Home ಕರ್ನಾಟಕ ಮೈಸೂರು ಅತ್ಯಾಚಾರ ಪ್ರಕರಣ: ನಟ ಜಗ್ಗೇಶ್‌ ರಿಂದ ಪೊಲೀಸರಿಗೆ 1 ಲಕ್ಷ ರೂ ಬಹುಮಾನ

ಮೈಸೂರು ಅತ್ಯಾಚಾರ ಪ್ರಕರಣ: ನಟ ಜಗ್ಗೇಶ್‌ ರಿಂದ ಪೊಲೀಸರಿಗೆ 1 ಲಕ್ಷ ರೂ ಬಹುಮಾನ

108
0
Mysore Gang rape: Actor Jaggesh donates Rs 1 lakh for Mysore cops

ಮೈಸೂರು:

ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಇತ್ಯಾರ್ಥಗೊಳಿಸಿರುವ ಪೊಲೀಸರಿಗೆ ಸ್ಯಾಂಡಲ್ ವುಡ್ ನ ನನವರಸ ನಾಯಕ ಜಗ್ಗೇಶ್‌ 1 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಕಾಲೇಜು ವಿಧ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಕಾಮಪಿಪಾಸುಗಳನ್ನು ಬಂಧಿಸಿದ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ.

‘ನಮ್ಮ ರಾಜ್ಯದ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಕಡೆಯಿಂದ ಪ್ರಕರಣ ಭೇದಿಸಿರುವ ನಲ್ಮೆಯ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ನೀಡಲಿದ್ದೇನೆ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ. ರಾಷ್ಟ್ರಕ್ಕೆ ಮಾದರಿ ನಮ್ಮ ಪೊಲೀಸ್‌’ ಎಂದು ಅವರು ಟ್ವೀಟ್‌ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

LEAVE A REPLY

Please enter your comment!
Please enter your name here