ಎಲ್ಲಾ ಪ್ರತಿವಾದಿಗಳು ನ್ಯಾಯಾಲಯದಲ್ಲಿ ಕೌಂಟರ್ ಅಫಿಡವಿಟ್ ಗಳನ್ನು ಸಲ್ಲಿಸಿದ ನಂತರ ಮುಂದಿನ ದಿನಾಂಕ ನಿಗದಿ
ಬೆಂಗಳೂರು:
ಬಿಬಿಎಂಪಿ ಚುನಾವಣೆಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಎಲ್ಲಾ ಪ್ರತಿವಾದಿಗಳಿಗೆ ಕೌಂಟರ್ ಅಫಿಡವಿಟ್ ಸಲ್ಲಿಸಲು 4 ವಾರಗಳ ಸಮಯವನ್ನು ನೀಡಿದೆ.
ಎಲ್ಲಾ ಪ್ರತಿವಾದಿಗಳು ತಮ್ಮ ಕೌಂಟರ್ ಅಫಿಡವಿಟ್‌ಗಳನ್ನು ಸಲ್ಲಿಸಿದ ನಂತರ ಮುಂದಿನ ವಿಚಾರಣೆಗೆ ದಿನಾಂಕ ನಿಗದಿ ಮಾಡಲಿದೆ. ಸೋಮವಾರದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮುಂದೆ ನಡೆಸಲಾಯಿತು. ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ ಸುಪ್ರೀಂ ಕೋರ್ಟ್ ವಕೀಲ ಸಾಹಿಲ್ ಟಾಗೋತ್ರಾ ಅವರು ಉತ್ತರ ಸಲ್ಲಿಸಲು ಸಮಯ ಕೋರಿದರು. ಸಾಹಿಲ್ ಅವರು ರಾಜ್ಯ ಚುನಾವಣಾ ಆಯೋಗದ ಪರವಾಗಿ ಹಾಜರಾಗಲು ವಾಕಲತನ್ನು ಸಲ್ಲಿಸಿದ್ದರು ಕೌಂಟರ್ ಅಫಿಡವಿಟ್ ಸಲ್ಲಿಸಲು ಅವರು 4 ವಾರಗಳ ಸಮಯವನ್ನು ಕೋರಿದರು.
ಪ್ರತಿವಾದಿಗಳಾದ ಎಂ.ಶಿವರಾಜು, ಅಬ್ದುಲ್ ವಾಜಿದ್ ಮತ್ತು ರವಿ ಜಗನ್ ಪರ ವಕೀಲರಾದ ವಿ.ಎನ್.ರಘುಪತಿ ಮತ್ತು ರಾಜ್ಯ ಚುನಾವಣಾ ಆಯೋಗದ ಆಯುಕ್ತರ ಪರವಾಗಿ ವಕೀಲ ಸುಪ್ರೀತಾ ಶರಣಾಗೌಡ ಅವರು ಕೌಂಟರ್ ಅಫಿಡವಿಟ್ ಸಲ್ಲಿಸಿಲ್ಲ.
ಕಾಂಗ್ರೆಸ್ ಪಕ್ಷದ ಮಾಜಿ ಕಾರ್ಪೋರೇಟರ್‌ಗಳಾದ ಎಂ.ಶಿವರಾಜು ಮತ್ತು ಅಬ್ದುಲ್ ವಾಜಿದ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಈ ವಿಷಯವನ್ನು ಕೈಗೆತ್ತಿಕೊಂಡಿದ್ದು, 2 ತಿಂಗಳೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಬಳಿಕ ಹೈಕೋರ್ಟ್ ಆದೇಶವನ್ನು ತಡೆಹಿಡಿದು ಸುಪ್ರೀಂ ಕೋರ್ಟ್ ನಲ್ಲಿ ಹೈಕೋರ್ಟ್ ಆದೇಶವನ್ನು ಬಿಜೆಪಿ ಸರ್ಕಾರ ಪ್ರಶ್ನಿಸಿತು.
ಅದರಂತೆ ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣವನ್ನು ‘ಬಹಳ ಗಂಭೀರವಾಗಿ’ ಮುಂದುವರಿಸದಂತೆ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರುಗಳು ಮಾಜಿ ಪಕ್ಷದ ಕಾರ್ಪೊರೇಟರ್‌ಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಾರ್ಡ್ ಡಿಲಿಮಿಟೇಶನ್ ಪ್ಯಾನಲ್ ಇನ್ನೂ ಸಭೆ ನಡೆದಿಲ್ಲ:
ಈ ಮೊದಲು ಜನವರಿಯಲ್ಲಿ ರಾಜ್ಯ ಸರ್ಕಾರವು ಉದ್ದೇಶಿತ 243 ವಾರ್ಡ್ ಗಳ ಗಡಿಗಳನ್ನು ಸರಿಪಡಿಸಲು ವಾರ್ಡ್ ಡಿಲಿಮಿಟೇಶನ್ ಸಮಿತಿಯನ್ನು ರಚಿಸಿತ್ತು. ಬಿಬಿಎಂಪಿಯ ಮುಖ್ಯ ಆಯುಕ್ತರ ನೇತೃತ್ವದ 4 ಸದಸ್ಯರ ಸಮಿತಿಯು ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಆಯುಕ್ತರನ್ನು ಸದಸ್ಯರನ್ನಾಗಿ ಮತ್ತು ಅದರ ಸದಸ್ಯ-ಕಾರ್ಯದರ್ಶಿ ಬಿಬಿಎಂಪಿ ವಿಶೇಷ ಆಯುಕ್ತರು(ಕಂದಾಯ) ರವರು ಗಡಿಗಳನ್ನು ನಿಗದಿಪಡಿಸುವ ಕುರಿತು ಸಮಿತಿ ರಚಿಸಲಾಗಿದೆ. ಆದರೆ ಇದುವರೆಗೂ ಇನ್ನೂ ಸಭೆ ನಡೆದಿಲ್ಲ.