ಬೆಂಗಳೂರು:
ಗ್ರಾಮ ಪಂಚಾಯತ್ ಚುನಾವಣೆಯ ಮೊದಲು ಹಂತದ ಮತದಾನದಲ್ಲಿ ಬೆಂಗಳೂರು ನಗರ ಜಿಲ್ಲೆಯ ಒಟ್ಟು 265 ಮತಗಟ್ಟೆಗಳಲ್ಲಿ ಇಂದು ಶೇ. 76.46 ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಶಾಖೆ ತಿಳಿಸಿದೆ. ಅಂಕಿ ಅಂಶವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ.
ಇದರಲ್ಲಿ ಒಟ್ಟು 71963 ಪುರುಷರು, 71605 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗದವರು ಸೇರಿದಂತೆ ಒಟ್ಟು 1,43,568 ಮತದಾರರು ಇಂದು ಮತ ಚಲಾಯಿಸಿದ್ದಾರೆಂದು ಅಂಕಿ ಅಂಶ ತಿಳಿಸಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಒಟ್ಟು 99 ಮತಗಟ್ಟೆಗಳಲ್ಲಿ ಶೇ. 77 ರಷ್ಟು ಮತದಾನ ದಾಖಲಾಗಿದ್ದು, ಯಲಹಂಕ ತಾಲ್ಲೂಕಿನ ಒಟ್ಟು 166 ಮತಗಟ್ಟೆಗಳಲ್ಲಿ ಶೇ. 75.92 ರಷ್ಟು ಮತದಾನವಾಗಿದೆ ಎಂದು ತಿಳಿಸಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒಟ್ಟು 28471 ಪುರುಷರು ಹಾಗೂ 28285 ಮಹಿಳೆಯರು ಸೇರಿದಂತೆ ಒಟ್ಟು 56756 ಮತದಾರರು ತಮ್ಮ ಮತ ಚಲಾಯಿಸಿದ್ದು, ಯಲಹಂಕ ತಾಲ್ಲೂಕಿನಲ್ಲಿ ಒಟ್ಟು 43492 ಪುರುಷರು, 43320 ಮಹಿಳೆಯರು ಹಾಗೂ ಓರ್ವ ತೃತೀಯ ಲಿಂಗಕ್ಕೆ ಸೇರಿದವರು ಸೇರಿದಂತೆ ಒಟ್ಟು 86813 ಮತದಾರರು ಇಂದು ಮತ ಚಲಾಯಿಸಿದ್ದಾರೆ ಎಂದು ತಿಳಿಸಲಾಗಿದೆ.