕ್ಸಿಜನ್‌ ಮೇಲಿನ ಒತ್ತಡ ಕಡಿಮೆ ಆಗಲಿದೆ. ಜಿಲ್ಲೆಗೆ ೧೫ ಕೆಎಲ್‌ ಆಕ್ಸಿಜನ್‌ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕೊರತೆ ನಿವಾರಣೆ ಆದಂತಾಗುತ್ತದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ವೆಂಟಿಲೇಟರ್‌ಗಳನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಕೋವಿಡ್‌ ಕೇರ್‌ ಸೆಂಟರ್‌ ದಾಖಲು ಕಡ್ಡಾಯ

ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಕೇರೆ ಸೆಂಟರ್‌ಗಳಿಗೆ ದಾಖಲು ಮಾಡಬೇಕು. ಪಿಎಚ್‌ಸಿ ವ್ಯಾಪ್ತಿಯಲ್ಲಿ ಒಂದು ಸಿಸಿಸಿ ಇರುವಂತೆ ನೋಡಿಕೊಳ್ಳಬೇಕು. ಪೌಷ್ಟಿಕ ಆಹಾರ, ಶುಚಿತ್ವಕ್ಕೆ ಒತ್ತು ನೀಡಬೇಕು. ಟೆಸ್ಟ್‌ ವರದಿಗಳು ಅದೇ ದಿನ ಬರುವಂತೆ ಎಚ್ಚರವಹಿಸಬೇಕು. ಸದ್ಯ ೩೬ ಗಂಟೆಗಳಲ್ಲಿ ಸಿಗುತ್ತಿರುವ ಅವಧಿಯನ್ನು ೨೪ ತಾಸಿಗೆ ಇಳಿಸಬೇಕು. ಇದಕ್ಕೆ ಟಾರ್ಗೇಟೆಡ್‌ ಟೆಸ್ಟಿಂಗ್‌ ಮಾಡಬೇಕು. ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆಯಬಾರದು. ಸಿಟಿ ಸ್ಕ್ಯಾನ್‌ ಮಾಡಿಸಿಕೊಂಡವರಿಗೂ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಹಣ ಪಡೆಯಬಾರದು. ಒಂದು ವೇಳೆ ಆ ರೀತಿ ಹಣ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ಶಿವಕುಮಾರ್‌ ಉದಾಸಿ, ಗದ್ದಿಗೌಡರ್‌, ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ್‌, ಶಾಸಕರಾದ ರಾಮಣ್ಣ ರಮಣ್‌, ಎಂಎಲ್ಸಿ ಸಂಕನೂರ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಕಾಂಗ್ರೆಸ್ “ಟೂಲ್‍ಕಿಟ್” ನಕಲಿ ಅಲ್ಲ; ದೇಶದ ವಿರುದ್ಧ ಅಪಪ್ರಚಾರ ಪೂರ್ವಯೋಜಿತ ಕುಕೃತ್ಯ- ಸಿ.ಟಿ.ರವಿ
Next: ಹಾಸನ ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ಅವಲೋಕನ ಮಾಡಿದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ

Related Stories

ಎಚ್.ಕೆ. ಪಾಟೀಲರ ಪತ್ರ ಉಲ್ಲೇಖಿಸಿ 27 ತಾಲೂಕುಗಳ ಬರ ಮೌಲ್ಯಮಾಪನ ಪ್ರಶ್ನಿಸಿದ ಜೆಡಿಎಸ್
  • ಕರ್ನಾಟಕ
  • ಗದಗ
  • ರಾಜಕೀಯ

ಎಚ್.ಕೆ. ಪಾಟೀಲರ ಪತ್ರ ಉಲ್ಲೇಖಿಸಿ 27 ತಾಲೂಕುಗಳ ಬರ ಮೌಲ್ಯಮಾಪನ ಪ್ರಶ್ನಿಸಿದ ಜೆಡಿಎಸ್

The Bengaluru Live September 21, 2026 3:44 PM
ಬರ ಮೌಲ್ಯಮಾಪನ ಸಮರ್ಥಿಸಿದ ದಿನೇಶ್ ಗೂಳಿಗೌಡ; ರಾಜೀನಾಮೆ ನೀಡದಂತೆ ಎಚ್.ಕೆ. ಪಾಟೀಲರಿಗೆ ಮನವಿ
  • ಕರ್ನಾಟಕ
  • ಗದಗ
  • ರಾಜಕೀಯ

ಬರ ಮೌಲ್ಯಮಾಪನ ಸಮರ್ಥಿಸಿದ ದಿನೇಶ್ ಗೂಳಿಗೌಡ; ರಾಜೀನಾಮೆ ನೀಡದಂತೆ ಎಚ್.ಕೆ. ಪಾಟೀಲರಿಗೆ ಮನವಿ

The Bengaluru Live September 21, 2026 2:49 PM
Suspicion of treasure hunt near ancient Basaveshwara temple in Lakkundi, villagers worried
  • ಗದಗ
  • ಬೆಂಗಳೂರು ನಗರ

ಲಕ್ಕುಂಡಿಯ ಪುರಾತನ ಬಸವೇಶ್ವರ ದೇವಾಲಯದ ಬಳಿ ನಿಧಿ ಹುಡುಕಾಟ ಶಂಕೆ, ಗ್ರಾಮಸ್ಥರಲ್ಲಿ ಆತಂಕ

The Bengaluru Live January 15, 2026 11:10 AM

Latest Post

ಬೆಂಗಳೂರು ಉತ್ತರ ನಗರ ಪಾಲಿಕೆಯ ಮಂಗಳವಾರದ ಘನತ್ಯಾಜ್ಯ ಫೋನ್-ಇನ್‌ನಲ್ಲಿ 10 ಅಹವಾಲು ದಾಖಲು; ಒಂದು ಬಗೆಹರಿಕೆ ಫೋನ್-ಇನ್ ಕಾರ್ಯಕ್ರಮದ ವೇಳೆ ಸಭೆ ಮೇಜಿನ ಬಳಿ ಟೇಬಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮತ್ತು ಪಕ್ಕದಲ್ಲಿ ಕುಳಿತಿರುವ ಮಹಿಳೆ
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆಯ ಮಂಗಳವಾರದ ಘನತ್ಯಾಜ್ಯ ಫೋನ್-ಇನ್‌ನಲ್ಲಿ 10 ಅಹವಾಲು ದಾಖಲು; ಒಂದು ಬಗೆಹರಿಕೆ

November 17, 2026 1:53 PM
ವಿಧಾನಸೌಧದಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನಕ್ಕೆ ಸಿಎಂ ಶಿವಕುಮಾರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಓಂ ಬಿರ್ಲಾ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಬೆಂಗಳೂರು ನಗರ

ವಿಧಾನಸೌಧದಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನಕ್ಕೆ ಸಿಎಂ ಶಿವಕುಮಾರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ

November 17, 2026 1:49 PM
ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಅರೆವಾಹಕ, ಜೈವಿಕ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಲು ಕರ್ನಾಟಕ ಸಜ್ಜು: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಸಿಎಂ ಶಿವಕುಮಾರ್ ನೀಲಿ ವೇದಿಕೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚೌಕಟ್ಟಿನ ಸ್ಮರಣಿಕೆ ಹಿಡಿದಿರುವುದು
  • ಕರ್ನಾಟಕ
  • ಬೆಂಗಳೂರು ನಗರ

ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಅರೆವಾಹಕ, ಜೈವಿಕ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಲು ಕರ್ನಾಟಕ ಸಜ್ಜು: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಸಿಎಂ ಶಿವಕುಮಾರ್

November 17, 2026 12:02 PM
ನವೆಂಬರ್ 17ರವರೆಗೆ ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಮಳೆ ಶೇ.44ರಷ್ಟು ಕಡಿಮೆ: ಕೆಎಸ್‌ಎನ್‌ಡಿಎಂಸಿ ಮಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನ ಹಾಗೂ ಕೊಡೆ ಹಿಡಿದ ಮಹಿಳೆ; ಸಾಂದರ್ಭಿಕ ಸಂಗ್ರಹ ಚಿತ್ರ
  • ಕರ್ನಾಟಕ

ನವೆಂಬರ್ 17ರವರೆಗೆ ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಮಳೆ ಶೇ.44ರಷ್ಟು ಕಡಿಮೆ: ಕೆಎಸ್‌ಎನ್‌ಡಿಎಂಸಿ

November 17, 2026 12:00 PM
29ನೇ ಬೆಂಗಳೂರು ಟೆಕ್ ಸಮ್ಮಿಟ್‌ಗೆ ಸಿಎಂ ಶಿವಕುಮಾರ್ ಚಾಲನೆ; 65 ದೇಶಗಳ 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 700 ಭಾಷಣಕಾರರು, 1,000 ಸ್ಟಾರ್ಟ್‌ಅಪ್‌ಗಳು ಬೆಂಗಳೂರು ಟೆಕ್ ಸಮ್ಮಿಟ್ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ಗಣ್ಯರು ಹಿತ್ತಾಳೆ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಬೆಂಗಳೂರು ನಗರ

29ನೇ ಬೆಂಗಳೂರು ಟೆಕ್ ಸಮ್ಮಿಟ್‌ಗೆ ಸಿಎಂ ಶಿವಕುಮಾರ್ ಚಾಲನೆ; 65 ದೇಶಗಳ 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 700 ಭಾಷಣಕಾರರು, 1,000 ಸ್ಟಾರ್ಟ್‌ಅಪ್‌ಗಳು

November 17, 2026 11:47 AM
ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂಆರ್‌ಒ ಘಟಕಕ್ಕೆ ದೇವನಹಳ್ಳಿಯಲ್ಲಿ ಎಂ.ಬಿ. ಪಾಟೀಲ ಭೂಮಿಪೂಜೆ; 2,100 ನೇರ ಉದ್ಯೋಗ ನಿರೀಕ್ಷೆ ಶಂಕುಸ್ಥಾಪನೆ ಸಮಾರಂಭದ ವೇದಿಕೆಯ ಮುಂದೆ ಚಿನ್ನದ ಬಣ್ಣದ ಸಲಿಕೆಗಳಿಂದ ಮಣ್ಣು ಅಗೆಯುತ್ತಿರುವ ಸಚಿವ ಎಂ.ಬಿ. ಪಾಟೀಲ ಮತ್ತು ಇತರ ಗಣ್ಯರು
  • ಕರ್ನಾಟಕ

ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂಆರ್‌ಒ ಘಟಕಕ್ಕೆ ದೇವನಹಳ್ಳಿಯಲ್ಲಿ ಎಂ.ಬಿ. ಪಾಟೀಲ ಭೂಮಿಪೂಜೆ; 2,100 ನೇರ ಉದ್ಯೋಗ ನಿರೀಕ್ಷೆ

November 17, 2026 10:09 AM

ನೀವು ತಪ್ಪಿಸಿಕೊಂಡಿರಬಹುದು

ಫೋನ್-ಇನ್ ಕಾರ್ಯಕ್ರಮದ ವೇಳೆ ಸಭೆ ಮೇಜಿನ ಬಳಿ ಟೇಬಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮತ್ತು ಪಕ್ಕದಲ್ಲಿ ಕುಳಿತಿರುವ ಮಹಿಳೆ
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆಯ ಮಂಗಳವಾರದ ಘನತ್ಯಾಜ್ಯ ಫೋನ್-ಇನ್‌ನಲ್ಲಿ 10 ಅಹವಾಲು ದಾಖಲು; ಒಂದು ಬಗೆಹರಿಕೆ

The Bengaluru Live November 17, 2026 1:53 PM
ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಓಂ ಬಿರ್ಲಾ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಬೆಂಗಳೂರು ನಗರ

ವಿಧಾನಸೌಧದಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನಕ್ಕೆ ಸಿಎಂ ಶಿವಕುಮಾರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ

The Bengaluru Live November 17, 2026 1:49 PM
ನೀಲಿ ವೇದಿಕೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚೌಕಟ್ಟಿನ ಸ್ಮರಣಿಕೆ ಹಿಡಿದಿರುವುದು
  • ಕರ್ನಾಟಕ
  • ಬೆಂಗಳೂರು ನಗರ

ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಅರೆವಾಹಕ, ಜೈವಿಕ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಲು ಕರ್ನಾಟಕ ಸಜ್ಜು: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಸಿಎಂ ಶಿವಕುಮಾರ್

The Bengaluru Live November 17, 2026 12:02 PM
ಮಳೆಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನ ಹಾಗೂ ಕೊಡೆ ಹಿಡಿದ ಮಹಿಳೆ; ಸಾಂದರ್ಭಿಕ ಸಂಗ್ರಹ ಚಿತ್ರ
  • ಕರ್ನಾಟಕ

ನವೆಂಬರ್ 17ರವರೆಗೆ ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಮಳೆ ಶೇ.44ರಷ್ಟು ಕಡಿಮೆ: ಕೆಎಸ್‌ಎನ್‌ಡಿಎಂಸಿ

The Bengaluru Live November 17, 2026 12:00 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರು ಉತ್ತರ ನಗರ ಪಾಲಿಕೆಯ ಮಂಗಳವಾರದ ಘನತ್ಯಾಜ್ಯ ಫೋನ್-ಇನ್‌ನಲ್ಲಿ 10 ಅಹವಾಲು ದಾಖಲು; ಒಂದು ಬಗೆಹರಿಕೆ
  • ವಿಧಾನಸೌಧದಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ವಲಯ ಸಮ್ಮೇಳನಕ್ಕೆ ಸಿಎಂ ಶಿವಕುಮಾರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ
  • ಕೃತಕ ಬುದ್ಧಿಮತ್ತೆ, ಆಳ ತಂತ್ರಜ್ಞಾನ, ಅರೆವಾಹಕ, ಜೈವಿಕ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಲು ಕರ್ನಾಟಕ ಸಜ್ಜು: ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಸಿಎಂ ಶಿವಕುಮಾರ್
  • ನವೆಂಬರ್ 17ರವರೆಗೆ ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಮಳೆ ಶೇ.44ರಷ್ಟು ಕಡಿಮೆ: ಕೆಎಸ್‌ಎನ್‌ಡಿಎಂಸಿ
©Copyright 2025 The Bengaluru Live All rights reserved. | MoreNews by AF themes.