Home ಆರೋಗ್ಯ ಬೆಂಗಳೂರಿನ ಈಡಿಗರ ಲೇಡಿಸ್ ಹಾಸ್ಟೆಲ್​ನ 15 ವಿದ್ಯಾರ್ಥಿಗಳಿಗೆ ಕೊರೋನಾ

ಬೆಂಗಳೂರಿನ ಈಡಿಗರ ಲೇಡಿಸ್ ಹಾಸ್ಟೆಲ್​ನ 15 ವಿದ್ಯಾರ್ಥಿಗಳಿಗೆ ಕೊರೋನಾ

289
0

ಬೆಂಗಳೂರು:

ಮಲ್ಲೇಶ್ವರದ ಈಡಿಗರ ಲೇಡಿಸ್ ಹಾಸ್ಟೆಲ್​ನ 15 ವಿದ್ಯಾರ್ಥಿನಿಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬಿಬಿಎಂಪಿ ಹಾಸ್ಟೆಲ್ ಅನ್ನು ಕಂಟೇನ್​ಮೆಂಟ್ ಜೋನ್ ಎಂದು ಘೋಷಿಸಿದೆ.

ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಮೊದಲು ಹೊರ ಜಿಲ್ಲೆಯಿಂದ — ದಾವಣಗೆರೆಯಿಂದ ಬಂದಿದ್ದ ಒಬ್ಬ ವಿದ್ಯಾರ್ಥಿನಿಗೆ ಸೋಂಕು ತಗುಲಿತ್ತು. ಬಳಿಕ ಬಿಬಿಎಂಪಿ ಸಿಬ್ಬಂದಿ ಆ ಹಾಸ್ಟೆಲ್ ನಲ್ಲಿದ್ದ 39 ಮಂದಿ ವಿದ್ಯಾರ್ಥಿನಿಯರನ್ನು ಪರೀಕ್ಷೆಗೊಳಪಡಿಸಿದ್ದರು. ಇದರಲ್ಲಿ 14 ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದೆ. ಸದ್ಯ ಪಾಸಿಟಿವ್ ‌ಇರುವ ವಿದ್ಯಾರ್ಥಿನಿಯರನ್ನ ಹಾಸ್ಟೆಲ್ ನ ಒಂದು ಭಾಗದಲ್ಲಿ ಐಸೋಲೇಷನ್ ಮಾಡಲಾಗಿದೆ. ಇನ್ನೊಂದು ಭಾಗದಲ್ಲಿ ನೆಗೆಟಿವ್ ಇರುವ ವಿದ್ಯಾರ್ಥಿನಿಯರನ್ನ ಐಸೋಲೇಷನ್ ಮಾಡಲಾಗಿದೆ. 7 ದಿನದ ಬಳಿಕ ಮತ್ತೆ ನೆಗೆಟಿವ್ ಇರುವ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದು.

ಈ ಹಾಸ್ಟೆಲ್ ನಲ್ಲಿ ವಾಸವಿರುವ ವಿದ್ಯಾರ್ಥಿನಿಯರು, ಹೆಬ್ಬಾಳ, ರಾಜರಾಜೇಶ್ವರಿ ನಗರ ಸೇರಿದಂತೆ ಅನೇಕ ಕಡೆ ಕಾಲೇಜಿಗೆ ಹೋಗುತ್ತಿದ್ದರು. ಹೀಗಾಗಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದ ಕಾಲೇಜುಗಳಿಗೂ ಟೆನ್ಶನ್ ಶುರುವಾಗಿದೆ. ಕಾಲೇಜುಗಳ ವಿವರ ಪಡೆದುಕೊಂಡು ಟೆಸ್ಟ್ ಮಾಡಲು ಬಿಬಿಎಂಪಿ ಮುಂದಾಗಿದೆ.

LEAVE A REPLY

Please enter your comment!
Please enter your name here