Home ಆರೋಗ್ಯ 75,000 ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ: ಡಿಸಿಎಂ

75,000 ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ: ಡಿಸಿಎಂ

16
0

ಬೆಂಗಳೂರು:

ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಕೊಡಲಾಗುವ ಲೈಸೋಮಲ್‌ ಅಂಫೋಟೆರಿಸಿನ್‌- ಬಿ  (Liposomal Amphotericin -B) ಔಷಧಿಯ 75,000 ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾತಾಯಣ ತಿಳಿಸಿದ್ದಾರೆ.

ಮುಂಬೈನ ಭಾರತ್‌ ಸೀರಂ ಕಂಪನಿಗೆ 50,000 ವಯಲ್ಸ್‌ ಹಾಗೂ ಬೆಂಗಳೂರಿನ ಮೈಲಾನ್‌ ಫಾರ್ಮಾಸ್ಯೂಟಿಕಲ್‌ ಕಂಪನಿಗೆ 25,000 ವಯಲ್ಸ್‌ ಲೈಸೋಮಲ್‌ ಅಂಫೋಟೆರಿಸಿನ್‌ ಖರೀದಿಗೆ ಆದೇಶ ನೀಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಈ ಎರಡೂ ಕಂಪನಿಗಳಿಗೆ ಗುರುವಾರವೇ (ಮೇ 27) ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿ ಆದೇಶ ನೀಡಲಾಗಿದ್ದು, ಸೀರಂ ಕಂಪನಿ ಏಳು ದಿನದಲ್ಲಿ ಹಾಗೂ ಮೈಲಾನ್‌ ಕಂಪನಿ ಮೂರು ದಿನದಲ್ಲಿ ಇಷ್ಟೂ ಔಷಧಿಯನ್ನು ಪೂರೈಕೆ ಮಾಡಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here