ಕಡತ ಚಿತ್ರ.
ಬೆಂಗಳೂರು: ದೀಪಾವಳಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನವೆಂಬರ್ 6ರಂದು ಬೆಂಗಳೂರು ಕಂಟೋನ್ಮೆಂಟ್ನಿಂದ ತೂತ್ತುಕುಡಿಗೆ ವಿಶೇಷ ರೈಲು ಸಂಚರಿಸಲಿದೆ. ಮರುಪ್ರಯಾಣದ ರೈಲು ನವೆಂಬರ್ 7ರಂದು ಹೊರಡಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 06533 ಬೆಂಗಳೂರು ಕಂಟೋನ್ಮೆಂಟ್–ತೂತ್ತುಕುಡಿ ಎಕ್ಸ್ಪ್ರೆಸ್ ವಿಶೇಷ ರೈಲು ನವೆಂಬರ್ 6ರಂದು ರಾತ್ರಿ 9.45ಕ್ಕೆ ಹೊರಟು, ನವೆಂಬರ್ 7ರಂದು ಮಧ್ಯಾಹ್ನ 12.30ಕ್ಕೆ ತೂತ್ತುಕುಡಿ ತಲುಪಲಿದೆ.
ಮರುಪ್ರಯಾಣದ ರೈಲು ಸಂಖ್ಯೆ 06534 ತೂತ್ತುಕುಡಿ–ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ಪ್ರೆಸ್ ವಿಶೇಷ ರೈಲು ನವೆಂಬರ್ 7ರಂದು ಮಧ್ಯಾಹ್ನ 3.30ಕ್ಕೆ ತೂತ್ತುಕುಡಿಯಿಂದ ಹೊರಟು, ನವೆಂಬರ್ 8ರಂದು ಬೆಳಿಗ್ಗೆ 5.30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಎರಡೂ ದಿಕ್ಕುಗಳಲ್ಲಿ ತಲಾ ಒಂದು ಸಂಚಾರ ಇರಲಿದೆ.
ನಿಲುಗಡೆಗಳು ಮತ್ತು ಬೋಗಿಗಳ ವಿವರ
ಎರಡೂ ದಿಕ್ಕುಗಳಲ್ಲಿ ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗಲ್, ಮಧುರೈ, ವಿರುದುನಗರ, ಸಾತ್ತೂರು, ಕೋವಿಲ್ಪಟ್ಟಿ ಮತ್ತು ತೂತ್ತಿಮೇಲೂರಿನಲ್ಲಿ ರೈಲು ನಿಲುಗಡೆ ಹೊಂದಲಿದೆ.
ರೈಲಿನಲ್ಲಿ ಒಟ್ಟು 20 ಎಲ್ಎಚ್ಬಿ ಬೋಗಿಗಳಿರಲಿವೆ. ಇವುಗಳಲ್ಲಿ ನಾಲ್ಕು ಎಸಿ 3-ಟಿಯರ್, ಆರು ಸ್ಲೀಪರ್ ಕ್ಲಾಸ್, ಎಂಟು ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಜನರೇಟರ್ ಹೊಂದಿರುವ ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಸೇರಿವೆ.
