Home ಬೆಂಗಳೂರು ನಗರ Bengaluru: ಲೀವಿಂಗ್ ಗೆಳತಿ ತಲೆಗೆ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಪ್ರೇಮಿ!

Bengaluru: ಲೀವಿಂಗ್ ಗೆಳತಿ ತಲೆಗೆ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಪ್ರೇಮಿ!

20
0
Bengaluru: live-in partner killed by battering her head with pressure cooker
Bengaluru: live-in partner killed by battering her head with pressure cooker

ಬೆಂಗಳೂರು:

ಲೀವಿಂಗ್ ನಲ್ಲಿದ್ದ ಗೆಳತಿಯ ತಲೆಗೆ ಕುಕ್ಕರ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬೇಗೂರಿನ ನ್ಯೂ ಮೈಕೋ ಲೇಔಟ್‌ನಲ್ಲಿ ತಡರಾತ್ರಿ ನಡೆದಿದೆ.

ಮೃತ ಯುವತಿಯನ್ನು 24 ವರ್ಷದ ದೇವಾ ಎಂದು ಗುರುತಿಸಲಾಗಿದೆ. ಇನ್ನು ಹತ್ಯೆಗೈದ ಯುವಕನನ್ನು 24 ವರ್ಷದ ವೈಷ್ಣವ್ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ವೈಷ್ಣವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ದೇವಾ, ವೈಷ್ಣವ್‌ ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಇಬ್ಬರು ಬೆಂಗಳೂರಿಗೆ ಬಂದು ಸಹಜೀವನ ನಡೆಸುತ್ತಿದ್ದರು.

ಕಳೆದ ರಾತ್ರಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ವೈಷ್ಣವ್‌ ಆಕ್ರೋಶಗೊಂಡು ಕುಕ್ಕರ್ ನಿಂದ ದೇವಾ ತಲೆಗೆ ಹೊಡೆದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ದೇವಾ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಸದ್ಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here