ಬೆಂಗಳೂರು: ನವೆಂಬರ್ 3ರಂದು ಹೊರಡುವ ಕೆಎಸ್ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯೆ 90 ನಿಮಿಷ ನಿಯಂತ್ರಿಸಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ತೊಳಹುಣಸೆ–ದಾವಣಗೆರೆ ನಡುವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 199/ಎಯಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮತ್ತು ಪ್ರಿಕಾಸ್ಟ್ ಆರ್ಸಿಸಿ ಬಾಕ್ಸ್ಗಳ ಜೋಡಣೆ ಕಾಮಗಾರಿಯಿಂದ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸಪೇಟೆಯ ಹಳಿ ದುರಸ್ತಿ ಕಾಮಗಾರಿಗೂ ಪ್ರತ್ಯೇಕ ಬದಲಾವಣೆಗಳನ್ನು ಪ್ರಕಟಿಸಲಾಗಿದೆ.
- ರದ್ದು: ನವೆಂಬರ್ 2ರಂದು ಹೊರಡುವ ರೈಲು 16214 ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ದೈನಂದಿನ ಎಕ್ಸ್ಪ್ರೆಸ್ ಹಾಗೂ ನವೆಂಬರ್ 3ರಂದು ಹೊರಡುವ ರೈಲು 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್.
- ಮಾರ್ಗ ಬದಲಾವಣೆ: ನವೆಂಬರ್ 3ರಂದು ಹೊರಡುವ ರೈಲು 56529 ಹರಿಹರ–ಹೊಸಪೇಟೆ ದೈನಂದಿನ ಪ್ಯಾಸೆಂಜರ್ ಹರಿಹರ–ಅಮರಾವತಿ ಕಾಲೋನಿ–ತೇಲಗಿ ಮಾರ್ಗದಲ್ಲಿ ಸಂಚರಿಸಲಿದೆ. ದಾವಣಗೆರೆ ಮತ್ತು ತೊಳಹುಣಸೆ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.
- ಮಾರ್ಗಮಧ್ಯೆ ನಿಯಂತ್ರಣ: ನವೆಂಬರ್ 2ರಂದು ಹೊರಡುವ ರೈಲು 11022 ತಿರುನೆಲ್ವೇಲಿ–ದಾದರ್ ಎಕ್ಸ್ಪ್ರೆಸ್ಗೆ 45 ನಿಮಿಷ; ನವೆಂಬರ್ 3ರಂದು ಹೊರಡುವ ರೈಲು 12079 ಕೆಎಸ್ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಜನಶತಾಬ್ದಿಗೆ 90 ನಿಮಿಷ.
ಹೊಸಪೇಟೆಯ ಹಳಿ ದುರಸ್ತಿ ಕಾಮಗಾರಿಯಿಂದ ರೈಲು 17226 ಎಸ್ಎಸ್ಎಸ್ ಹುಬ್ಬಳ್ಳಿ–ನರಸಾಪುರ ಅಮರಾವತಿ ಎಕ್ಸ್ಪ್ರೆಸ್ ನವೆಂಬರ್ 2, 7, 9, 14 ಮತ್ತು 16ರಂದು ಹುಬ್ಬಳ್ಳಿಯಿಂದ 45 ನಿಮಿಷ ತಡವಾಗಿ ಹೊರಡಲಿದೆ. ನವೆಂಬರ್ 9ರಂದು ಹೆಚ್ಚುವರಿಯಾಗಿ ಮಾರ್ಗಮಧ್ಯೆ 15 ನಿಮಿಷ ನಿಯಂತ್ರಿಸಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
