ಬೆಂಗಳೂರಿನಲ್ಲಿ ಅಸ್ಸಾಂ ಹೌಸ್ ಉದ್ಘಾಟನೆ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ. ಚಿತ್ರ: ಹಿಮಂತ ಬಿಸ್ವ ಶರ್ಮಾ / X
ಬೆಂಗಳೂರು: ಅಸ್ಸಾಂನ ವಿದ್ಯಾರ್ಥಿಗಳು, ವೈದ್ಯಕೀಯ ಸೇವೆ ಅರಸಿ ಬರುವ ಕುಟುಂಬಗಳು ಹಾಗೂ ವೃತ್ತಿಪರರಿಗೆ ನೆರವಾಗುವ ಉದ್ದೇಶದಿಂದ ನಿರ್ಮಿಸಿರುವ ನೂತನ ಅಸ್ಸಾಂ ಹೌಸ್ ಅನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬೆಂಗಳೂರಿನಲ್ಲಿ ಉದ್ಘಾಟಿಸಿದ್ದಾರೆ.
16,000 ಚದರ ಮೀಟರ್ ವ್ಯಾಪ್ತಿಯ ಈ ಸೌಲಭ್ಯವನ್ನು ₹71 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಉದ್ಘಾಟನೆಯ ಕುರಿತು ಎಕ್ಸ್ನಲ್ಲಿ ಹಂಚಿಕೊಂಡ ಮಾಹಿತಿಯಲ್ಲಿ ಶರ್ಮಾ ತಿಳಿಸಿದ್ದಾರೆ.
A beautiful new space built with care and purpose.
Himanta Biswa Sarma — October 16, 2026
I inaugurated the new Assam House in Bengaluru today, a modern facility spread across 16,000 sq. m. and built at a cost of over ₹71 cr.
A student pursuing their dreams, a family seeking medical care or a professional away from home, this space is designed to offer comfort, care and a sense of belonging for our people.
Himanta Biswa Sarma / X
A beautiful new space built with care and purpose.
I inaugurated the new Assam House in Bengaluru today, a modern facility spread across 16,000 sq. m. and built at a cost of over ₹71 cr.
A student pursuing their dreams, a family seeking medical care or a professional away from home, this space is designed to offer comfort, care and a sense of belonging for our people.
ತಮ್ಮ ಊರಿನಿಂದ ದೂರವಿರುವ ಅಸ್ಸಾಂನ ಜನರಿಗೆ ಅನುಕೂಲ, ಆರೈಕೆ ಮತ್ತು ತಮ್ಮವರ ನಡುವಿರುವ ಭಾವನೆ ಒದಗಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮುಂದಾಗಿರುವ ವಿದ್ಯಾರ್ಥಿಯಾಗಿರಲಿ, ವೈದ್ಯಕೀಯ ಸೇವೆ ಅರಸಿ ಬಂದಿರುವ ಕುಟುಂಬವಾಗಿರಲಿ ಅಥವಾ ಮನೆಯಿಂದ ದೂರವಿರುವ ವೃತ್ತಿಪರರಾಗಿರಲಿ, ನಮ್ಮ ಜನರಿಗೆ ಅನುಕೂಲ, ಆರೈಕೆ ಮತ್ತು ತಮ್ಮವರ ನಡುವಿರುವ ಭಾವನೆಯನ್ನು ಒದಗಿಸುವಂತೆ ಈ ಸ್ಥಳವನ್ನು ವಿನ್ಯಾಸಗೊಳಿಸಲಾಗಿದೆ,” ಎಂದು ಶರ್ಮಾ ತಿಳಿಸಿದ್ದಾರೆ.