ಡಿಸೆಂಬರ್ 27ರಿಂದ ಹಿಂದುಪುರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ನಿಲುಗಡೆ
ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಆರಂಭಿಸಲಿದೆ. ಮುಂಬೈನಿಂದ ಬೆಂಗಳೂರಿಗೆ ಮರಳುವ ಸೇವೆ ನವೆಂಬರ್ 2ರಿಂದ, ಬೆಂಗಳೂರಿನಿಂದ ಹೊರಡುವ ಸೇವೆ ನವೆಂಬರ್ 3ರಿಂದ ಪ್ರಾರಂಭವಾಗಲಿದೆ.
ಉದ್ಘಾಟನಾ ಏಕಮುಖ ವಿಶೇಷ ರೈಲು 06503 ನವೆಂಬರ್ 1ರಂದು ಮಧ್ಯಾಹ್ನ 12.15ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ನವೆಂಬರ್ 2ರಂದು ಬೆಳಿಗ್ಗೆ 6.15ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ತಲುಪಲಿದೆ. 16 ಬೋಗಿಗಳ ಈ ರೈಲು ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ, ಲೋಣಾವಳ ಮತ್ತು ಕಲ್ಯಾಣ್ನಲ್ಲಿ ನಿಲುಗಡೆ ಹೊಂದಲಿದೆ.
ವಂದೇ ಭಾರತ್ ಸ್ಲೀಪರ್ ನಿಯಮಿತ ರೈಲುಗಳ ಸಮಯ
ಎಸ್ಎಂವಿಟಿ ಬೆಂಗಳೂರು–ಸಿಎಸ್ಎಂಟಿ ಮುಂಬೈ ರೈಲು 27652 ನವೆಂಬರ್ 3ರಿಂದ ಸಂಚರಿಸಲಿದೆ. ಸೋಮವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲು ಓಡಲಿದ್ದು, ಬೆಂಗಳೂರಿನಿಂದ ರಾತ್ರಿ 7.45ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.55ಕ್ಕೆ ಮುಂಬೈ ತಲುಪಲಿದೆ.
ಮುಂಬೈ–ಬೆಂಗಳೂರು ಮಾರ್ಗದ ರೈಲು 27651 ನವೆಂಬರ್ 2ರಿಂದ ಆರಂಭವಾಗಲಿದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುವ ರೈಲು ಮುಂಬೈನಿಂದ ರಾತ್ರಿ 8.10ಕ್ಕೆ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ನಿಗದಿತ ನಿಲುಗಡೆಗಳು
ರೈಲು 27652 ಅನಂತಪುರದಲ್ಲಿ ರಾತ್ರಿ 10.28/10.30, ಗುಂತಕಲ್ನಲ್ಲಿ 11.30/11.35, ರಾಯಚೂರಿನಲ್ಲಿ ಮರುದಿನ ಬೆಳಿಗ್ಗೆ 1.03/1.05, ಯಾದಗಿರಿಯಲ್ಲಿ 1.43/1.45, ಕಲಬುರಗಿಯಲ್ಲಿ 3.08/3.10, ಸೋಲಾಪುರದಲ್ಲಿ 4.20/4.25, ಪುಣೆಯಲ್ಲಿ 8.00/8.05 ಮತ್ತು ಕಲ್ಯಾಣ್ನಲ್ಲಿ 10.42/10.44ಕ್ಕೆ ನಿಲುಗಡೆ ಹೊಂದಲಿದೆ.
ರೈಲು 27651 ಕಲ್ಯಾಣ್ನಲ್ಲಿ ರಾತ್ರಿ 8.48/8.50, ಪುಣೆಯಲ್ಲಿ 11.40/11.45, ಸೋಲಾಪುರದಲ್ಲಿ ಮರುದಿನ ಬೆಳಿಗ್ಗೆ 3.00/3.05, ಕಲಬುರಗಿಯಲ್ಲಿ 4.13/4.15, ಯಾದಗಿರಿಯಲ್ಲಿ 5.08/5.10, ರಾಯಚೂರಿನಲ್ಲಿ 6.03/6.05, ಗುಂತಕಲ್ನಲ್ಲಿ 7.30/7.35 ಮತ್ತು ಅನಂತಪುರದಲ್ಲಿ 8.38/8.40ಕ್ಕೆ ನಿಲುಗಡೆ ಹೊಂದಲಿದೆ.
ಈ ಸೇವೆಗೆ ಎಂಟು ಮೋಟಾರ್ ಕಾರ್, ನಾಲ್ಕು ಟ್ರೇಲರ್, ಎರಡು ನಾನ್-ಡ್ರೈವಿಂಗ್ ಟ್ರೇಲರ್ ಮತ್ತು ಎರಡು ಡ್ರೈವಿಂಗ್ ಟ್ರೇಲರ್ ಕಾರ್ ಬೋಗಿಗಳನ್ನು ಒಳಗೊಂಡ 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಬಳಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
