Home ಅಪರಾಧ ಬೆಂಗಳೂರಿನಲ್ಲೊಂದು ಅತ್ಯಾಚಾರ ಆರೋಪಿಗಳ ಕಾಲಿಗೆ ಗುಂಡೇಟು

ಬೆಂಗಳೂರಿನಲ್ಲೊಂದು ಅತ್ಯಾಚಾರ ಆರೋಪಿಗಳ ಕಾಲಿಗೆ ಗುಂಡೇಟು

42
0
Advertisement
bengaluru

ಬೆಂಗಳೂರು:

ಬೆಂಗಳೂರಿನಲ್ಲೊಂದು ಅತ್ಯಾಚಾರ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಯುವತಿ‌ ಜೊತೆ‌ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಬಾಂಗ್ಲಾದೇಶದ 23 ವರ್ಷದ ಯುವತಿಯನ್ನು ರಾಮಮೂರ್ತಿನಗರದ ಮನೆಯೊಂದರಲ್ಲಿ ಕೆಲ‌ ದಿನ ಹಿಂದೆ ಆರೋಪಿಗಳು ಅತ್ಯಾಚಾರ ಎಸಗಿದ್ದರು. ಅದರ ವಿಡಿಯೊವನ್ನು ಆರೋಪಿಗಳೇ ಚಿತ್ರೀಕರಿಸಿ ಸಾಮಾಜಿಕ‌ ಜಾಲತಾಣಗಳಲ್ಲಿ‌ ಹರಿಬಿಟ್ಟಿದ್ದರು.

bengaluru bengaluru

ವಿಡಿಯೊ ಆಧರಿಸಿ‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ನಗರದ ಪೊಲೀಸರು, ನಾಲ್ವರು ಆರೋಪಗಳನ್ನು ಗುರುವಾರ ಸಂಜೆ ಬಂಧಿಸಿದ್ದರು.

ಸ್ಥಳ ಮಹಜರು‌ ಮಾಡಲು ಆರೋಪಿಗಳನ್ನು ಶುಕ್ರವಾರ ಬೆಳಿಗ್ಗೆ ಕರೆದೊಯ್ಯಲಾಗಿತ್ತು. ಆಗ ಕೆ. ಚನ್ನಸಂದ್ರದ ಕನಕ‌ ನಗರದಲ್ಲಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು, ಪೊಲೀಸರ ಮೇಲೆ‌ ಹಲ್ಲೆ‌ ಮಾಡಲು‌ ಮುಂದಾಗಿದ್ದರು.

ಅದೇ ವೇಳೆಯೇ ಪೊಲೀಸರು, ಆರೋಪಿಗಳಾದ ರಿದಾಯ್ ಹಾಗೂ‌‌ ಸಾಗರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


bengaluru

LEAVE A REPLY

Please enter your comment!
Please enter your name here