Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

The Bengaluru Live November 23, 2026 12:10 PM 1 minute read
ಸಭಾಂಗಣದಲ್ಲಿ ಸಾಲಾಗಿ ಕುಳಿತಿರುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಭೆಯಲ್ಲಿ ಅಧಿಕಾರಿಗಳು. ಚಿತ್ರ: ಬೆಂಗಳೂರು ದಕ್ಷಿಣ ನಗರ ಪಾಲಿಕೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಮುಂಬರುವ ಬೆಂಗಳೂರು ಜಾತ್ರೆಯನ್ನು ಜನೋತ್ಸವವಾಗಿ ಯಶಸ್ವಿಗೊಳಿಸಲು ಹಾಗೂ ನಾಗರಿಕರ ಮೂಲಸೌಕರ್ಯ ಸಮಸ್ಯೆಗಳನ್ನು ಆಲಿಸಲು ವಿವಿಧ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯೂಎ) ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ನಾಗರಿಕರು ಮತ್ತು ಆರ್‌ಡಬ್ಲ್ಯೂಎಗಳು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದ್ದಾರೆ ಎಂದು ನವೆಂಬರ್ 23ರಂದು ಹೊರಡಿಸಿದ ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 4ರಿಂದ 13ರವರೆಗೆ ನಡೆಯಲಿರುವ ಬೆಂಗಳೂರು ಜಾತ್ರೆಯನ್ನು ಈ ಬಾರಿ ವಿಧಾನಸೌಧದ ಸುತ್ತಮುತ್ತಲಿಗೆ ಸೀಮಿತಗೊಳಿಸದೆ ವಿಕೇಂದ್ರೀಕರಿಸಲಾಗುತ್ತಿದೆ ಎಂದು ಆಯುಕ್ತರು ಹೇಳಿದರು. ಪಾಲಿಕೆಯ ಬೊಮ್ಮನಹಳ್ಳಿ ಮತ್ತು ಜಯನಗರ ವಲಯಗಳ ಸುಮಾರು 15ರಿಂದ 20 ಉದ್ಯಾನವನಗಳು, ಕೆರೆ ಆವರಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಕಲಾವಿದರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಪ್ರತಿಭಾ ಪ್ರದರ್ಶನ, ರಂಗೋಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹೊರಗಿನಿಂದ ತಂಡಗಳನ್ನು ಕರೆಸುವ ಬದಲು ಆಯಾ ವಾರ್ಡ್‌ಗಳ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಲು ಆರ್‌ಡಬ್ಲ್ಯೂಎಗಳು ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೋರಮಂಗಲ, ಬಿಟಿಎಂ ಲೇಔಟ್ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆನ್-ಸ್ಟ್ರೀಟ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದ್ದು, ಒಂದೆರಡು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ವಾಣಿಜ್ಯ ಕಟ್ಟಡಗಳ ಬೇಸ್‌ಮೆಂಟ್ ಪಾರ್ಕಿಂಗ್ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವ ಬಗ್ಗೆ ಟೌನ್ ಪ್ಲಾನಿಂಗ್ ಅಧಿಕಾರಿಗಳು ಪರಿಶೀಲಿಸಿ ದಂಡ ವಿಧಿಸಲಿದ್ದಾರೆ ಹಾಗೂ ಫುಟ್‌ಪಾತ್ ಮೇಲಿನ ಶಾಶ್ವತ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್ ಬಳಿಯ ಕೆ-100 ರಾಜಕಾಲುವೆಯಲ್ಲಿ ಹೂಳು ತುಂಬಿ ಹಾಗೂ ತ್ಯಾಜ್ಯ ಎಸೆಯುತ್ತಿರುವುದರಿಂದ ನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ನಿವಾಸಿಗಳು ಆಯುಕ್ತರ ಗಮನಕ್ಕೆ ತಂದರು. ಸರ್ಜಾಪುರ ಮುಖ್ಯರಸ್ತೆಗೆ ಸಮಾನಾಂತರವಾಗಿರುವ ಕೋರಮಂಗಲ 1ನೇ ಕ್ರಾಸ್ ಸರ್ವಿಸ್ ರಸ್ತೆಯಲ್ಲಿ ಸಿಎನ್‌ಜಿ ಪಂಪ್‌ನಿಂದಾಗಿ ನೂರಾರು ಆಟೋ ಮತ್ತು ಟ್ಯಾಕ್ಸಿಗಳು ಸಾಲುಗಟ್ಟಿ ನಿಂತು ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸೋಮಸುಂದರಪಾಳ್ಯದಿಂದ ಕೂಡ್ಲು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿ ಒಳಚರಂಡಿ ಚೇಂಬರ್‌ಗಳು ಅಪಾಯಕಾರಿಯಾಗಿರುವುದು ಹಾಗೂ ಹರಳೂರಿನ ಸಿಲ್ವರ್ ಕೌಂಟಿ ರಸ್ತೆಯ ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ತಂದರು.

ಎಚ್‌ಎಸ್‌ಆರ್ ಲೇಔಟ್‌ನ ಶಾಲಿನಿ ಮೈದಾನ ಮತ್ತು ಎನ್‌ಎಎಚ್ ಮೈದಾನದಲ್ಲಿ ರಾತ್ರಿ ವೇಳೆ ಮದ್ಯದ ಬಾಟಲಿಗಳು ಮತ್ತು ಕಸದ ರಾಶಿ ಬೀಳುತ್ತಿದೆ. ಎಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್‌ನ ಮೈ ಬೇಬಿ ಸ್ಟೋರ್ ಬಳಿಯ ಸ್ಕೈವಾಕ್ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಲಿಫ್ಟ್ ಅಳವಡಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಹಾಗೂ 24ನೇ ಮುಖ್ಯರಸ್ತೆಯ ಫುಟ್‌ಪಾತ್ ದುರಸ್ತಿ ಮಾಡಬೇಕು ಎಂದು ಮನವಿ ಮಾಡಿದರು. ಮಹಾವೀರ್ ಸೀಸನ್ ಅಪಾರ್ಟ್‌ಮೆಂಟ್, ಕುಮಾರಸ್ವಾಮಿ ಲೇಔಟ್, ರಾಘವನ್ ಪಾಳ್ಯ, ಇಸ್ರೋ ಲೇಔಟ್, ಪೂರ್ಣಪ್ರಜ್ಞ ಲೇಔಟ್ ಹಾಗೂ ಅಂಜನಾಪುರದ ರಾಯಲ್ ಪಾರ್ಕ್ ರೆಸಿಡೆನ್ಸಿ ಬಳಿ ಒಣಗಿದ ಬೃಹತ್ ಮರಗಳನ್ನು ತೆರವುಗೊಳಿಸಲು ಕೋರಿದರು.

ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಬನಶಂಕರಿ ನಿಲ್ದಾಣದವರೆಗಿನ ರಸ್ತೆಯಲ್ಲಿ ತರಕಾರಿ ತ್ಯಾಜ್ಯ ವಿಲೇವಾರಿಯಾಗದೆ ಗಬ್ಬು ನಾರುತ್ತಿದೆ ಹಾಗೂ ಸಾರಕ್ಕಿ ಕೆರೆಯಿಂದ ಸಿದ್ದೇಶ್ವರ ಟಾಕೀಸ್ ಮೂಲಕ 15ನೇ ಕ್ರಾಸ್ ಸಂಪರ್ಕಿಸುವ ರಸ್ತೆ ಜಲಮಂಡಳಿ ಕಾಮಗಾರಿಯಿಂದ ಹದಗೆಟ್ಟಿದೆ ಎಂದು ದೂರಿದರು. ಎಚ್‌ಎಂಟಿ ಟ್ಯಾಂಬರಿನ್ ಪಕ್ಕದ ಟಾಟಾ ಮೋಟಾರ್ಸ್ ಶೋರೂಮ್‌ನವರು ವಾಹನಗಳನ್ನು ಫುಟ್‌ಪಾತ್ ಮೇಲೆ ನಿಲ್ಲಿಸಿ ಪಾದಚಾರಿಗಳಿಗೆ ಅಡ್ಡಿಪಡಿಸುತ್ತಿರುವುದು, ಹುಳಿಮಾವು ಮತ್ತು ಬನ್ನೇರುಘಟ್ಟ ರಸ್ತೆಯ ಫುಟ್‌ಪಾತ್ ಒತ್ತುವರಿ ಹಾಗೂ ಸುಬ್ರಹ್ಮಣ್ಯಪುರ ಕೆರೆಯಲ್ಲಿ ಜಲಕಳೆ ತುಂಬಿರುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಬಿಟಿಎಂ ಲೇಔಟ್‌ನ ಕುವೆಂಪು ವಾರ್ಡ್‌ನಲ್ಲಿ 7 ಮಹಡಿಗಳ ಅನಧಿಕೃತ ಪಿಜಿಗಳ ಹಾವಳಿ ಹೆಚ್ಚಾಗಿದ್ದು ಕ್ರಮ ಕೈಗೊಳ್ಳಬೇಕು, ರಾಘವನ್ ಪಾಳ್ಯದ ಗುರುಕುಲ ಶಾಲೆ ಬಳಿ ಹಾಗೂ ಪದ್ಮನಾಭನಗರದ ಡೆಕ್ಕನ್ ಶಾಲೆ ರಸ್ತೆಯಲ್ಲಿ ಕಸ ಸುರಿಯುವುದು ಮತ್ತು ಬೆಂಕಿ ಹಚ್ಚುವುದನ್ನು ತಡೆಯಬೇಕು ಎಂದು ನಿವಾಸಿಗಳು ಕೋರಿದರು. ಕನಕಪುರ ರಸ್ತೆಯ ಐಕಿಯಾ ಮಾಲ್ ಬಳಿ ತಿಪ್ಪಸಂದ್ರಕ್ಕೆ ತಿರುವು ಪಡೆಯುವಲ್ಲಿ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆ ನಿಯಂತ್ರಣ, ಕುಮಾರಸ್ವಾಮಿ ಲೇಔಟ್ ಬಸ್ ನಿಲ್ದಾಣದ ಬಳಿ ಮಾಂಸದ ಅಂಗಡಿಗಳ ಫುಟ್‌ಪಾತ್ ಒತ್ತುವರಿ ತೆರವು ಹಾಗೂ ಪದ್ಮನಾಭನಗರ, ಯಲಚೇನಹಳ್ಳಿ, ಬೈರಸಂದ್ರ ಮತ್ತು ಗುರಪ್ಪನಪಾಳ್ಯ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಗುತ್ತಿಗೆದಾರರ ಅಸಮರ್ಪಕ ಕಾರ್ಯನಿರ್ವಹಣೆಯ ಕುರಿತು ಸಾರ್ವಜನಿಕರು ಆಯುಕ್ತರ ಗಮನಕ್ಕೆ ತಂದರು.

ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲು ತಾವೇ ಖುದ್ದಾಗಿ ವಾರ್ಡ್ ಪ್ರವಾಸ ನಡೆಸುವುದಾಗಿ ಆಯುಕ್ತರು ಭರವಸೆ ನೀಡಿದರು. ಅದಕ್ಕೂ ಮುನ್ನ ಎಲ್ಲಾ ಆರ್‌ಡಬ್ಲ್ಯೂಎಗಳು ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ಲಿಖಿತವಾಗಿ ಪಟ್ಟಿ ಮಾಡಿ 10 ದಿನಗಳ ಮುಂಚಿತವಾಗಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು. ಆರ್‌ಡಬ್ಲ್ಯೂಎಗಳು ಪಟ್ಟಿ ಮಾಡಿ ಸಲ್ಲಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಆಯಾ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು. ಜೊತೆಗೆ ಪಾಲಿಕೆ ಮತ್ತು ನಾಗರಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಪ್ರತಿ ವಾರ್ಡ್‌ನಲ್ಲೂ ಆಸಕ್ತ ನಾಗರಿಕರನ್ನು ವಾರ್ಡ್ ವಾಲಂಟಿಯರ್ ಆಗಿ ನೇಮಿಸಿ ಅಧಿಕೃತವಾಗಿ ಗುರುತಿಸಲಾಗುವುದು ಎಂದರು.

ಈ ವೇಳೆ ಮುಖ್ಯ ಅಭಿಯಂತರ ಬಸವರಾಜ ಕಬಾಡೆ, ಅರಣ್ಯ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಹಿಂದೆ: ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ

About the Author

The Bengaluru Live

Administrator

Visit Website View All Posts

Post navigation

Previous: ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ

Related Stories

ಸಭಾಂಗಣದಲ್ಲಿ ಸಾಲಾಗಿ ಕುಳಿತಿರುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ
  • ಬೆಂಗಳೂರು ನಗರ

ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ

The Bengaluru Live November 23, 2026 12:07 PM
ತ್ಯಾಜ್ಯ ಮತ್ತು ಅವಶೇಷಗಳ ರಾಶಿಯ ಪಕ್ಕದ ರಸ್ತೆಯಲ್ಲಿ ಪರಿಶೀಲನೆಯ ವೇಳೆ ನಡೆದು ಹೋಗುತ್ತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬನ್ನಪ್ಪ ಪಾರ್ಕ್, ಓಕಳೀಪುರಂ ಕಾರಿಡಾರ್ ಪರಿಶೀಲನೆ: ಕಾಮಗಾರಿ ತ್ವರಿತಗೊಳಿಸಲು ಅಪರ ಆಯುಕ್ತರ ಸೂಚನೆ

The Bengaluru Live November 22, 2026 6:00 PM
ಫೋನ್-ಇನ್ ಕಾರ್ಯಕ್ರಮದ ವೇಳೆ ಸಭೆ ಮೇಜಿನ ಬಳಿ ಟೇಬಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮತ್ತು ಪಕ್ಕದಲ್ಲಿ ಕುಳಿತಿರುವ ಮಹಿಳೆ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆಗೆ ಉತ್ತರ ನಗರ ಪಾಲಿಕೆಯಿಂದ ಮೈಕ್ರೋ-ಪ್ಲಾನ್; ಪ್ರತಿ ಮಂಗಳವಾರ ಫೋನ್-ಇನ್

The Bengaluru Live November 22, 2026 2:00 PM

Latest Post

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ ಸಭಾಂಗಣದಲ್ಲಿ ಸಾಲಾಗಿ ಕುಳಿತಿರುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

November 23, 2026 12:10 PM
ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ ಸಭಾಂಗಣದಲ್ಲಿ ಸಾಲಾಗಿ ಕುಳಿತಿರುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ
  • ಬೆಂಗಳೂರು ನಗರ

ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ

November 23, 2026 12:07 PM
ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಭಾರತ ಮತ್ತು ಜಪಾನ್ ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳು
  • ಕರ್ನಾಟಕ

ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್

November 23, 2026 11:25 AM
ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ

November 22, 2026 9:30 PM
ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೂಗುಚ್ಛ ಹಿಡಿದ ಮಹಿಳೆ ಮತ್ತು ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪುರುಷರು
  • ಕರ್ನಾಟಕ

ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ

November 22, 2026 7:00 PM
ಬನ್ನಪ್ಪ ಪಾರ್ಕ್, ಓಕಳೀಪುರಂ ಕಾರಿಡಾರ್ ಪರಿಶೀಲನೆ: ಕಾಮಗಾರಿ ತ್ವರಿತಗೊಳಿಸಲು ಅಪರ ಆಯುಕ್ತರ ಸೂಚನೆ ತ್ಯಾಜ್ಯ ಮತ್ತು ಅವಶೇಷಗಳ ರಾಶಿಯ ಪಕ್ಕದ ರಸ್ತೆಯಲ್ಲಿ ಪರಿಶೀಲನೆಯ ವೇಳೆ ನಡೆದು ಹೋಗುತ್ತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬನ್ನಪ್ಪ ಪಾರ್ಕ್, ಓಕಳೀಪುರಂ ಕಾರಿಡಾರ್ ಪರಿಶೀಲನೆ: ಕಾಮಗಾರಿ ತ್ವರಿತಗೊಳಿಸಲು ಅಪರ ಆಯುಕ್ತರ ಸೂಚನೆ

November 22, 2026 6:00 PM

ನೀವು ತಪ್ಪಿಸಿಕೊಂಡಿರಬಹುದು

ಸಭಾಂಗಣದಲ್ಲಿ ಸಾಲಾಗಿ ಕುಳಿತಿರುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

The Bengaluru Live November 23, 2026 12:10 PM
ಸಭಾಂಗಣದಲ್ಲಿ ಸಾಲಾಗಿ ಕುಳಿತಿರುವ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ
  • ಬೆಂಗಳೂರು ನಗರ

ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ

The Bengaluru Live November 23, 2026 12:07 PM
ಭಾರತ ಮತ್ತು ಜಪಾನ್ ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳು
  • ಕರ್ನಾಟಕ

ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್

The Bengaluru Live November 23, 2026 11:25 AM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ

The Bengaluru Live November 22, 2026 9:30 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ
  • ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್; ಜಯನಗರದಲ್ಲಿ ಕೋಟ್ಯಂತರ ರೂ. ಕಾಮಗಾರಿ ಎಂದ ಶಾಸಕ
  • ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್
  • ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ
©Copyright 2025 The Bengaluru Live All rights reserved. | MoreNews by AF themes.