Home ಬೆಂಗಳೂರು ನಗರ ಮಂತ್ರಿಮಾಲ್ ನಿಂದ 5 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ

ಮಂತ್ರಿಮಾಲ್ ನಿಂದ 5 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ

78
0
BBMP collects Rs 5 crore Pending property tax from Mantri Mall

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮಂತ್ರಿ ಮಾಲ್‌ನಿಂದ ಗುರುವಾರ 5 ಕೋಟಿ ಆಸ್ತಿ ತೆರಿಗೆಯನ್ನು ಯಶಸ್ವಿಯಾಗಿ ಸಂಗ್ರಹಿಸಿದೆ, ಇದು ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುರತ್ತಾರೆ.

ಬಿಬಿಎಂಪಿ ಪಶ್ಚಿಮ ವಲಯದ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ, ಗಾಂಧಿನಗರ ಕಂದಾಯ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಅಭಿಷೇಕ್ ಡೆವಲಪರ್(ಮಂತ್ರಿಮಾಲ್) ರವರು 2018-19 ನೇ ಸಾಲಿನಿಂದ ಇದುವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುರತ್ತಾರೆ.

2018-19ನೇ ಸಾಲಿಗೆ ಸಂಬಂಧಿಸಿದಂತೆ 10,43,81,045 /- ರೂ. ಗಳಿಗೆ ಸಂಬಂಧಿಸಿದಂತೆ, ಚೆಕ್ ನೀಡಲಾಗಿದ್ದು, ಕೆನರಾಬ್ಯಾಂಕ್‌ ಚೆಕ್ ಸಂಖ್ಯೆ: 087643 ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅಮಾನ್ಯಗೊಂಡಿರುತ್ತದೆ. ಈ ಸಂಬಂಧ ನ್ಯಾಯಾಲಯದಲ್ಲಿ ಸಿ.ಸಿ. ಸಂಖ್ಯೆ: 16168/2021 ರಂತೆ ಪ್ರಕರಣ ದಾಖಲಿಸಲಾಗಿದೆ.

BBMP collects Rs 5 crore Pending property tax from Mantri Mall

ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ಅನೇಕ ಬಾಕಿ ನೋಟಿಸ್ ಜಾರಿ ಮಾಡಿದ್ದು, ಆಸ್ತಿತೆರಿಗೆ ಪಾವತಿಸದ ಕಾರಣ ದಿನಾಂಕ: 30-09-2021 ರಂದು ಮಂತ್ರಿಮಾಲ್ ಬಾಗಿಲು ಹಾಕಿಸುವುದಕ್ಕೆ ಸಂಬಂಧಿಸಿದಂತೆ ಜಂಟಿ ಆಯುಕ್ತರು (ಪಶ್ಚಿಮ) ಶಿವಸ್ವಾಮಿ ಹಾಗೂ ಕಂದಾಯ ಸಿಬ್ಬಂದಿಯ ತಂಡದೊಂದಿಗೆ ಮಂತ್ರಿಮಾಲ್‌ಗೆ ತೆರಳಿ ಕ್ರಮಕೈಗೊಳ್ಳಲು ಮುಂದಾದಾಗ, ಮಂತ್ರಿಮಾಲ್ ಆಡಳಿತದವರು 5,00,00,000/- ರೂ. ಗಳ ಡಿ.ಡಿ.ಗಳನ್ನು ಮನವಿ ಪತ್ರದೊದಿಗೆ ನೀಡಿ ಉಳಿಕೆ ಆಸ್ತಿತೆರಿಗೆ ಬಾಕಿಯನ್ನು ದಿನಾಂಕ: 31-10-2021ರೊಳಗೆ ಪಾವತಿಸುವುದಾಗಿ ಲಿಖಿತ ರೂಪದಲ್ಲಿ ಸಲ್ಲಿಸಿರುತ್ತಾರೆ.

ಸದ್ಯ ಸಲ್ಲಿಸಿರುವ ಡಿ.ಡಿ.ಗಳನ್ನು ಮಾನ್ಯ ಮುಖ್ಯ ಆಯುಕ್ತರು ರವರ ವಿಶೇಷ ಖಾತೆಗೆ ಜಮೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ವಲಯ ಜಂಟಿ ಆಯುಕ್ತರು ರವರು ತಿಳಿಸಿರುತ್ತಾರೆ‌.

Also Read: Babu raj: BBMP officer blocks entry to Mantri Mall over property tax dues

LEAVE A REPLY

Please enter your comment!
Please enter your name here