Home ಬೆಂಗಳೂರು ನಗರ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಲೋಕಾರ್ಪಣೆ

ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಲೋಕಾರ್ಪಣೆ

92
0
Bangalore Metro's extended Purple Line on Mysuru Road inaugurated

ಬೆಂಗಳೂರು:

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದ ವರೆಗಿನ 7.5 ,ಕಿಲೋಮೀಟರ್ ವಿಸ್ತರಿತ ನೇರಳೆ ಮಾರ್ಗವನ್ನು ಬೆಂಗಳೂರಿನಲ್ಲಿಂದು ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್ದಿಪ್ ಸಿಂಗ್ ಪುರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್ , ವಿ ಸೋಮಣ್ಣ, ಎಸ್ . ಟಿ. ಸೋಮಶೇಖರ, ಕೆ. ಗೋಪಾಲಯ್ಯ, ಮುನಿರತ್ನ , ಸಂಸದರಾದ ಪಿ ಸಿ ಮೋಹನ್ ತೇಜಸ್ವಿ ಸೂರ್ಯ, ಶಾಸಕ ಮುನಿರಾಜುಗೌಡ ಉಪಸ್ಥಿತರಿದ್ದರು.

ಮೈಸೂರು ರಸ್ತೆ, ಆರ್ ಆರ್ ನಗರ, ಕೆಂಗೇರಿ, ಕೆಂಗೇರಿ ಉಪನಗರ ಜ್ಞಾನಭಾರತಿ ಬಡಾವಣೆ, ನಾಗರಬಾವಿ ಸೇರಿದಂತೆ ಸೇರಿದಂತೆ ಸುಮಾರು 70 ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ಇದರಿಂದ ನಿತ್ಯ ಅನುಕೂಲವಾಗಲಿದೆ.

ಒಟ್ಟು 7.53 ಕಿ.ಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಮಾರ್ಗವು 1,560 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಎಂಆರ್​ಸಿಎಲ್ ಕಳೆದ ಮೂರು ತಿಂಗಳಿನಿಂದ ಟ್ರಯಲ್ ರನ್ ನಡೆಸಿತ್ತು.ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಕಳೆದ ಆಗಸ್ಟ್ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡಿತ್ತು.

LEAVE A REPLY

Please enter your comment!
Please enter your name here