Home ಬೆಂಗಳೂರು ನಗರ ಕರ್ತವ್ಯ ಲೋಪವೆಸಗಿದ ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ ಚಿಕ್ಕ ಹೊನ್ನಯ್ಯ ಅಮಾನತು

ಕರ್ತವ್ಯ ಲೋಪವೆಸಗಿದ ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ ಚಿಕ್ಕ ಹೊನ್ನಯ್ಯ ಅಮಾನತು

129
0

ಕಾಮಗಾರಿ ನಡೆಯದೆ ಬಿಲ್ ಪಡೆದಿದ್ದಾರೆಂದು ದೂರು ನೀಡಿದ್ದ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷರು ಎನ್.ಆರ್.ರಮೇಶ್

 

ಬೆಂಗಳೂರು:

ಗಾಂಧಿನಗರ ಕ್ಷೇತ್ರದ ಬಿನ್ನಿಪೇಟೆ ವಾರ್ಡ್ 121ರ ಹಗರಣಕ್ಕೆ ಸಂಬ0ಧಿಸಿದ0ತೆ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕ ಹೊನ್ನಯ್ಯ ರವರನ್ನು  ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಆದೇಶದ ಮೇರೆಗೆ ಅಮಾನತು ಮಾಡಿ ಆದೇಶ ಹೊರಿಡಿಸಿದ್ದಾರೆ.

ಗೋಪಾಲಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಾಂಬರೀಕರಣ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಕೆ.ಆರ್.ಐ.ಡಿ.ಎಲ್‌ಗೆ ಕಾರ್ಯಾದೇಶ ನೀಡಿದ್ದು, ಕಾಮಗಾರಿಯ ಉಸ್ತಿವಾರಿ ವಹಿಸಿಕೊಂಡಿದ್ದ ದ್ವಿತೀಯ ದರ್ಜೆ ಸಹಾಯಕ ಚಿಕ್ಕ ಹೊನ್ನಯ್ಯ ಕಾಮಗಾರಿ ನಡೆಯದಿದ್ದರೂ ಬೇರೆ ಸ್ಥಳದಲ್ಲಿ ನಡೆದಿರುವ ಕಾಮಗಾರಿ ಛಾಯಾಚಿತ್ರಗಳನ್ನು ಕಡತದಲ್ಲಾಕಿ ಸಹಿಮಾಡಿ 1.09 ಕೋಟಿ ರೂ. ಚೆಕ್ ಮೂಲಕ ಬಿಡುಗಡೆ ಮಾಡಿ ಪಾಲಿಕೆ ವಂಚನೆ ಮಾಡಿರುತ್ತಾರೆ.

ಇದಲ್ಲದೆ ಕಳೆದ 15 ವರ್ಷಗಳಲಿಂದಲೂ ಗಾಂಧಿನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರ ಕಛೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡಿಕೊಂಡು ಹಲವಾರು ವಂಚನೆಗಳನ್ನು ಮಾಡಿಕೊಂಡು ಬಂದಿರುವುದು ಕಂಡುಬ0ದಿರುತ್ತದೆ. ಈ ಹಿನ್ನೆಲೆಯಲ್ಲಿ ಚಿನ್ನ ಹೊನ್ನಯ್ಯ ರವರನ್ನು ಗಂಭೀರ ಕರ್ತವ್ಯ ಲೋಪ ಎಸಗಿರುವುದು ಕಂಡುಬ0ದಿದ್ದು, ವಿಚಾರಣೆ ನಿರೀಕ್ಷಿಸಿ ಅಮಾನತುಗೊಳಿಸಲಾಗಿರುತ್ತದೆ.

LEAVE A REPLY

Please enter your comment!
Please enter your name here