Home ಬೆಂಗಳೂರು ನಗರ ಮಹಿಳೆಯಿಂದ ಪಾಲಿಕೆಯ ಪ್ರೌಢಶಾಲೆಯ ಮಸಾಜ್: ಪ್ರಭಾರ ಮುಖ್ಯೋಪಾಧ್ಯಾಯ ಅಮಾನತು

ಮಹಿಳೆಯಿಂದ ಪಾಲಿಕೆಯ ಪ್ರೌಢಶಾಲೆಯ ಮಸಾಜ್: ಪ್ರಭಾರ ಮುಖ್ಯೋಪಾಧ್ಯಾಯ ಅಮಾನತು

124
0

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಕೋದಂಡರಾಮಪುರ ಪ್ರೌಢಶಾಲೆಗೆ ಮಗನ ದಾಖಲಾತಿಗೆ ಆಗಮಿಸಿದ ಮಹಿಳೆಯೊಂದಿಗಿನ ದುರ್ವರ್ತನೆ ತೋರಿದ ಪ್ರಭಾರ ಮುಖ್ಯೋಪಾಧ್ಯಾಯ ಲೋಕೇಶಪ್ಪ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಸರ್ಕಾರಿ ಕಟ್ಟಡವನ್ನು ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಂಡಿರುವುದು ಹಾಗೂ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಪಡಿಸಲಾಗಿದೆ. ಘಟನೆ ಸಂಬಂಧ ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

LOKESHAPPA BBMP headmaster1

Also Read: BBMP school headmaster suspended in ‘massage’ case

“ಲೋಕೇಶಪ್ಪ ರವರು ಪ್ರಭಾರದ ಮೇಲೆ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮಗುವಿನ ದಾಖಲಾತಿಗೆಂದು ಮಹಿಳೆಯೊಬ್ಬರು ಶಾಲೆಗೆ ಬಂದಿರುತ್ತಾರೆ. ಈ ವೇಳೆ ಮಹಿಳೆಯಿಂದ ತಾವು ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಕಟ್ಟಡದಲ್ಲಿ ಮಸಾಜ್ ಮಾಡಿಕೊಂಡಿರುವ ಸಂಬಂಧ ದೃಶ್ಯಾವಳಿಗಳು ದಿನಾಂಕ: 22-09-2021ರಂದು ಸಾರ್ವಜನಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಈ ಸಂಬಂಧ ಲೋಕೇಶಪ್ಪ ರವರನ್ನು ಖುದ್ದು ವಿಚಾರಿಸಿದ್ದು, ಮಸಾಜ್ ಮಾಡಿಸಿಕೊಂಡಿರುವುದಾಗಿ ಒಪ್ಪಿರುತ್ತಾರೆ. ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತ್ತುಪಡಿಸಲಾಗಿದೆ,” ಎಂದು ಬಿಬಿಎಂಪಿ ತಿಳಿಸಿದೆ.

ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಸರ್ಕಾರಿ ಕಟ್ಟಡವನ್ನು ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಂಡಿರುವುದು ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿರುವುದರಿಂದ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತ್ತುಪಡಿಸಲಾಗಿದೆ ಹಾಗೂ 1958ರ ಕೆ.ಸಿ.ಎಸ್‌.ಆರ್‌ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ.

LEAVE A REPLY

Please enter your comment!
Please enter your name here