Home ಬೆಂಗಳೂರು ನಗರ ರಾಮ ಮಂದಿರ ನಿಮಾರ್ಣಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಂದ 5 ಲಕ್ಷ ರೂ.

ರಾಮ ಮಂದಿರ ನಿಮಾರ್ಣಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಂದ 5 ಲಕ್ಷ ರೂ.

78
0

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ರವರಿಗೆ ಚೆಕ್ ಸಮರ್ಪಣೆ

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಪಾಲಿಕೆ ಅಧಿಕಾರಿ ಮತ್ತು ನೌಕರರಿಂದ ಶ್ರೀ ರಾಮಜನ್ಮಭೂಮಿ ಅಯ್ಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿಮಾರ್ಣಕ್ಕೆ ಸಂಗ್ರಹಿಸಿದ 5 ಲಕ್ಷ ರೂ. ಮೊತ್ತವನ್ನು ಇಂದು ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ರವರಿಗೆ ಸಮರ್ಪಿಸಲಾಯಿತು.

ರಾಮಜನ್ಮಭೂಮಿ ಅಯ್ಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿಮಾರ್ಣಕ್ಕೆ ಪಾಲಿಕೆಯ ನೌಕರರ ಕ್ಷೇಮಾಭಿವೃದ್ಧಿ ಸಂಘವು ಅಧಿಕಾರಿ ನೌಕರರು ಶ್ರಮದಿಂದ ದುಡಿದ ಹಣವನ್ನು ಸಂಗ್ರಹಿಸಿ ರಾಮಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವುದು ಸಂತಸದ ವಿಷಯ ಎಂದು ಕೇಂದ್ರ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಗಾರ ಗೌರವ್ ಗುಪ್ತಾ, ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಮಾಜಿ ಉಪಮಹಾಪೌರರು ಎಸ್ ಹರೀಶ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರು ಎನ್. ಆರ್. ರಮೇಶ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಅಮೃತ್ ರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here