ಸಿಎಜಿ ವರದಿ ವಿಧಾನ ಸಭೆಯಲ್ಲಿ ಮಂಡನೆ
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡಗಳ ಸಂಖ್ಯೆ 243ಕ್ಕೆ ಹೆಚ್ಚಳ,ಮೇಯರ್ ಅವಧಿ ವಿಸ್ತರಣೆ 30 ತಿಂಗ ಳು, ವಲಯಗಳ ಹೆಚ್ಚಳ, ಸ್ಥಾಯಿಸಮಿತಿಗಳ ಸಂಖ್ಯೆ ಕಡಿತ ಹಾಗೂ ಸದಸ್ಯರ ಸಂಖ್ಯೆ ಹೆಚ್ಚಳ,ಪ್ರತಿ ವಲಯಕ್ಕೆ ಸದಸ್ಯರ ನೇಮಕ,ಮುಖ್ಯಕಾರ್ಯದರ್ಶಿ ಮಾದರಿಯಲ್ಲಿ ಆಯುಕ್ತರ ನೇಮಕ ಸೇರಿದಂತೆ ಬಹುನಿರೀಕ್ಷಿತ ೨೦೨೦ನೇ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಪರಿಶೀಲಾನ ಸಮಿತಿ ವರದಿಯನ್ನು
ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.
ಸಭೆಯ ಮುಂದಿಡಲಾದ ಕಾಗದ ಪತ್ರಗಳನ್ನು ವಿವಿಧ ಸಮಿತಿಗಳ ಅಧ್ಯಕ್ಷರು ವಿಧಾನ ಸಭೆಯಲ್ಲಿ ಮಂಡಿಸಿದರು.ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ರಘು ಅವರು ವಿಧಾನಸಭೆಯಲ್ಲಿಂದು ಈ ವರದಿಯನ್ನು ಮಂಡಿಸಿದ್ದು, ವಿಧಾನ ಚೆರ್ಚೆಯ ಬಳಿಕ ಕಾಯ್ದೆಯನ್ನು ನಾಳೆ ವಿಧಾನ ಸಭೆಯಲ್ಲಿ ಮಂಡನೆ ಆಗಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾರತ ಸಂವಿಧಾನದ ೧೫೧(೨)ನೇ ಅನುಚ್ಛೇಧದ ಮೇರೆಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನೀಡಿರುವ ಮಾರ್ಚ್ ೨೦೧೯ಕ್ಕೆ ಕೊನೆಗೊಂಡ ವರ್ಷದ ಸಾಮಾನ್ಯ ಮತ್ತು ಸಾಮಾಜಿಕ ವಲಯದ ವರದಿಯನ್ನು ಸಭೆಯ ಮುಂದಿ ಟ್ಟರು.ಬಳಿಕ ವಿಧಾನಸಭೆ ಕಾರ್ಯದರಶಿ ಅವರು ಕರ್ನಾಟಕ ವಿಧಾನಪರಿಷತ್‌ನಿಂದ ತಿದ್ದುಪಡಿಗ ಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ ೨೦೨೦ನೇ ಸಾಲಿನ ಭೂ ಸುಧಾರಣೆಗಳ( ೨ನೇ ತಿದ್ದುಪಡಿ )ವಿಧೇಯಕವನ್ನು ಸಭೆಯ ಮುಂದಿಟ್ಟರು.
೨೦೧೯-೨೦, ೨೦೨೦-೨೧ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ ೪೯ನೇ ವರದಿಯನ್ನು ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಕುಮಾರಬಂಗಾರಪ್ಪ ವರದಿ ಒಪ್ಪಿಸಿದರು.ಮೊಬೈಲ್ ಟವರ್ ಕಂಪನಿಗಳು,ಗ್ರಾಮ ಪಂಚಾಯ್ತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನಿಯಮಾನು ಸಾರ ತೆರಿಗೆ ಪಾವತಿಸದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿರುವ ಅರ್ಜಿಯನ್ನು ವಿಧಾನಸಭೆಯ ಉಪಾಧ್ಯಕ್ಷರು ಹಾಗೂ ಅರ್ಜಿಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಆನಂದ್, ವಿಶ್ವನಾಥ್, ಚಂದ್ರಶೇಖರ್ ಮಾಮನಿ ವರದಿನ್ನು ಒಪ್ಪಿಸಿದರು.
ನಂತರ ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಅವರು ೨೦೨೦ನೇ ಸಾಲಿನ ಕರ್ನಾಟಕ ಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆ ಗಳ(೨ನೇ ತಿದ್ದುಪಡಿ ವಿಧೇಯಕವನ್ನು) ಮಂಡಿಸಿದರು.
ವಿಧಾನಪರಿಷತ್‌ನಿಂದ ತಿದ್ದುಪಡಿಗೊಳ್ಳದೆ ಅಂಗೀಕಾರವಾದ ರೂಪದಲ್ಲಿರುವ ೨೦೨೦ನೇ ಸಾಲಿನ ಕರ್ನಾಟಕ ಭೂಸುಧಾರಣೆ(೨ನೇ ತಿದ್ದುಪಡಿ) ವಿಧೇಯಕವನ್ನು ಮಂಡನೆ ಮಾಡಿದರು.
ವಿಧಾನಪರಿಷತ್ ನಿಂದ ತಿದ್ದುಪಡಿಗಳೊಂದಿಗೆ ಪುನರ್ ಅವಲೋಚನೆಗೆ ಮಂಡಿಸಲಾಗಿದ್ದ ಕರ್ನಾಟಕ ಭೂ ಸುಧಾರಣಾ(೨ನೇ ತಿದ್ದುಪಡಿ) ವಿಧೇಯಕ ೨೦೨೦ ಬಗ್ಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆಯಿತು.