Home ಬೆಂಗಳೂರು ನಗರ ಮಾ.21-28ರವರೆಗೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಮೆಜೆಸ್ಟಿಕ್​ನಿಂದ ನಾಯಂಡಹಳ್ಳಿವರೆಗೆ ಸೇವೆ ಸ್ಥಗಿತ

ಮಾ.21-28ರವರೆಗೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಮೆಜೆಸ್ಟಿಕ್​ನಿಂದ ನಾಯಂಡಹಳ್ಳಿವರೆಗೆ ಸೇವೆ ಸ್ಥಗಿತ

96
0
Namma Metro
ಫೈಲ್ ಚಿತ್ರ

ಬೆಂಗಳೂರು:

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳು ನಡೆಯಬೇಕಿರುವುದರಿಂದ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.

ಈ ಕುರಿತು ಬಿಎಂಆರ್’ಸಿಎಲ್ ನಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದ್ದು, ಮೈಸೂರು ರಸ್ತೆ-ಕೆಂಗೇರಿ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಮಾ.21ರಿಂದ 28ರವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜೊತೆಗೆ, ಮಾ.​ 21 ರಿಂದ 28ರವರೆಗೆ ಮೆಜೆಸ್ಟಿಕ್​ನಿಂದ ನಾಯಂಡಹಳ್ಳಿವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದೆ.

ಮಾ.29ರಿಂದ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಸಂಚಾರ ಪುನರಾರಂಭಗೊಳ್ಳಲಿದೆ. ಆದರೆ, ಉಳಿದಂತೆ ಈ ದಿನಗಳಲ್ಲಿ ಮೆಜೆಸ್ಟಿಕ್​ನಿಂದ ಬೈಯಪ್ಪನಹಳ್ಳಿವರೆಗೆ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಎಂದಿನಂತೆ ಸಂಚಾರ ಮಾಡಲಿದೆ ಎಂದು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here