Home ಬೆಂಗಳೂರು ನಗರ ಬೆಂಗಳೂರು ನಗರ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ 90 ಜನರಿಗೆ ಕೋವಿಡ್ ಸೋಂಕು

ಬೆಂಗಳೂರು ನಗರ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ 90 ಜನರಿಗೆ ಕೋವಿಡ್ ಸೋಂಕು

180
0

ಬೆಂಗಳೂರು:

ಕಳೆದ ವಾರ ನಗರದ ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ನ ಹೊಸ ಪ್ರಕರಣಗಳು ಕಂಡು ಬಂದ ನಡುವೆಯೇ ಬಿಳೇಕಹಳ್ಳಿಯ ಅಪಾರ್ಟ್‍ಮೆಂಟ್‍ವೊಂದರ 90 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

430 ಫ್ಲಾಟ್ ಗಳಿರುವ ವಸತಿ ಸಂಕೀರ್ಣದಲ್ಲಿ 1,500 ನಿವಾಸಿಗಳು ವಾಸಿಸುತ್ತಿದ್ದು, ಈವರೆಗೆ 1200 ಮಂದಿಗೆ ಪರೀಕ್ಷಿಸಲಾಗಿದೆ. ಅಪಾರ್ಟ್‍ಮೆಂಟ್ ಸಂಕೀರ್ಣದಲ್ಲಿ ಫ್ಲಾಟ್‍ಗಳಲ್ಲಿ ಪಾರ್ಟಿಯು ನಡೆಸಿರುವವರಿಗೆ ಕಂಟಕವಾಗಿ ಪರಿಣಮಿಸಿದೆ.

SNN Lake view apartment 1024x469 1

ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಸೋಂಕು ದೃಢಪಟ್ಟವರಲ್ಲಿ ಬಹುತೇಕರು ಹದಿಹರಿಯದವರಾಗಿದ್ದಾರೆ. ಸೋಂಕು ದೃಢಪಟ್ಟವರನ್ನು ಗೃಹ ಸಂಪರ್ಕ ತಡೆಯಲ್ಲಿರಿಸಲಾಗುವುದು. ಅಪಾರ್ಟ್‍ಮೆಂಟ್‍ನ ಇಡೀ ಸಂಕೀರ್ಣವನ್ನು ಸ್ವಚ್ಛಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ರವರು ಮಾತನಾಡಿ ಎಸ್.ಎನ್.ಎನ್ ರೆಸಿಡೆನ್ಸಿಯಲ್ಲಿ ಆರ್.ಡಬ್ಲ್ಯೂ.ಎ ಪಾರ್ಟಿ ಹಾಲ್ ಗಳಲ್ಲಿ ಹೆಚ್ಚು ಜನಸಂಖ್ಯೆ ಸೇರುತ್ತಿದ್ದು, ಕೋವಿಡ್ ನಿಯಮಗಳನ್ನು‌ ಪಾಲನೆ ಮಾಡದಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿರವೆ. ಹೆಚ್ಚು ಪ್ರಕರಣಗಳು ಕಂಡುಬರದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here