Home ಬೆಂಗಳೂರು ನಗರ ಮಲ್ಲೇಶ್ವರದಲ್ಲಿ ಬನಶಂಕರಿ ಜಾತ್ರೆ, ಅಮ್ಮನವರಿಗೆ ಡಿಸಿಎಂ ಪೂಜೆ

ಮಲ್ಲೇಶ್ವರದಲ್ಲಿ ಬನಶಂಕರಿ ಜಾತ್ರೆ, ಅಮ್ಮನವರಿಗೆ ಡಿಸಿಎಂ ಪೂಜೆ

51
0

ಬೆಂಗಳೂರು:

ನಗರದ ಮಲ್ಲೇಶ್ವರ ಹತ್ತನೇ ಕ್ರಾಸ್‌ನಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಗುರುವಾರ ವಿಶೇಷ ಜಾತ್ರಾ ಮಹೋತ್ಸವ ಹಾಗೂ ಪೂಜಾ ಕೈಂಕರ್ಯಗಳು ನೆರೆವೇರಿದವು.

ಈ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

WhatsApp Image 2021 01 28 at 16.28.11

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ; ರಾಜ್ಯವನ್ನು ತೀವ್ರವಾಗಿ ಕಾಡಿದ ಕೋವಿಡ್‌ ಮಹಾಮಾರಿಯಿಂದ ಈಗಷ್ಟೇ ಹೊರಬೀಳುತ್ತಿದ್ದೇವೆ. ಇನ್ನೇನು ಕೆಲ ದಿನಗಳಲ್ಲಿಯೇ ಎಲ್ಲರಿಗೂ ಲಸಿಕೆಯೂ ಸಿಗಲಿದೆ. ಶ್ರೀ ಬನಶಂಕರಿ ಅಮ್ಮನವರ ಕೃಪೆಯಿಂದ ಈ ಎಲ್ಲ ಸಂಕಷ್ಟಗಳು ದೂರವಾಗಿ ರಾಜ್ಯದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿದ್ದಾಗಿ ಹೇಳಿದರು.

WhatsApp Image 2021 01 28 at 16.28.12 1

ಜಾತ್ರೆಯ ವಿಶೇಷ ಹಿನ್ನೆಲೆಯಲ್ಲಿ ಅಮ್ಮನವರನ್ನು ಅರ್ಷಕರು ವಿಶೇಷವಾಗಿ ಅಲಂಕಾರ ಮಾಡಿದ್ದರು. ದೇವಾಲಯ ತಳಿರು-ತೋರಣಗಳಿಂದ ಕಂಗೊಳಿಸುತ್ತಿತ್ತು. ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುತ್ತಲೇ ಭಕ್ತರು ಅಮ್ಮನವರ ದರ್ಶನ ಮಾಡಿಕೊಳ್ಳುತ್ತಿದ್ದರು.

LEAVE A REPLY

Please enter your comment!
Please enter your name here