Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ರಾತ್ರಿ ನಗರ ಪ್ರದಕ್ಷಿಣೆ: ಪಾದಚಾರಿ ಮಾರ್ಗ ದುರಸ್ತಿ, ಒತ್ತುವರಿ ತೆರವು, ವೈಟ್ ಟಾಪಿಂಗ್ ಗುಣಮಟ್ಟ ಪರಿಶೀಲನೆಗೆ ಸೂಚನೆ
  • ಬೆಂಗಳೂರು ನಗರ

ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ರಾತ್ರಿ ನಗರ ಪ್ರದಕ್ಷಿಣೆ: ಪಾದಚಾರಿ ಮಾರ್ಗ ದುರಸ್ತಿ, ಒತ್ತುವರಿ ತೆರವು, ವೈಟ್ ಟಾಪಿಂಗ್ ಗುಣಮಟ್ಟ ಪರಿಶೀಲನೆಗೆ ಸೂಚನೆ

The Bengaluru Live November 21, 2026 7:18 PM 1 minute read
ರಾತ್ರಿ ವೇಳೆ ವಾಹನದ ಪಕ್ಕದ ಪಾದಚಾರಿ ಮಾರ್ಗದಲ್ಲಿ ನಿಂತಿರುವ ಅಧಿಕಾರಿಗಳು, ನೆಲದ ಮೇಲೆ ಕಸ ಮತ್ತು ಹಿಂದೆ ಕಲ್ಲಿನ ಗೋಡೆ

ಶುಕ್ರವಾರ ರಾತ್ರಿ ಆಯುಕ್ತರ ನಗರ ಪ್ರದಕ್ಷಿಣೆ ವೇಳೆ ಪಾದಚಾರಿ ಮಾರ್ಗ ಪರಿಶೀಲಿಸುತ್ತಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು. ಚಿತ್ರ: ಬೆಂಗಳೂರು ಕೇಂದ್ರ ನಗರ ಪಾಲಿಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಸ್ಥಿತಿಗತಿ ಪರಿಶೀಲಿಸಲು ಪಾಲಿಕೆಯ ಆಯುಕ್ತ ಜಗದೀಶ್ ಜಿ ಅವರು ಶುಕ್ರವಾರ ರಾತ್ರಿ ನಗರ ಪ್ರದಕ್ಷಿಣೆ ನಡೆಸಿದರು ಎಂದು ಶನಿವಾರ ಹೊರಡಿಸಿದ ಮಾಧ್ಯಮ ಪ್ರಕಟಣೆ ತಿಳಿಸಿದೆ. ರಸ್ತೆ, ಪಾದಚಾರಿ ಮಾರ್ಗ ಒತ್ತುವರಿ, ಸ್ವಚ್ಛತೆ, ಹಸಿರೀಕರಣ ಹಾಗೂ ಬೀದಿ ದೀಪಗಳ ನಿರ್ವಹಣೆಯನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಟ್ರಿನಿಟಿ ವೃತ್ತದ ಬಳಿ ಪಾದಚಾರಿ ಮಾರ್ಗದಲ್ಲಿ ಸಂಗ್ರಹವಾಗಿರುವ ಚರಂಡಿ ಹೂಳಿನ ತ್ಯಾಜ್ಯವನ್ನು ತೆರವುಗೊಳಿಸುವುದು, ಅಸ್ತವ್ಯಸ್ತವಾಗಿರುವ ವಿದ್ಯುತ್ ಮತ್ತು ಇತರೆ ಕೇಬಲ್‌ಗಳನ್ನು ಸಮರ್ಪಕವಾಗಿ ಅಳವಡಿಸುವುದು, ಅಪಾಯಕಾರಿಯಾಗಿ ಚಾಚಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಮರಗಳ ಸುತ್ತ ಟ್ರೀ ಪಿಟ್ ನಿರ್ಮಿಸುವುದು, ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುವುದು ಹಾಗೂ ಹಾನಿಗೊಳಗಾದ ಪಾದಚಾರಿ ಮಾರ್ಗವನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಭಾಸ್ಕರನ್ ರಸ್ತೆಯಲ್ಲಿ ಈ ಹಿಂದೆ ರಸ್ತೆ ಮೂಲಸೌಕರ್ಯ ಇಲಾಖೆಯಿಂದ ನಿರ್ಮಿಸಲಾಗಿದ್ದ ವೈಟ್ ಟಾಪಿಂಗ್ ರಸ್ತೆಯ ಬದಿಯಲ್ಲಿ ಕುಸಿತ ಉಂಟಾಗಿರುವುದನ್ನು ಅವರು ಗಮನಿಸಿದರು. ಬಿ-ಸ್ಮೈಲ್ ಸಂಸ್ಥೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ಕುಸಿದಿರುವ ಭಾಗವನ್ನು ಶೀಘ್ರವಾಗಿ ದುರಸ್ತಿಗೊಳಿಸುವಂತೆ ನಿರ್ದೇಶನ ನೀಡಿದರು.

ಹಳೇ ಮದ್ರಾಸ್ ರಸ್ತೆಯಲ್ಲಿ ಸಂಚರಿಸುವಾಗ, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಬಳಕೆಯಲ್ಲಿಲ್ಲದ ಹಳೆಯ ವಿದ್ಯುತ್ ಕಂಬಗಳು, ಅನಧಿಕೃತ ಜಾಹೀರಾತು ಕಂಬಗಳು ಹಾಗೂ ಅನಗತ್ಯ ಬಸ್ ತಂಗುದಾಣಗಳನ್ನು ತೆರವುಗೊಳಿಸಲು ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಅಡೆತಡೆ ಮತ್ತು ಒತ್ತುವರಿಗಳನ್ನು ತೆರವುಗೊಳಿಸಲು ಎಲ್ಲಾ ಕಾರ್ಯಪಾಲಕ ಅಭಿಯಂತರರಿಗೆ ಅವರು ಸೂಚಿಸಿದರು.

ಲೈಫ್‌ಸ್ಟೈಲ್ ವೃತ್ತದಿಂದ ರಿಚ್ಮಂಡ್ ರಸ್ತೆಯವರೆಗೆ ಪಾದಚಾರಿ ಮಾರ್ಗದಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯುವ ಅಂಗಡಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ದಂಡ ವಿಧಿಸಿ ತ್ಯಾಜ್ಯ ತೆರವುಗೊಳಿಸಲು ಸೂಚಿಸಿದರು. ಪಾದಚಾರಿ ಮಾರ್ಗದಲ್ಲಿರುವ ತಳ್ಳುವ ಗಾಡಿಗಳನ್ನು ತೆರವುಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಮತ್ತು ಪಕ್ಷಿಗಳಿಗೆ ಆಹಾರ ನೀಡುವುದರಿಂದ ಉಂಟಾಗುವ ಸ್ವಚ್ಛತಾ ಸಮಸ್ಯೆ ನಿಯಂತ್ರಿಸುವುದು, ಅನಗತ್ಯವಾಗಿ ಬೆಳೆದಿರುವ ಹಾಗೂ ಅಪಾಯಕಾರಿಯಾಗಿ ಚಾಚಿಕೊಂಡಿರುವ ಕೊಂಬೆಗಳನ್ನು ಕತ್ತರಿಸಿ ತಕ್ಷಣ ತೆರವುಗೊಳಿಸುವುದು, ಕಾರ್ಯನಿರ್ವಹಿಸದ ಬೀದಿ ದೀಪಗಳನ್ನು ದುರಸ್ತಿಗೊಳಿಸಿ ಅಗತ್ಯ ಸ್ಥಳಗಳಲ್ಲಿ ಹೊಸ ಬೀದಿ ದೀಪ ಅಳವಡಿಸುವಂತೆ ಅವರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ವೈಟ್ ಟಾಪಿಂಗ್ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಪರಿಶೀಲಿಸಿದ ಆಯುಕ್ತರು, ನಿಗದಿತ ತಾಂತ್ರಿಕ ಮಾನದಂಡಗಳಂತೆ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ, ಪ್ರತಿ ಹಂತದಲ್ಲೂ ಗುಣಮಟ್ಟದ ಮೇಲೆ ನಿಗಾ ವಹಿಸುವಂತೆ ಮತ್ತು ಕಳಪೆ ಕಾಮಗಾರಿಗೆ ಅವಕಾಶ ನೀಡದಂತೆ ಅಭಿಯಂತರರಿಗೆ ಸೂಚಿಸಿದರು. ರಸ್ತೆ ಕಾಮಗಾರಿ ಸ್ಥಳಗಳಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಬ್ಯಾರಿಕೇಡಿಂಗ್, ಎಚ್ಚರಿಕೆ ಫಲಕ ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆ ಅಳವಡಿಸಬೇಕು, ಸಾಧ್ಯವಾದಷ್ಟು ಕಡಿಮೆ ಸಂಚಾರ ದಟ್ಟಣೆ ಉಂಟಾಗುವಂತೆ ಕಾಮಗಾರಿ ಯೋಜಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಅಭಿವೃದ್ಧಿ ಅಪರ ಆಯುಕ್ತ ವೆಂಕಟಾ ಚಲಪತಿ ಆರ್, ಜಂಟಿ ಆಯುಕ್ತರಾದ ಹೇಮಂತ್ ಶರಣ್ ಮತ್ತು ಸಪ್ತಶ್ರೀ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಮತ್ತು ಹರಿದಾಸ್, ಅಧೀಕ್ಷಕ ಅಭಿಯಂತರ ಚಂದ್ರಶೇಖರ್, ಆರೋಗ್ಯಾಧಿಕಾರಿ ಶಿವಕುಮಾರ್, ಡಿಜಿಎಂ ಭೀಮೇಶ್ ನಾಯಕ್, ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

About the Author

The Bengaluru Live

Administrator

Visit Website View All Posts

Post navigation

Previous: ಹಿರಿಯೂರು ಅಭಿವೃದ್ಧಿಗೆ ಈಗಾಗಲೇ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ, 3 ಸಾವಿರ ಮನೆ ಮಂಜೂರು, 17,434 ನಿವೇಶನ ಹಂಚಿಕೆ: ಸಿಎಂ ಶಿವಕುಮಾರ್
Next: ನವೆಂಬರ್ 25ರಂದು ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಜಲರೇಚಕ ಯಂತ್ರಾಗಾರ 12 ಗಂಟೆ ಸ್ಥಗಿತ: ನೀರು ಸಂಗ್ರಹಿಸಿಡಲು ಜಲಮಂಡಳಿ ಮನವಿ

Related Stories

ರಾತ್ರಿ ವೇಳೆ ರಸ್ತೆಯಲ್ಲಿ ಬಿಳಿ ಅಂಗಿ ಧರಿಸಿದ ಅಧಿಕಾರಿಗಳು ನಿಂತಿದ್ದು ಒಬ್ಬರು ಜೆಟ್ ಹೋಸ್‌ನಿಂದ ನೀರು ಚಿಮ್ಮಿಸುತ್ತಿದ್ದಾರೆ
  • ಬೆಂಗಳೂರು ನಗರ

ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗಕ್ಕೆ ಒಂದು ಜೆಟ್ ಸ್ಪ್ರೇ ವಾಹನ: ವಿಧಾನಸೌಧ ಬಳಿ ಪ್ರಾತ್ಯಕ್ಷಿಕೆ ಪರಿಶೀಲಿಸಿದ ಆಯುಕ್ತ ಜಗದೀಶ್

The Bengaluru Live November 21, 2026 7:36 PM
ನೀಲಿ ಆಕಾಶದ ಕೆಳಗೆ ಬೀದಿ ದೀಪದ ಕಂಬದ ಪಕ್ಕದಲ್ಲಿರುವ ನೀರು ಪಂಪಿಂಗ್ ಕೇಂದ್ರದ ದೊಡ್ಡ ನೀಲಿ ಕೊಳವೆಗಳು ಮತ್ತು ಒತ್ತಡ ಟ್ಯಾಂಕ್‌ಗಳು
  • ಬೆಂಗಳೂರು ನಗರ

ನವೆಂಬರ್ 25ರಂದು ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಜಲರೇಚಕ ಯಂತ್ರಾಗಾರ 12 ಗಂಟೆ ಸ್ಥಗಿತ: ನೀರು ಸಂಗ್ರಹಿಸಿಡಲು ಜಲಮಂಡಳಿ ಮನವಿ

The Bengaluru Live November 21, 2026 7:29 PM
ಕೊಠಡಿಯಲ್ಲಿ ಇತರ ಮಕ್ಕಳ ಪಕ್ಕದಲ್ಲಿ ಕಾಗದ ಹಿಡಿದ ಮಗುವಿನೊಂದಿಗೆ ನಿಂತಿರುವ ಮಹಿಳೆಯರು
  • ಬೆಂಗಳೂರು ನಗರ

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ

The Bengaluru Live November 21, 2026 5:07 PM

Latest Post

ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗಕ್ಕೆ ಒಂದು ಜೆಟ್ ಸ್ಪ್ರೇ ವಾಹನ: ವಿಧಾನಸೌಧ ಬಳಿ ಪ್ರಾತ್ಯಕ್ಷಿಕೆ ಪರಿಶೀಲಿಸಿದ ಆಯುಕ್ತ ಜಗದೀಶ್ ರಾತ್ರಿ ವೇಳೆ ರಸ್ತೆಯಲ್ಲಿ ಬಿಳಿ ಅಂಗಿ ಧರಿಸಿದ ಅಧಿಕಾರಿಗಳು ನಿಂತಿದ್ದು ಒಬ್ಬರು ಜೆಟ್ ಹೋಸ್‌ನಿಂದ ನೀರು ಚಿಮ್ಮಿಸುತ್ತಿದ್ದಾರೆ
  • ಬೆಂಗಳೂರು ನಗರ

ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗಕ್ಕೆ ಒಂದು ಜೆಟ್ ಸ್ಪ್ರೇ ವಾಹನ: ವಿಧಾನಸೌಧ ಬಳಿ ಪ್ರಾತ್ಯಕ್ಷಿಕೆ ಪರಿಶೀಲಿಸಿದ ಆಯುಕ್ತ ಜಗದೀಶ್

November 21, 2026 7:36 PM
ಹೋರಾಟ ಕೈಬಿಡುವಂತೆ ಆಶಾ ಕಾರ್ಯಕರ್ತೆಯರಿಗೆ ಸಿಎಂ ಶಿವಕುಮಾರ್ ಮನವಿ: ಸಮಗ್ರ ಮತ್ತು ಶಾಶ್ವತ ಪರಿಹಾರಕ್ಕೆ ಸರ್ಕಾರ ಚಿಂತನೆ ಗೃಹ ಕಚೇರಿಯಲ್ಲಿ ಗುಲಾಬಿ ಬಣ್ಣದ ಉಡುಗೆಯ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಒಬ್ಬ ಸಚಿವರು
  • ಕರ್ನಾಟಕ

ಹೋರಾಟ ಕೈಬಿಡುವಂತೆ ಆಶಾ ಕಾರ್ಯಕರ್ತೆಯರಿಗೆ ಸಿಎಂ ಶಿವಕುಮಾರ್ ಮನವಿ: ಸಮಗ್ರ ಮತ್ತು ಶಾಶ್ವತ ಪರಿಹಾರಕ್ಕೆ ಸರ್ಕಾರ ಚಿಂತನೆ

November 21, 2026 7:29 PM
ನವೆಂಬರ್ 25ರಂದು ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಜಲರೇಚಕ ಯಂತ್ರಾಗಾರ 12 ಗಂಟೆ ಸ್ಥಗಿತ: ನೀರು ಸಂಗ್ರಹಿಸಿಡಲು ಜಲಮಂಡಳಿ ಮನವಿ ನೀಲಿ ಆಕಾಶದ ಕೆಳಗೆ ಬೀದಿ ದೀಪದ ಕಂಬದ ಪಕ್ಕದಲ್ಲಿರುವ ನೀರು ಪಂಪಿಂಗ್ ಕೇಂದ್ರದ ದೊಡ್ಡ ನೀಲಿ ಕೊಳವೆಗಳು ಮತ್ತು ಒತ್ತಡ ಟ್ಯಾಂಕ್‌ಗಳು
  • ಬೆಂಗಳೂರು ನಗರ

ನವೆಂಬರ್ 25ರಂದು ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಜಲರೇಚಕ ಯಂತ್ರಾಗಾರ 12 ಗಂಟೆ ಸ್ಥಗಿತ: ನೀರು ಸಂಗ್ರಹಿಸಿಡಲು ಜಲಮಂಡಳಿ ಮನವಿ

November 21, 2026 7:29 PM
ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ರಾತ್ರಿ ನಗರ ಪ್ರದಕ್ಷಿಣೆ: ಪಾದಚಾರಿ ಮಾರ್ಗ ದುರಸ್ತಿ, ಒತ್ತುವರಿ ತೆರವು, ವೈಟ್ ಟಾಪಿಂಗ್ ಗುಣಮಟ್ಟ ಪರಿಶೀಲನೆಗೆ ಸೂಚನೆ ರಾತ್ರಿ ವೇಳೆ ವಾಹನದ ಪಕ್ಕದ ಪಾದಚಾರಿ ಮಾರ್ಗದಲ್ಲಿ ನಿಂತಿರುವ ಅಧಿಕಾರಿಗಳು, ನೆಲದ ಮೇಲೆ ಕಸ ಮತ್ತು ಹಿಂದೆ ಕಲ್ಲಿನ ಗೋಡೆ
  • ಬೆಂಗಳೂರು ನಗರ

ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ರಾತ್ರಿ ನಗರ ಪ್ರದಕ್ಷಿಣೆ: ಪಾದಚಾರಿ ಮಾರ್ಗ ದುರಸ್ತಿ, ಒತ್ತುವರಿ ತೆರವು, ವೈಟ್ ಟಾಪಿಂಗ್ ಗುಣಮಟ್ಟ ಪರಿಶೀಲನೆಗೆ ಸೂಚನೆ

November 21, 2026 7:18 PM
ಹಿರಿಯೂರು ಅಭಿವೃದ್ಧಿಗೆ ಈಗಾಗಲೇ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ, 3 ಸಾವಿರ ಮನೆ ಮಂಜೂರು, 17,434 ನಿವೇಶನ ಹಂಚಿಕೆ: ಸಿಎಂ ಶಿವಕುಮಾರ್ ಹಿರಿಯೂರಿನ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಟೆಂಟ್‌ನ ಕೆಳಗೆ ನೆರೆದ ಜನರತ್ತ ಕೈ ಬೀಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಹಿರಿಯೂರು ಅಭಿವೃದ್ಧಿಗೆ ಈಗಾಗಲೇ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ, 3 ಸಾವಿರ ಮನೆ ಮಂಜೂರು, 17,434 ನಿವೇಶನ ಹಂಚಿಕೆ: ಸಿಎಂ ಶಿವಕುಮಾರ್

November 21, 2026 7:04 PM
ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆ ಸಿದ್ಧತೆ ಪರಿಶೀಲಿಸಿದ ಸಚಿವ ಮುನಿಯಪ್ಪ: 224 ಯುವ ಸಂಸತ್ ವಿದ್ಯಾರ್ಥಿಗಳು ಭಾಗಿ ವಿಕಾಸ ಸೌಧದ ಸಿದ್ಧತಾ ಸಭೆಯಲ್ಲಿ ಸಭಾ ಮೇಜಿನ ಸುತ್ತ ಕುಳಿತಿರುವ ಸಚಿವರು ಮತ್ತು ಅಧಿಕಾರಿಗಳು
  • ಕರ್ನಾಟಕ

ನವೆಂಬರ್ 26ರ ಮೈಸೂರು ಸಂವಿಧಾನ ದಿನಾಚರಣೆ ಸಿದ್ಧತೆ ಪರಿಶೀಲಿಸಿದ ಸಚಿವ ಮುನಿಯಪ್ಪ: 224 ಯುವ ಸಂಸತ್ ವಿದ್ಯಾರ್ಥಿಗಳು ಭಾಗಿ

November 21, 2026 6:56 PM

ನೀವು ತಪ್ಪಿಸಿಕೊಂಡಿರಬಹುದು

ರಾತ್ರಿ ವೇಳೆ ರಸ್ತೆಯಲ್ಲಿ ಬಿಳಿ ಅಂಗಿ ಧರಿಸಿದ ಅಧಿಕಾರಿಗಳು ನಿಂತಿದ್ದು ಒಬ್ಬರು ಜೆಟ್ ಹೋಸ್‌ನಿಂದ ನೀರು ಚಿಮ್ಮಿಸುತ್ತಿದ್ದಾರೆ
  • ಬೆಂಗಳೂರು ನಗರ

ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗಕ್ಕೆ ಒಂದು ಜೆಟ್ ಸ್ಪ್ರೇ ವಾಹನ: ವಿಧಾನಸೌಧ ಬಳಿ ಪ್ರಾತ್ಯಕ್ಷಿಕೆ ಪರಿಶೀಲಿಸಿದ ಆಯುಕ್ತ ಜಗದೀಶ್

The Bengaluru Live November 21, 2026 7:36 PM
ಗೃಹ ಕಚೇರಿಯಲ್ಲಿ ಗುಲಾಬಿ ಬಣ್ಣದ ಉಡುಗೆಯ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಒಬ್ಬ ಸಚಿವರು
  • ಕರ್ನಾಟಕ

ಹೋರಾಟ ಕೈಬಿಡುವಂತೆ ಆಶಾ ಕಾರ್ಯಕರ್ತೆಯರಿಗೆ ಸಿಎಂ ಶಿವಕುಮಾರ್ ಮನವಿ: ಸಮಗ್ರ ಮತ್ತು ಶಾಶ್ವತ ಪರಿಹಾರಕ್ಕೆ ಸರ್ಕಾರ ಚಿಂತನೆ

The Bengaluru Live November 21, 2026 7:29 PM
ನೀಲಿ ಆಕಾಶದ ಕೆಳಗೆ ಬೀದಿ ದೀಪದ ಕಂಬದ ಪಕ್ಕದಲ್ಲಿರುವ ನೀರು ಪಂಪಿಂಗ್ ಕೇಂದ್ರದ ದೊಡ್ಡ ನೀಲಿ ಕೊಳವೆಗಳು ಮತ್ತು ಒತ್ತಡ ಟ್ಯಾಂಕ್‌ಗಳು
  • ಬೆಂಗಳೂರು ನಗರ

ನವೆಂಬರ್ 25ರಂದು ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಜಲರೇಚಕ ಯಂತ್ರಾಗಾರ 12 ಗಂಟೆ ಸ್ಥಗಿತ: ನೀರು ಸಂಗ್ರಹಿಸಿಡಲು ಜಲಮಂಡಳಿ ಮನವಿ

The Bengaluru Live November 21, 2026 7:29 PM
ರಾತ್ರಿ ವೇಳೆ ವಾಹನದ ಪಕ್ಕದ ಪಾದಚಾರಿ ಮಾರ್ಗದಲ್ಲಿ ನಿಂತಿರುವ ಅಧಿಕಾರಿಗಳು, ನೆಲದ ಮೇಲೆ ಕಸ ಮತ್ತು ಹಿಂದೆ ಕಲ್ಲಿನ ಗೋಡೆ
  • ಬೆಂಗಳೂರು ನಗರ

ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ರಾತ್ರಿ ನಗರ ಪ್ರದಕ್ಷಿಣೆ: ಪಾದಚಾರಿ ಮಾರ್ಗ ದುರಸ್ತಿ, ಒತ್ತುವರಿ ತೆರವು, ವೈಟ್ ಟಾಪಿಂಗ್ ಗುಣಮಟ್ಟ ಪರಿಶೀಲನೆಗೆ ಸೂಚನೆ

The Bengaluru Live November 21, 2026 7:18 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗಕ್ಕೆ ಒಂದು ಜೆಟ್ ಸ್ಪ್ರೇ ವಾಹನ: ವಿಧಾನಸೌಧ ಬಳಿ ಪ್ರಾತ್ಯಕ್ಷಿಕೆ ಪರಿಶೀಲಿಸಿದ ಆಯುಕ್ತ ಜಗದೀಶ್
  • ಹೋರಾಟ ಕೈಬಿಡುವಂತೆ ಆಶಾ ಕಾರ್ಯಕರ್ತೆಯರಿಗೆ ಸಿಎಂ ಶಿವಕುಮಾರ್ ಮನವಿ: ಸಮಗ್ರ ಮತ್ತು ಶಾಶ್ವತ ಪರಿಹಾರಕ್ಕೆ ಸರ್ಕಾರ ಚಿಂತನೆ
  • ನವೆಂಬರ್ 25ರಂದು ಕಾವೇರಿ ನೀರು ಸರಬರಾಜಿನ ಎಲ್ಲಾ ಹಂತಗಳ ಜಲರೇಚಕ ಯಂತ್ರಾಗಾರ 12 ಗಂಟೆ ಸ್ಥಗಿತ: ನೀರು ಸಂಗ್ರಹಿಸಿಡಲು ಜಲಮಂಡಳಿ ಮನವಿ
  • ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ರಾತ್ರಿ ನಗರ ಪ್ರದಕ್ಷಿಣೆ: ಪಾದಚಾರಿ ಮಾರ್ಗ ದುರಸ್ತಿ, ಒತ್ತುವರಿ ತೆರವು, ವೈಟ್ ಟಾಪಿಂಗ್ ಗುಣಮಟ್ಟ ಪರಿಶೀಲನೆಗೆ ಸೂಚನೆ
©Copyright 2025 The Bengaluru Live All rights reserved. | MoreNews by AF themes.