Home ಬೆಂಗಳೂರು ನಗರ ಬಿಬಿಎಂಪಿ ನಿವೃತ್ತ ಅಧಿಕಾರಿ, ನೌಕರರ ಬೀಳ್ಕೊಡುಗೆ ಸಮಾರಂಭ

ಬಿಬಿಎಂಪಿ ನಿವೃತ್ತ ಅಧಿಕಾರಿ, ನೌಕರರ ಬೀಳ್ಕೊಡುಗೆ ಸಮಾರಂಭ

146
0

ಬೆಂಗಳೂರು:

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕೇಂದ್ರ ಕಛೇರಿಯ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ವಯೋ ಸಹಜ ನಿವೃತ್ತಿ ಹೊಂದಿದ ಅಧಿಕಾರಿ ,ನೌಕರರಿಗೆ ಸನ್ಮಾನ ಜೊತೆಯಲ್ಲಿ ಬೀಳ್ಕೊಡಗೆ ಸಮಾರಂಭವನ್ನು ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷರಾದ ಅಮೃತ್ ರಾಜ್, ಕೆಜಿ ರವಿ, ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ನರಸಿಂಹ, ರಾಜಶೇಖರ್, ಸುನೀತ, ರೇಣುಕಾಂಬ, ಮಹಾದೇವಿಶ್ರೀಧರ್, ವಾಣಿ, ಮಲ್ಲೇಶ್ ರವರು ನಿವೃತ್ತ ಅಧಿಕಾರಿ ನೌಕರರನ್ನ ಸನ್ಮಾನಿಸಿದರು.

  1. ಶ್ರೀ ಮುರಳಿ ಬಿ. ವಿ , ವ್ಯವಸ್ಥಾಪಕರು, ಕಾರ್ಯಪಾಲಕ ಅಭಿಯಂತರರು (ಯೋಜನೆ -ದಕ್ಷಿಣ )
  2. ಶ್ರೀಮತಿ ಭಾಗ್ಯಮ್ಮ, ವ್ಯವಸ್ಥಾಪಕರು, ಕಾರ್ಯಪಾಲಕ ಅಭಿಯಂತರರು, ಪದ್ಮನಾಭನಗರ ವಿಭಾಗ
  3. ಶ್ರೀ ವಿಜಯವೀರೇಗೌಡ. ವಿ. ಟಿ., ಪ್ರಥಮ ದರ್ಜೆ ಸಹಾಯಕರು, ಕಾರ್ಯಪಾಲಕ ಅಭಿಯಂತರರು, ಬೊಮ್ಮನಹಳ್ಳಿ ವಿಭಾಗ
  4. ಶ್ರೀ ಮಲ್ಲಿಕಾರ್ಜುನ್, ಕಿರಿಯ ಅರೋಗ್ಯ ಪರಿವೀಕ್ಷಕರು, ವಿಜಯನಗರ ವಿಭಾಗ
  5. ಶ್ರೀ ಕೃಷ್ಣ. ಎಸ್. ದ್ವಿತೀಯ ದರ್ಜೆ ಸಹಾಯಕರು, ಕಾರ್ಯಪಾಲಕ ಅಭಿಯಂತರರು, ಮಹದೇವಪುರ ವಿಭಾಗ
  6. ಶ್ರೀ ದಿವಾಕರ್ ರಾವ್, ಕೆ. ಎಮ್. ಕಂದಾಯ ಮೌಲ್ಯಮಾಪಕರು, ಸಹಾಯಕ ಕಂದಾಯ ಅಧಿಕಾರಿ, ಬಸವನಗುಡಿ ಉಪವಿಭಾಗ.
  7. ಶ್ರೀಮತಿ ತೆರೇಸಾ, ವಿ, ನಾಲ್ಕನೇ ದರ್ಜೆ ನೌಕರ
    ಸದರಿ ಅಧಿಕಾರಿ ಮತ್ತು ನೌಕರರನ್ನು ಸಂಘದ ವತಿಯಿಂದ ನಿವೃತ್ತಿ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಮೃತ್ ರಾಜ್ ರವರು ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿ ನೌಕರರನ್ನು ಅವರ ಇಷ್ಟು ವರ್ಷ ಸಾರ್ವಜನಿಕ ಸೇವೆ ಸ್ಮರಣೆ ಮಾಡುತ್ತಾ ಎಷ್ಟೆ ಕಷ್ಟ ಬಂದರು ಎದುರಿಸಿ ಅವರ ಸೇವೆಯನ್ನ ಪರಿಗಣಿಸಿ ಪ್ರತಿ ತಿಂಗಳು 1ನೇ ತಾರೀಖು ನಿವೃತ್ತರಾದ ನೌಕರರಿಗೆ ಸನ್ಮಾನ ಜೊತೆಯಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಲಾಗುತ್ತಿದೆ. ಇಂದಿನ ತಿಂಗಳು 38ನೇ ಸಮಾರಂಭ .

ನಿವೃತ್ತ ಜೀವನ ಕಷ್ಟಕರ ಮತ್ತು ವಯೋಸಹಜ ರೋಗಗಳು ಬರುತ್ತದೆ ಸೇವೆಯಲ್ಲಿ ಇದ್ದಾಗ ವೈದ್ಯಕೀಯ ನೆರವು ಸಿಗುತ್ತದೆ .ನಿವೃತ್ತ ನಂತರ ಸ್ವಂತ ವೆಚ್ಚದಲ್ಲಿ ಆರೋಗ್ಯ ವೆಚ್ಚ ಭರಿಸಬೇಕಾಗುತ್ತದೆ.ಅದ್ದರಿಂದ ಮಾನ್ಯ ಬಿಬಿಎಂಪಿ ಆಯುಕ್ತರ ಬಳಿ ಮನವಿ ಮಾಡಿ ನಿವೃತ್ತ ನೌಕರ ಮತ್ತು ಕುಟುಂಬವರ್ಗ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಉಚಿತ ವೈದ್ಯಕೀಯ ಸೇವೆ ಲಭಿಸುವಂತೆ ನೆರವು ನೀಡಬೇಕು ಎಂದು ಮನವಿ ಮಾಡಲಾಗುವುದು.

ನಿವೃತ್ತ ನಂತರ ಬಿಬಿಎಂಪಿ ಸಿಗಬೇಕಾದ ಪಿಂಚಣಿ, ಪಿ.ಎಫ್ ಸಕಾಲಕ್ಕೆ ದೊರಕಲು ನಿವೃತ್ತ ನೌಕರರಿಗೆ ಸಂಘವು ಸಹಕಾರ ನೀಡಲಿದೆ. ನಿವೃತ್ತ ನೌಕರರು ಸಂಘದ ಕಾರ್ಯಚಟುವಣಿಕೆ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here