Home ಆರೋಗ್ಯ ಆರು ತಿಂಗಳಲ್ಲಿ ನಿಮ್ಹಾನ್ಸ್‌ಗೆ ನೂರು ವೆಂಟಿಲೇಟರ್: ಬೊಮ್ಮಾಯಿ‌

ಆರು ತಿಂಗಳಲ್ಲಿ ನಿಮ್ಹಾನ್ಸ್‌ಗೆ ನೂರು ವೆಂಟಿಲೇಟರ್: ಬೊಮ್ಮಾಯಿ‌

20
0
One hundred ventilator for Nimhans in six months: Bommai

ಬೆಂಗಳೂರು:

ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ 6 ತಿಂಗಳೊಳಗೆ ನಿಮ್ಹಾನ್ಸ್ ಗೆ ಎರಡು ಹಂತಗಳಲ್ಲಿ 100 ವೆಂಟಿಲೇಟರ್ ಗಳನ್ನು ಪೂರೈಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ನಿಮ್ಹಾನ್ಸ್ ಸಂಸ್ಥೆಯ 25 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ,ನಿಮ್ಹಾನ್ಸ್ ಪ್ರಾದೇಶಿಕವಾಗಿ ವಿಸ್ತರಿಸಬೇಕು. ಇದಕ್ಕಾಗಿ ನಿಮ್ಹಾನ್ಸ್ ಗ್ರಾಮೀಣ ಪ್ರದೇಶದ ಬಡವರಿಗೆ, ಹೆಣ್ಣುಮಕ್ಕಳಿಗೆ ಹಾಗೂ ರೈತರಿಗೆ ತಲುಪಬೇಕು. ಮುಂದಿನ ಆಯವ್ಯಯದಲ್ಲಿ ಮಾನಸಿಕ ಕೇಂದ್ರಗಳ ಸ್ಥಾಪನೆಗೆ ಅನುದಾನ ಮೀಸಲಿರಿಸಲಾಗುವುದು. ಮಾನಸಿಕ ಆರೋಗ್ಯ ಕೇಂದ್ರ ವಿಕೇಂದ್ರೀಕರಣಗೊಂಡು ಸಾಮಾನ್ಯರನ್ನು ತಲುಪಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು.ನಿಮ್ಹಾನ್ಸ್, ಕಿದ್ವಾಯಿ, ಜಯದೇವ ಆಸ್ಪತ್ರೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು.ಒಂದು ದಿನಕ್ಕಿಂತ ಹೆಚ್ಚು ಕಾಲ ಎಕ್ಸ್- ರೇ,ವೆಂಟಿಲೇಟರ್ ಮುಂತಾದ ಸೌಲಭ್ಯಗಳಿಗೆ ಕಾಯುವ ಪರಿಸ್ಥಿತಿ ಇರಬಾರದು.ರಾಜ್ಯದಲ್ಲಿ ಹೆಲ್ತ್ ವಿಷನ್ ರೂಪಿಸಲಾಗಿದ್ದು, ಇದರಲ್ಲಿ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಲಾಗಿದೆ.

ನವಭಾರತದಲ್ಲಿ ಎಲ್ಲಾರಿಗೂ ಸಮಾನ ಅವಕಾಶ , ಶೈಕ್ಷಣಿಕ ಹಾಗೂ ಆರ್ಥಿಕ ಸುಸ್ಥಿರತೆ ದೊರಕುವ ನಿಟ್ಟಿನಲ್ಲಿ ಶ್ರಮಿಸಲಾಗುವುದು.ಮಹಿಳೆಯರು, ಅದರಲ್ಲೂ ಗ್ರಾಮೀಣ ಮಹಿಳೆಯರು ಒತ್ತಡದಲ್ಲಿದ್ದು, ಅವರ ಒತ್ತಡವನ್ನು ಕಡಿಮೆ ಮಾಡಲು ಪ್ರತ್ಯೇಕ ಕೋರ್ಸ್ ಒಂದನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿಯವರು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.ಜನಸಂಖ್ಯೆಗಿಂತ ವೈದ್ಯರು ಕಡಿಮೆ ಇದ್ದಾರೆ ಎನ್ನುವುದನ್ನು ಅರಿತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಆಧ್ಯತೆ ನೀಡುತ್ತಿದ್ದಾರೆ.ಕೋವಿಡ್ ನಂತಹ ಸ್ಥಿತಿಯಲ್ಲಿ ನಿಮ್ಮ ಮಹತ್ವ ಮತ್ತಷ್ಟು ಹೆಚ್ಚಾಗಿದೆ.ಸ್ನಾತಕೋತ್ತರ ವಿದ್ಯಾರ್ಥಿಗಳು ಕೂಡ ಕೋವಿಡ್ ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆ ನೀಡಿದರು.ಕೋವಿಡ್‌ನಂತಹ ಸಾಂಕ್ರಮಿಕ ರೋಗವನ್ನು ಎದುರಿಸಲು ನಿಮ್ಹಾನ್ಸ್ ಪಾತ್ರ ಬಹಳ ದೊಡ್ಡದು.ಕೋವಿಡ್‌ಗೂ ಮೊದಲು ನಮ್ಮಲ್ಲಿ ಲ್ಯಾಬ್ ಇರಲಿಲ್ಲ.ನಿಮ್ಹಾನ್ಸ್ ಇದ್ದರೂ ಪುಣೆಗೆ ಕಳುಹಿಸುತ್ತಿದ್ದವು.ಈಗ ನಮ್ಮಲ್ಲಿ ಲ್ಯಾಬ್ ಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಿದ್ದೇವೆ.ಪಿಪಿಇ ಕಿಟ್ ಗಳನ್ನ ನಮ್ಮಲ್ಲೇ ತಯಾರಿಸುತ್ತಿದ್ದೇವೆ.ಮೆಡಿಕಲ್ ಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಹೆಚ್ಚಿಸಿದ್ದೇವೆ ಎಂದರು.

ಇಲ್ಲಿ ಪದವಿ ಪಡೆದವರು ತಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕವನ್ನ ರೂಡಿಸಿಕೊಳ್ಳಬೇಕು.ಇದು ನಿಮ್ಮ ಭವಿಷ್ಯವಾಗುತ್ತದೆ.ನಿಮ್ಮ ಧನಾತ್ಮಕ ಚಿಂತನೆಗಳು ನಿಮ್ಮ ಗುರಿಯನ್ನ ಮುಟ್ಟಿಸುತ್ತದೆ ಎಂದು ಸಲಹೆ ನೀಡಿದರು.

LEAVE A REPLY

Please enter your comment!
Please enter your name here