ಬೆಂಗಳೂರು:
ಗಣರಾಜ್ಯೋತ್ಸವ ದಿನದಂದೇ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣಗೆ ಅಗೌರವ ತೋರಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ .
ರಾಯಣ್ಣಅವರ 191 ನೆ ಸರಣೋತ್ಸವದ ಅಂಗವಾಗಿ ನಗರದ ದೇವರಾಜ ಅರಸು ವೃತ್ತದ ಬಳಿ ಇರುವ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಆಡಳಿತಾಧಿಕಾರಿಗೌರವ್ ಗುಪ್ತ ಅವರು ಶೂ ಧರಿಸಿ ನಿಂತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಕ್ಷಮೆ ಕೋರಬೇಕೆಂದು ಹಲವು ಸಂಘಟನೆಗಳು ಆಗ್ರಹಿಸಿದೆ.
ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗಣರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಂದ ಮಾಲಾರ್ಪಣೆ ಮತ್ತು ಪುಷ್ಪನಮನ ಕಾರ್ಯಕ್ರಮವಿತ್ತು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಎಲ್ಲ ಗಣ್ಯರು ಶೂ, ಚಭಲೆ ಬಿಟ್ಟು ಗೌರವ ಸಮರ್ಪಿಸಿದರು. ಆದರೆ, ಗೌರವ್ ಗುಪ್ತ ಅವರು ಶೂ ಹಾಕಿಕೊಂಡು ಅಗೌರವ ತೋರಿಸಿರುವ ಫೋಟೋ ವೈರಲ್ ಆಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.