Home ಬೆಂಗಳೂರು ನಗರ BBMP: ಮಕ್ಕಳಲ್ಲಿ ಕೋವಿಡ್‌ ಸೋಂಕು ಹೆಚ್ಚಳದ ವದಂತಿ ಸತ್ಯಕ್ಕೆ ದೂರ; ಬಿಬಿಎಂಪಿ ಸ್ಪಷ್ಟನೆ

BBMP: ಮಕ್ಕಳಲ್ಲಿ ಕೋವಿಡ್‌ ಸೋಂಕು ಹೆಚ್ಚಳದ ವದಂತಿ ಸತ್ಯಕ್ಕೆ ದೂರ; ಬಿಬಿಎಂಪಿ ಸ್ಪಷ್ಟನೆ

116
0
IAS Gaurav Gupta

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 9 ರಿಂದ 19 ವರ್ಷದ ಮಕ್ಕಳಲ್ಲಿ ಹೆಚ್ಚು ಕೋವಿಡ್ ಸೋಂಕು ಕಂಡುಬರುತ್ತಿದೆ ಎಂಬ ವದಂತಿಗಳನ್ನು ಬಿಬಿಎಂಪಿ ತಳ್ಳಿ ಹಾಕಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪಾಲಿಕೆ, ಕಳೆದ 20 ದಿನಗಳಿಂದ ದಿನಕ್ಕೆ ಸರಾಸರಿ 388 ಕೋವಿಡ್‌ ಪ್ರಕರಣಗಳು ಕಂಡು ಬರುತ್ತಿದ್ದು, ಕಂಡುಬರುತ್ತಿದ್ದು, ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಮಕ್ಕಳ ಪ್ರಕರಣಗಳ ಮೌಲ್ಯಮಾಪನ ಮಾಡಿದ್ದು(0-18 ವರ್ಷಗಳು), ಕಳೆದ 4 ತಿಂಗಳಲ್ಲಿ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಸರಾಸರಿ ಪ್ರಕರಣಗಳು ಸುಮಾರು ಶೇ. 11 ರಷ್ಟಿದೆ ಎಂದಿದೆ.

ತಿಂಗಳಿನಿಂದ ತಿಂಗಳಿಗೆ ಹೋಲಿಸಿದರೆ ಕೋವಿಡ್ ಸೋಂಕು ಅಲ್ಪ ಏರಿಕೆ ಮಾತ್ರ ಕಾಣುತ್ತಿದೆ. ಆದರೆ, ಒಟ್ಟು ಸೋಂಕಿನಲ್ಲಿ ಶೇ. 11.5 ಕ್ಕಿಂತ ಕಡಿಮೆಯಿದೆ. ಆದಾಗ್ಯೂ, ಪಾಲಿಕೆಯು 0-12 ವಯಸ್ಸಿನವರನ್ನು ಗಮನಿಸಿದರೆ, ಜೂನ್ ತಿಂಗಳಲ್ಲಿ 2,643 ಪ್ರಕರಣಗಳು, ಜುಲೈ ತಿಂಗಳಲ್ಲಿ 778 ಪ್ರಕರಣಗಳು ಮತ್ತು 2021ರ ಆಗಸ್ಟ್ 13 ರವರೆಗೆ 309 ಪ್ರಕರಣಗಳು ಕಂಡುಬಂದಿದ್ದು, ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗಿದೆ ಎಂದು ವಿವರಿಸಿದೆ.

  • ಆಗಸ್ಟ್ ತಿಂಗಳಲ್ಲಿ 0-18 ವರ್ಷದ ಮಕ್ಕಳಲ್ಲಿ ಇಲ್ಲಿಯವರೆಗೆ 511 ಪ್ರಕಟಗಳು ಪತ್ತೆಯಾಗಿವೆ.(ಒಟ್ಟಾರೆ ಪ್ರಕರಣಗಳಲ್ಲಿ 11.5%).
  • ಬಿಬಿಎಂಪಿಯಲ್ಲಿ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಕಳೆದ 10 ದಿನಗಳಲ್ಲಿ ಕಂಡುಬಂದಿರುವ ಪಾಸಿಟಿವ್ ಕೇಸ್‌ಗಳಲ್ಲಿ ಕೇವಲ 5 ಮಕ್ಕಳು ಮಾತ್ರ ಸರ್ಕಾರಿ ಕೋಟಾದಡಿ ದಾಖಲಾಗಿದ್ದು, 24 ಮಕ್ಕಳು ಖಾಸಗಿ ಕೋಟಾದಲ್ಲಿ ದಾಖಲಾಗಿರುತ್ತಾರೆ. ಒಟ್ಟಾರೆ ಶೇ. 5.7 ರಷ್ಟು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾತಿಯಾಗಿದ್ದು, ಬೇರೆ ವಯೋಮಾನದ ಪಾಸಿಟಿವ್ ರೋಗಿಗಳಿಗೆ ಹೋಲಿಸಿದರೆ ಇದು ಕಡಿಮೆಯಾಗಿರುತ್ತದೆ.
  • ಇತರೆ ವಯೋಮಾನದವರಿಗೆ ಹೋಲಿಸಿದರೆ, ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಗಳು ತುಂಬಾ ಕಡಿಮೆ ಮತ್ತು ಎಚ್‌ಡಿಯುನಲ್ಲಿ 3/29 ಮತ್ತು ಐಸಿಯು/ ಐಸಿಯು-ವಿಗೆ ಶೂನ್ಯ ಪ್ರವೇಶಗಳಿವೆ.
  • ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟು, ಮರಣ ಹೊಂದಿರುವ ಸಂಖ್ಯೆಯನ್ನು ಗಮನಿಸಿದಾಗ ಏಪ್ರಿಲ್ ನಿಂದ ಜೂನ್ ವರೆಗೆ 14 ಮಕ್ಕಳ ಮೃತಪಟ್ಟಿರುವುದು ವರದಿಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಯಾರೂ ಮೃತರಾಗಿರುವುದಿಲ್ಲ. (ಜುಲೈ ಮತ್ತು ಆಗಸ್ಟ್ 2021).
  • ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಜಾಗತಿಕ ದತ್ತಾಂಶವನ್ನು ಪರಿಶೀಲಿಸಿದಾಗ, ಮಕ್ಕಳು ಸಾಂಕ್ರಾಮಿಕ ರೋಗದ ಆರಂಭದಿಂದಲೂ ಒಟ್ಟಾರೆ 14.3% ಪ್ರಕರಣಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಕೇವಲ 0.1-1.9% ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದು ಬೆಂಗಳೂರಿಗೂ ಹೋಲುತ್ತದೆ.
  • ಕೋವಿಡ್ ಸೋಂಕುಲಕ್ಷಣಗಳು ಕಂಡುಬಂದರೆ, ಅವುಗಳನ್ನು ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಬಿಬಿಎಂಪಿ ದೈಹಿಕ ಚಿಕಿತ್ಸಾ ಕೇಂದ್ರಗಳಿಗೆ(ಪಿಟಿಸಿ) ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ(ಪಿಎಚ್‌ಸಿ) ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಿಗೆ(ಸಿಎಚ್‌ಸಿಎ) ಕರೆದುಕೊಂಡುಬರಹುದು.
  • ಪ್ರಸ್ತುತ ಬೆಂಗಳೂರಿನಲ್ಲಿ ಮಕ್ಕಳ ಆರೈಕೆಗಾಗಿ 7 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯೂ ಸೇರಿದೆ. ಅಲ್ಲದೆ, ಬಿಬಿಎಂಪಿಯು ಮಕ್ಕಳ ಆರೈಕೆಗಾಗಿ ಶೀಘ್ರದಲ್ಲೇ 30 ಹಾಸಿಗೆಗಳ ಸಾಮರ್ಥ್ಯದ ವ್ಯವಸ್ಥೆ ಮಾಡಲಿದೆ.
  • ಮುನ್ನೆಚ್ಚರಿಕಾ ಕ್ರಮವಾಗಿ, 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಕ್ಕಳು ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು.(ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಹೆಚ್ಚು ಜನಸೇರುವ ಕಡೆ ಹೋಗದಿರುವುದು) ಮತ್ತು ಚಿಕ್ಕ ಮಕ್ಕಳು ಯಾವಾಗಲೂ ಪೋಷಕರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ.
  • ಒಟ್ಟಾರೆಯಾಗಿ ನಗರದ ನಾಗರಿರ‍್ಯಾರೂ ಭಯಪಡುವ ಅಗತ್ಯವಿಲ್ಲ. ಹಾಗೂ ಕೋವಿಡ್ ಪ್ರಕರಣ ಕಂಡುಬಂದ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಅಗತ್ಯವಿಲ್ಲ. ಕೋವಿಡ್ ಸೊಂಕು ಕಂಡುಬಂದ ಬಹುತೇಕ ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳಿರಲಿದ್ದು, ತಮ್ಮಷ್ಟಕ್ಕೆ ತಾವೇ ಚೇತರಿಸಿಕೊಳ್ಳುತ್ತಾರೆ ಎಂದು ಬಿಬಿಎಂಪಿಯ ಮಕ್ಕಳ ತಜ್ಞರ ಸಮಿತಿಯು ಅಭಿಪ್ರಾಯಪಡುತ್ತದೆ. ಮತ್ತು ಪ್ರಕರಣಗಳ ಯಾವುದೇ ಏರಿಕೆಗೆ ಸನ್ನದ್ಧತೆಗೆ ಸಂಬಂಧಿಸಿದಂತೆ ಸರ್ಕಾರವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

LEAVE A REPLY

Please enter your comment!
Please enter your name here