Home ಬೆಂಗಳೂರು ನಗರ Bengaluru: BBMP Ex Corporator ಪುತ್ರ ನೇಣಿಗೆ ಶರಣು

Bengaluru: BBMP Ex Corporator ಪುತ್ರ ನೇಣಿಗೆ ಶರಣು

22
0
BBMP Ex Corporator's son suicide in Bengaluru
BBMP Ex Corporator's son suicide in Bengaluru
Advertisement
bengaluru

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್‌ (Ex Corporator) ರೊಬ್ಬರ ಪುತ್ರ ಮನೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.

ಅತ್ತಿಗುಪ್ಪೆ ವಾರ್ಡ್ ನ ಮಾಜಿ ಕಾರ್ಪೋರೇಟರ್‌ ದೊಡ್ಡಣ್ಣ ಎಂಬುವವರ ಪುತ್ರ ಗೌತಮ್ (29 ವರ್ಷ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ವಿಚಾರವಾಗಿ ಗೌತಮ್ ಅವರ ತಂದೆ ಪೊಲೀಸ್ ದೂರು ದಾಖಲಿಸಿದ್ದು, ದೂರಿನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೂರಿನಲ್ಲಿರುವಂತೆ ದೊಡ್ಡಯ್ಯ ಅವರ ಕಿರಿಯ ಪುತ್ರ ಆಗಿರುವ ಗೌತಮ್‌, ಬಿಬಿಎಂಪಿ ಗುತ್ತಿಗೆದಾರನಲ್ಲ. ಆದರೆ ಆತ ಬಿಬಿಎಂಪಿಯಲ್ಲಿ ಸಾಕಷ್ಟು ಗುತ್ತಿಗೆದಾರರಿಗೆ ಹಣವನ್ನು ಕೊಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

bengaluru bengaluru

ತಮ್ಮ ಪುತ್ರ ಗುತ್ತಿಗೆದಾರನಲ್ಲ. ಅವನ ಹೆಸರಲ್ಲಿ ಯಾವುದೇ ಗುತ್ತಿಗೆದಾರರ ಪರವಾನಗಿ ಇಲ್ಲ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಗೌತಮ್‌ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕುತ್ತಿದ್ದೆವು. ಕೆಲವು ದಿನಗಳಿಂದ ಆತ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ನಾವು ಎಷ್ಟೇ ಕೇಳಿದರೂ ಯಾವುದೇ ಮಾಹಿತಿಯನ್ನೂ ನೀಡುತ್ತಿರಲಿಲ್ಲ. ಆದರೂ, ಸ್ವಲ್ಪ ದಿನಕ್ಕೆ ಸರಿಹೋಗುತ್ತದೆ ಎಂದು ನಾವು ಸುಮ್ಮನಿದ್ದೆವು. ಜೊತೆಗೆ, ಮದುವೆ ಮಾಡಿದರೆ ಸರಿ ಹೋಗುತ್ತದೆ ಎಂದು ಕಳೆದ ಎರಡು ತಿಂಗಳಿಂದ ಹುಡುಗಿ ಹುಡುಕಾಟ ಮಾಡುತ್ತಿದ್ದೆವು.

WhatsApp Image 2023 08 11 at 9.37.11 AM
WhatsApp Image 2023 08 11 at 9.37.14 AM

ಆದರೂ, ಮಗ ಮನೆಯೊಂದಿಗೆ ಯಾರೊಂದಿಗೂ ಮಾತನಾಡದೇ ಸುಮ್ಮನೇ ಇರುತ್ತಿದ್ದನು. ಮನೆಯವರೊಂದಿಗೆ ನಿನ್ನೆ ಮಧ್ಯಾಹ್ನ ಊಟ ಮಾಡಿ ರೂಮಿಗೆ ತೆರಳಿದ್ದನು. ಇದಾದ ನಂತರ, ಬಾಗಿಲು ತೆರೆದು ಹೊರಗೆ ಬಂದಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಕರೆಯೋಕೆ ರೂಮಿಗೆ ಹೋದಾಗ ಬಾಗಿಲು ತೆರೆಯಲಿಲ್ಲ. ಜೊತೆಗೆ, ಕರೆ ಮಾಡಿದರೂ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಬಾಗಿಲು ತೆಗೆದು ನೋಡಿದರೆ ಹೀಗೆ ದುರಂತ ಸಂಭವಿಸಿತ್ತು ಎಂದು ದೊಡ್ಡಯ್ಯ ತಮ್ಮ ದೂರನಲ್ಲಿ ಉಲ್ಲೇಖಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ಮಾಡುತ್ತಿದ್ದು, ಸಾವಿಗೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.


bengaluru

LEAVE A REPLY

Please enter your comment!
Please enter your name here