ಬೆಳಗಾವಿ: ಅಧಿವೇಶನದ ಆರಂಭದ ದಿನವೇ ಸುವರ್ಣ ಸೌಧದಲ್ಲಿ ಹಾವುಗಳು ಪತ್ತೆಯಾಗಿವೆ. ಸುವರ್ಣ ಸೌಧದ ಮುಖ್ಯ ದ್ವಾರದ ಬಳಿ ಎರಡು ನಾಗರ ಹಾವುಗಳು ಸಿಕ್ಕಿವೆ. ಟೆಂಟ್ ನಿರ್ಮಿಸುವ ಕಬ್ಬಿಣದ ರಾಡ್‌ಗಳಲ್ಲಿ ನಾಗರ ಹಾವುಗಳು ಅಡಗಿ ಕುಳಿತಿದ್ದವು. ಅಧಿವೇಶನ ಆರಂಭದ ದಿನವೇ ಹಾವುಗಳನ್ನ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ. ಉರಗ ರಕ್ಷಕನನ್ನ ಸ್ಥಳಕ್ಕೆ ಕರೆಸಿ ಹಾವುಗಳನ್ನ ರಕ್ಷಣೆ ಮಾಡಿ ಕಾಡಿಗೆ ಶಿಫ್ಟ್ ಮಾಡಲಾಗಿದೆ.