ಬೆಂಗಳೂರು: ಗ್ರಾಮೀಣ ನಿರುದ್ಯೋಗಿ ಆಸಕ್ತರಿಗಾಗಿ ಅಣಬೆ ಬೇಸಾಯದ 10 ದಿನಗಳ ಉಚಿತ ತರಬೇತಿ ನವೆಂಬರ್ 12ರಿಂದ ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಆರಂಭವಾಗಲಿದೆ.
ಅರ್ಜಿದಾರರು 18ರಿಂದ 50 ವರ್ಷದವರಾಗಿರಬೇಕು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಅಥವಾ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಹೊಂದಿರಬೇಕು. ನೋಂದಣಿಗೆ ನವೆಂಬರ್ 12 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸೊಣ್ಣಹಳ್ಳಿಪುರ, ಹಸಿಗಾಳ ಅಂಚೆ, ಹೊಸಕೋಟೆ ತಾಲ್ಲೂಕಿನ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು. ಪ್ರಕಟಣೆಯಲ್ಲಿ ನೀಡಿರುವ ದೂರವಾಣಿ ಸಂಖ್ಯೆಗಳು: 6363139123, 9591514154, 9686248369 ಮತ್ತು 9886935603.
