Home ಬೆಂಗಳೂರು ನಗರ ಗಿನ್ನಿಸ್ ದಾಖಲೆ ಓಟಗಾರ್ತಿ ಸೂಫಿಯಾಗೆ ಸಚಿವರಿಂದ ಗೌರವ

ಗಿನ್ನಿಸ್ ದಾಖಲೆ ಓಟಗಾರ್ತಿ ಸೂಫಿಯಾಗೆ ಸಚಿವರಿಂದ ಗೌರವ

24
0

ಬೆಂಗಳೂರು:

ಗಿನ್ನಿಸ್ ದಾಖಲೆ ನಿರ್ಮಿಸಲು ಪಣ ತೊಟ್ಟಿರುವ ಓಟಗಾರ್ತಿ ಸೂಫಿಯಾ ಅವರನ್ನ ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಸ್ವಾಗತಿಸಿ, ಸತ್ಕರಿಸಿದ್ದಾರೆ. ಡಿಸೆಂಬರ್ ನಲ್ಲಿ ಡೆಲ್ಲಿಯಿಂದ ಓಟ ಆರಂಭಿಸಿ, ಇಂದು ಬೆಂಗಳೂರು ತಲುಪಿರುವ ಸೂಫಿಯಾ ಅವರು ಯುವ ಕ್ರೀಡಾಪಟುಗಳಿಗೆ ಸ್ಪೂರ್ಥಿ ಎಂದು ಸಚಿವರು ಶ್ಲಾಘಿಸಿದರು.

ರಾಜಸ್ಥಾನ ಮೂಲದ ಸೂಫಿಯಾ ಡಿಸೆಂಬರ್ 16 ರಂದು ಇಂಡಿಯಾಗೇಟ್ ನಿಂದ ಓಟ ಆರಂಭಿಸಿದ್ದಾರೆ. Run for hope ಹೆಸರಿನಲ್ಲಿ ಓಟ ಆರಂಭಿಸಿರುವ ಸೂಫಿಯಾ 6 ಸಾವಿರ ಕಿ.ಮಿ. ದೂರವನ್ನ 135 ದಿನಗಳ ಒಳಗಾಗಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಪಣತೊಟ್ಟಿದ್ದಾರೆ. Run for hope ಅಂದರೆ ಮಾನವೀಯತೆ, ಏಕತೆ, ಶಾಂತಿ, ಸಮಾನತೆ ಹಾಗೂ ಆರೋಗ್ಯಕರ ಜೀವನ ಶೈಲಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಈ ಓಟ ಆರಂಭಿಸಿದ್ದಾರೆ. 2019 ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 4 ಸಾವಿರ ಕಿ.ಮಿ. ದೂರವನ್ನ ಕೇವಲ 87 ದಿನಗಳಲ್ಲಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ರಾಜಸ್ಥಾನ ಮೂಲದ ಕುಮಾರಿ ಸೂಫಿಯಾ ಈಗ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಹಂತದಲ್ಲಿದ್ದಾರೆ.

WhatsApp Image 2021 02 02 at 11.01.24

ಇಂಡಿಯಾಗೇಟ್ ನಿಂದ ಓಟ ಆರಂಭಿಸಿರುವ ಸೂಫಿಯಾ ಇಂದು ಬೆಂಗಳೂರು ತಲುಪಿದ್ದಾರೆ. ಸುಮಾರು 2400 ಕಿ.ಮೀ. ಕ್ರಮಿಸಿರುವ ಸೂಫಿಯಾ ಚನೈನತ್ತ ಓಟ ಮುಂದುವರೆಸಿದ್ದಾರೆ. ಈ ವೇಳೆ ಸಚಿವ ಡಾ. ನಾರಾಯಣಗೌಡ ಅವರು ಸೂಫಿಯಾ ಅವರನ್ನ ವಿಧಾನ ಸೌಧದ ಬಳಿ ಸ್ವಾಗತಿಸಿ, ಗೌರವಿಸಿದರು. ಜನರಲ್ಲಿ ಜಾಗೃತಿ ಮೂಡಿಸುವುದರ ದಾಖಲೆ ಓಟದಲ್ಲೂ ದಾಖಲೆ ನಿರ್ಮಿಸುತ್ತಿರುವ ಸೂಫಿಯಾ ಅವರ ಕಾರ್ಯಕ್ಕೆ ಶುಭಕೋರಿದರು. ಸೂಫಿಯಾ ಅವರ ಈ ಕಾರ್ಯ ಕ್ರೀಡಾಪಟುಗಳಿಗೆ, ಯುವ ಜನತೆಗೆ ಸ್ಪೂರ್ಥಿಯಾಗಿದೆ. ಕ್ರೀಡಾ ಇಲಾಖೆಯ ಸಚಿವನಾಗಿ ಸೂಫಿಯಾ ಅವರನ್ನ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಚಿವರು ಹೇಳಿದರು. ಈ ಹಿಂದೆ ಪುಣಾ ಮೂಲದ ಮಿಶೆಲ್ ಕಾಕಡೆ ಎನ್ನುವವರು 190 ದಿನಗಳಲ್ಲಿ 6 ಸಾವಿರ ಕಿ.ಮೀ. ದೂರವನ್ನ ಓಡಿದ್ದರು. ಈಗ. 135 ದಿನಗಳ ಒಳಗೆ ಈ ದೂರವನ್ನ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಸೂಫಿಯಾ ಮುಂದಾಗಿದ್ದಾರೆ. ವೇಗದ ಮಹಿಳಾ ರನ್ನರ ಎಂಬ ಗೌರವಕ್ಕೆ ಪಾತ್ರರಾಗಿರುವ ಸೂಫಿಯಾ, 2018 ರಲ್ಲಿ ಡೆಲ್ಲಿ- ಆಗ್ರಾ-ಜೈಪುರ್ ನಡುವೆ 16 ದಿನಗಳಲ್ಲಿ ಓಡಿ ಗುರಿ ತಲುಪಿದ್ದಾರೆ. 2019 ರಲ್ಲಿ 1000, 2000, 3000 ಕಿ.ಮೀ. ಓಡಿದ್ದಾರೆ. ದೆಹಲಿಯಿಂದ ಕಲ್ಕತ್ತಾಕ್ಕೆ 29 ದಿನಗಳಲ್ಲಿ ಓಡಿ ತಲುಪಿದ್ದಾರೆ. ಸೂಫಿಯಾ ವರ್ಷದ ಹಿಂದೆಯೆ run for hope ಹೆಸರಿನಲ್ಲಿ ಓಡಿ ದಾಖಲೆ ನಿರ್ಮಿಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 44 ದಿನಗಳಲ್ಲಿ 2200 ಕಿ.ಮೀ. ಓಡಿ ಅರ್ಧದಲ್ಲೆ ಓಟ ನಿಲ್ಲಿಸಿದ್ರು. ತಮ್ಮ ಕನಸನ್ನು ನನಸು ಮಾಡಲು ಡೆಲ್ಲಿಯಿಂದ ಮತ್ತೆ ಓಟ ಆರಂಭಿಸಿ, ಇಲ್ಲಿವರೆಗೆ ಸಾಗಿ ಬಂದಿದ್ದಾರೆ. ಸೂಫಿಯಾ ಅವರ ಜೊತೆಯಲ್ಲಿ ವಿಕಾಸ ಹಾಗೂ ಗುರ್ಲಿನ್ ಬಂದಿದ್ದಾರೆ. ವಿಕಾಸ್ ಅತ್ಯುತ್ತಮ ಸೈಕ್ಲಿಸ್ಟ್ ಆಗಿದ್ದಾರೆ. ಅಂದಹಾಗೆ ಸೂಫಿಯಾ ಈಗ ದಾಖಲೆ ನಿರ್ಮಿಸಿ, 2023 ರಲ್ಲಿ ಇಡಿ ವಿಶ್ವವನ್ನ ಎರಡು ವರ್ಷಗಳಲ್ಲಿ ಓಡಿ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಸೂಫಿಯಾ ಅವರ ಈ ಸಾಹಸಕ್ಕೆ ಸಚಿವ ಡಾ. ನಾರಾಯಣಗೌಡ ಶುಭಹಾರೈಸಿದ್ದಾರೆ.

ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here