Home ಬೆಂಗಳೂರು ನಗರ ಬಿಬಿಎಂಪಿ ಬಜೆಟ್‌ ಮಾ. 27ಕ್ಕೆ ಮಂಡನೆ

ಬಿಬಿಎಂಪಿ ಬಜೆಟ್‌ ಮಾ. 27ಕ್ಕೆ ಮಂಡನೆ

67
0

ಬೆಂಗಳೂರು:

ಬಿಬಿಎಂಪಿ 2021-22ನೇ ಸಾಲಿನ ಆಯವ್ಯಯವನ್ನು ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಶನಿವಾರ ಮಂಡಿಸಲಿದ್ದಾರೆ. ಈ ಸಲ ವಾಸ್ತವಿಕ ಬಜೆಟ್‌ ಮಂಡಿಸುವ ಸಾಧ್ಯತೆಗಳಿವೆ.

ಬಿಬಿಎಂಪಿಯ ಆಸ್ತಿ ತೆರಿಗೆ, ಇತರೆ ವರಮಾನ, ರಾಜ್ಯ ಸರಕಾರ ಮತ್ತು ಕೇಂದ್ರದಿಂದ ನೀಡಲಿರುವ ಅನುದಾನವನ್ನು ಆಧರಿಸಿ ಬಜೆಟ್‌ ಮಂಡಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಟಿ.ಎಂ.ವಿಜಯಭಾಸ್ಕರ್‌ ಅವರು 2015-16ರಲ್ಲಿಕೊನೆಯದಾಗಿ ಬಜೆಟ್‌ ಮಂಡನೆ ಮಾಡಿದ್ದರು. ಆಗ 5411 ಕೋಟಿ ರೂ. ವೆಚ್ಚದ ಬಜೆಟ್‌ ಮಂಡಿಸಿದ್ದರು.

IMG 20210326 WA0008

ಆಸ್ತಿ ತೆರಿಗೆ, ಕಟ್ಟಡ ನಕ್ಷೆ ಮಂಜೂರಾತಿ, ಒಸಿ, ಸಿಸಿ, ಜಾಹೀರಾತು, ಬಾಡಿಗೆಯಿಂದ ಪಾಲಿಕೆಗೆ ವಾರ್ಷಿಕ 4 ಸಾವಿರ ಕೋಟಿ ರೂ. ಆದಾಯ ಬರುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರದ ನಾನಾ ಮೂಲಗಳಿಂದಲೂ ಹೆಚ್ಚಿನ ಅನುದಾನ ನಿರೀಕ್ಷಿಸಿ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದೆ.

LEAVE A REPLY

Please enter your comment!
Please enter your name here