Home ಬೆಂಗಳೂರು ನಗರ ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರ

ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರ

116
0
Be an entrepreneur, employability workshop in Bengaluru

ಬೆಂಗಳೂರು:

ರಾಷ್ಟ್ರದ ವಿವಿಧ ಉದ್ಯಮ ರಂಗಗಳಲ್ಲಿ ತಮ್ಮ ಛಾಪು ಮೂಡಿಸಿರುವ ಯಶಸ್ವಿ ಉದ್ಯಮಿಗಳು ತಮ್ಮಅನುಭವವನ್ನು ವಿದ್ಯಾರ್ಥಿಗಳು ಹಾಗೂ ‌ ಉದಯೋನ್ಮುಖ ಉದ್ಯಮಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದಕ್ಕಾಗಿ ವೇದಿಕೆ ಸಜ್ಜುಗೊಂಡಿದೆ.

ಈ ಕಾರ್ಯಕ್ರಮ ಬೆಂಗಳೂರು ಅರಮನೆ ಆವರಣದಲ್ಲಿ ಅಕ್ಟೋಬರ್ 11 ಮತ್ತು 12 ರಂದು ಆಯೋಜಿತವಾಗಿದೆ. ದೇಶದಲ್ಲಿ ಮುಂಚೂಣಿಯಲ್ಲಿರುವ ಯುವ ಉದ್ಯಮಿಗಳು ಸಹ ಭಾಗವಹಿಸಲಿದ್ದಾರೆ. ಜೆರೋಧಾ ಕಂಪನಿ‌ ಸಂಸ್ಥಾಪಕ ಮತ್ತು ಸಿಇಒ, ನಿತಿನ್ ಕಾಮತ್, ಕೂ ಆಪ್,ಸಹ ಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, ನೋಪೋ ನ್ಯಾನೊ ತಂತ್ರಜ್ಞಾನ ಸಿಇಒ ಗಧಾದರ್ ರೆಡ್ಡಿ,ಕ್ರೆಡಿಟ್ ಉಡಾನ್ ಕ್ಯಾಪಿಟಲ್ ಮುಖ್ಯಸ್ಥ ಚೈತನ್ಯಅಡಪ, ಬೌನ್ಸ್ ಸಹ ಸಂಸ್ಥಾಪಕ ಸಿಇಒ ವಿವೇಕಾನಂದ ಹಳ್ಳೇಕೆರೆ, ಗೀತಾ ಮಂಜುನಾಥ್, ನಿರಾಮೈ ಹೆಲ್ತ್ ಅನಾಲಿಟಿಕ್ಸ್,ಸಹ-ಸಂಸ್ಥಾಪಕರು, ಸಾಮೂಹಿಕ ಉದ್ಯಮಶೀಲತೆಗಾಗಿ ಜಾಗತಿಕ ಒಕ್ಕೂಟದ ಮದನ್ ಪದಕಿ, ಫಿಸ್ಡಮ್, ಸಹ-ಸಂಸ್ಥಾಪಕ ಮತ್ತು ಸಿಇಒ ಸುಬ್ರಹ್ಮಣ್ಯ ಎಸ್‌ವಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಡಿ ಮತ್ತು ಸಿಇಒ, ರಾಜಕಿರಣ್ ರೈ, ಸೇರಿದಂತೆ ಇತರರು ಅಕ್ಟೋಬರ್ 11 ರಂದು ‘ಉದ್ಯಮಿಯಾಗು, ಉದ್ಯೋಗ ನೀಡು’ ಒಂದು ದಿನದ ಉದ್ದಿಮೆದಾರರ ಕಾರ್ಯಾಗಾರದಲ್ಲಿ ಭಾಗವಹಿಸುತ್ತಾರೆ.

ಇವರೆಲ್ಲರೂ ಸುಮಾರು 5000 ಮಂದಿ ಯುವಜನತೆ ಮತ್ತು ಉದಯೋನ್ಮುಖ ಉದ್ಯಮಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಉದ್ಯಮದಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ‌ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಯುವಕರಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸುವ ದಿಶೆಯಲ್ಲಿ “ಉದ್ಯಮಿಯಾಗು, ಉದ್ಯೋಗ ನೀಡು” ಪರಿಕಲ್ಪನೆಯಡಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.

ನಮ್ಮ ಯುವಕರು ಯಶಸ್ವಿ ಉದ್ಯಮಿಗಳಾಗಲು ವೇದಿಕೆಯನ್ನು ಒದಗಿಸುವುದು ನಮ್ಮಗುರಿಯಾಗಿದೆ. ಅವರು ಉದ್ಯೋಗ ಹುಡುಕುವ ಬದಲು ಉದ್ಯೋಗ ನೀಡುವವರಾಗಬೇಕೆಂದು ನಾವು ಬಯಸುತ್ತೇವೆ. ಈ ಕಾರ್ಯಗಾರವು ಉದಯೋನ್ಮುಖ ಉದ್ಯಮಿಗಳಿಗೆ ಎಲ್ಲ ಮಾಹಿತಿ, ಮಾರ್ಗದರ್ಶನ ಮತ್ತು ಅಗತ್ಯ ಸಹಾಯವನ್ನು ಒದಗಿಸುತ್ತದೆ” ಎಂದು ಸಚಿವ ನಿರಾಣಿ ಅವರು ಮಾಹಿತಿ ನೀಡಿದರು.

Read Here: Workshop to encourage budding Karnataka entrepreneurs

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು“ಉದ್ಯಮಿಯಾಗು, ಉದ್ಯೋಗ ನೀಡು” ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಲಿದ್ದಾರೆ. ಮರುದಿನ, ಅಕ್ಟೋಬರ್ 12 ರಂದು, ಕೈಗಾರಿಕಾ ಅದಾಲತ್ ನಡೆಯಲಿದೆ. ಈ ಕಾರ್ಯಕ್ರಮ ಕೈಗಾರಿಕೋದ್ಯಮಿಗಳು ಮತ್ತು ಇತರ ಮಧ್ಯಸ್ಥಗಾರರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here