Home ಬೆಂಗಳೂರು ನಗರ ರೂಪಾಂತರ ಕೊರೋನಾ ತಡೆಯಲು ಸೂಕ್ತ ಕ್ರಮ ಕೈಗೊಳ್ಳಿ

ರೂಪಾಂತರ ಕೊರೋನಾ ತಡೆಯಲು ಸೂಕ್ತ ಕ್ರಮ ಕೈಗೊಳ್ಳಿ

61
0

ಅಧಿಕಾರಿಗಳಿಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಸೂಚನೆ

ಬೆಂಗಳೂರು:

ಹೊಸ ರೂಪಾಂತರದ ಕೊರೋನಾ ಸೋಂಕು ನಗರದಲ್ಲಿ ಕಾಣಿಸಿಕೊಂಡಿದ್ದರಿಂದ, ಅದು ಹರಡದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಂದು ಎಲ್ಲಾ ವಲಯ ಜಂಟಿ ಆಯುಕ್ತರಿಗೆ ಆಡಳಿತ ಅಧಿಕಾರಿ ಗೌರವ್ ಗುಪ್ತಾ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರೂಪಾಂತರ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು, ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಯಾವ ವಲಯದಲ್ಲಿ ಎಷ್ಟು ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ಪಡೆದ ಗೌರವ್‌ ಗುಪ್ತಾ, ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಯಮಗಳನ್ನು ಪಾಲಿಸಿ ಸರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.

ನಗರದಲ್ಲಿ ರೂಪಾಂತರ ಕೊರೋನಾ ಯಾವ ವಲಯದಲ್ಲಿ ಎಷ್ಟು ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ಪಡೆದ ಆಡಳಿತಗಾರರು, ಸರ್ಕಾರದ ಎಸ್.ಒ.ಪಿ ಪ್ರಕಾರ ನಿಯಮಗಳನ್ನು ಪಾಲನೆ ಮಾಡಿ ಸರಿಯಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

WhatsApp Image 2020 12 30 at 19.23.09

ನಗರದಲ್ಲಿ ನಿನ್ನೆ 17 ಕರೋನಾ ಪ್ರಕರಣ ಹಾಗೂ ಇಂದು 1 ಸೇರಿ 18 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದ್ದು, 54 ಪ್ರಾಥಮಿಕ ಸಂಪರ್ಕಿತರು ಹಾಗೂ 92 ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ/ದ್ವಿತೀಯ ಸಂಪರ್ಕಿತರನ್ನು ಪಾಲಿಕೆ ವತಿಯಿಂದ ಗುರುತಿಸಿರುವ ಹೋಟೆಲ್/ರೆಸಿಡೆನ್ಸಿಗಳಲ್ಲಿ ಸಾಂಸ್ಥಿಕ ಗೃಹದಿಗ್ಬಂಧನದಲ್ಲಿರಿಸಲಾಗಿದೆ. ಬೊಮ್ಮನಹಳ್ಳಿ ವಲಯದ ಅಪಾರ್ಟ್ ಮೆಂಟ್ ನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅಪಾರ್ಟ್ ಮೆಂಟ್ ನಲ್ಲಿಯೇ 33 ಮಂದಿಯನ್ನು ಸಾಂಸ್ಥಿಕ ಗೃಹದಿಗ್ಬಂಧನದಲ್ಲಿರಿಸಲಾಗಿದೆ.

ರೂಪಾಂತರ ಕೊರೋನಾ ಅತ್ಯಂತ ವೇಗವಾಗಿ ಹರಡುವ ಸೋಂಕಾಗಿದ್ದು, ಹೆಚ್ಚು ಮಂದಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಈ ಸಂಬಂಧ ಯಾರು ಅವರ ಸಂಪರ್ಕದಲ್ಲಿದ್ದರು ಎಂಬುದನ್ನು ತ್ವರಿತವಾಗಿ ಪತ್ತೆ ಮಾಡಿ ಕೂಡಲೆ ಪರೀಕ್ಷೆಗೊಳಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜನರು ಆತಂಕಕ್ಕೊಳಗಾಗುವುದನ್ನು ಕಡಿಮೆ ಮಾಡಿ

ರೂಪಾಂತರ ಕೊರೋನಾದಿಂದ ಜನರು ಹೆಚ್ಚು ಭಯಭೀತರಾಗಿದ್ದಾರೆ. ರೂಪಾಂತರ ಕೊರೋನಾ ತ್ವರಿತವಾಗಿ ಹರಡಲಿದೆ. ಆದರೆ ಯಾವುದೇ ಅಪಾಯವಿಲ್ಲ. ಆದ್ದರಿಂದ ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಸರಿಯಾಗಿ ಮಾಸ್ಕ್ ಧರಿಸುವುದು, ಕೈಗಳಿಗೆ ಆಗಿಂದಾಗ್ಗೆ ಸ್ಯಾನಿಟೈಸರ್ ಹಾಕುವುದು ಹಾಗೂ ಕೈಗಳನ್ನು ತೊಳೆಯುವುದು ಮಾಡಬೇಕು. ನಾಗರಿಕರು ಆತಂಕಕ್ಕೊಳಗುವುದನ್ನು ಕಡಿಮೆ ಮಾಡುವ ಸಂಬಂಧ ಹೆಚ್ಚು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ವಲಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ರಾಜೇಂದ್ರ ಚೋಳನ್, ಎಲ್ಲಾ ವಲಯ ಜಂಟಿ ಆಯುಕ್ತರುಗಳಾದ ಪಲ್ಲವಿ, ಅಶೋಕ್, ವೀರಭದ್ರ ಸ್ವಾಮಿ, ರಾಮಕೃಷ್ಣ, ಶಿವಸ್ವಾಮಿ, ವೆಂಕಟಾಚಲಪತಿ, ನರಸಿಂಹಮೂರ್ತಿ, ಮುಖ್ಯ ಆರೋಗ್ಯಾಧಿಕಾರಿ(ಆರೋಗ್ಯ) ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

LEAVE A REPLY

Please enter your comment!
Please enter your name here