Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • 1985 ರಿಂದ 2020 ರವರೆಗಿನ ಹಗರಣ ತನಿಖೆಗೆ ಎಸ್ಐಟಿ ರಚನೆಗೆ ಬಿಡಿಎ ಮನವಿ
  • ಬೆಂಗಳೂರು ನಗರ

1985 ರಿಂದ 2020 ರವರೆಗಿನ ಹಗರಣ ತನಿಖೆಗೆ ಎಸ್ಐಟಿ ರಚನೆಗೆ ಬಿಡಿಎ ಮನವಿ

The Bengaluru Live December 22, 2020 10:30 PM
1985 ರಿಂದ 2020 ರವರೆಗಿನ ಹಗರಣ ತನಿಖೆಗೆ ಎಸ್ಐಟಿ ರಚನೆಗೆ ಬಿಡಿಎ ಮನವಿ

1985 ರಿಂದ 2020 ರವರೆಗಿನ ಹಗರಣ ತನಿಖೆಗೆ ಎಸ್ಐಟಿ ರಚನೆಗೆ ಬಿಡಿಎ ಮನವಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 1985 ರಿಂದ ಇಲ್ಲಿವರೆಗೆ ನಡೆದಿರುವ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವಿಶ್ವನಾಥ್ ಅವರು, ಇತ್ತೀಚೆಗೆ ಬಿಡಿಎ ಮತ್ತು ಆಯುಕ್ತರು ಹಾಗೂ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡವರ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಸಿದ್ದ ಜಾಲವನ್ನು ಬೇಧಿಸಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದರು.

ಕಳೆದ ಹಲವು ವರ್ಷಗಳಿಂದ ಬಿಡಿಎಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನು ಏಜೆಂಟರ ಜೊತೆ ಶಾಮೀಲಾಗಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರಾಟ ಮಾಡುತ್ತಾ ಬರಲಾಗಿದೆ. ಇದೀಗ ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಹಂಚಿಕೆ ಮಾಡಲು ಹೊರಟಿದ್ದ ಪ್ರಕರಣವು ಬಿಡಿಎಗೆ ಒಂದು ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ಇದರಿಂದಾಗಿ ಭ್ರಷ್ಟ ಅಧಿಕಾರಿಗಳು ಸಾರ್ವಜನಿಕರಲ್ಲಿ ಬಿಡಿಎಗೆ ಇದ್ದ ವಿಶ್ವಾಸ ಹೊರಟು ಹೋಗುವಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ 1985 ರಿಂದ ಇಲ್ಲಿವರೆಗೆ ನಡೆದಿರುವ ಹಗರಣಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಯುಕ್ತರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.

ಇನ್ನೆರಡು ಮೂರು ದಿನಗಳಲ್ಲಿ ಆಯುಕ್ತರು ಎಸ್ಐಟಿಗೆ ವಹಿಸಬಹುದಾದ ಹಗರಣಗಳ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನು ಮುಖ್ಯಮಂತ್ರಿಗಳು ಪರಿಶೀಲಿಸಿ ಎಸ್ಐಟಿ ರಚನೆ ಮತ್ತು ಅದರ ಸ್ವರೂಪದ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಬಿಡಿಎಗೆ ಕಳಂಕ ತರಲು ಹೊರಟಿರುವ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ಮತ್ತೆ ಬಿಡಿಎಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ಗೆ ಕೋವಿಡ್‌ ದೃಢ
Next: ಮೊದಲು ಹಂತದ ಗ್ರಾ.ಪಂ ಚುನಾವಣೆ ಜಿಲ್ಲೆಯಲ್ಲಿ ಶೇ. 76.46 ರಷ್ಟು ಮತದಾನ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ ಮೈಸೂರಿನ ಬಿಡುಗಡೆ ಸಮಾರಂಭದಲ್ಲಿ ನಾಲ್ಕನೇ ಸಂಪುಟದ ಪ್ರತಿಗಳನ್ನು ಹಿಡಿದ ಡಿ.ಕೆ. ಶಿವಕುಮಾರ್, ವೀರಪ್ಪ ಮೊಯಿಲಿ ಮತ್ತು ಗಣ್ಯರು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ

November 11, 2026 5:04 PM
ಹುಳಿಮಾವು ಕಾರು ಬಾಡಿಗೆ ವಂಚನೆ: ₹1.20 ಕೋಟಿ ಮೌಲ್ಯದ 12 ಕಾರು ವಶ ಹುಳಿಮಾವು ಕಾರು ಬಾಡಿಗೆ ವಂಚನೆ ಪ್ರಕರಣದ ಅಧಿಕೃತ ಪ್ರಕಟಣೆಯಲ್ಲಿರುವ ಕಾರುಗಳ ಸಾಲು
  • ಬೆಂಗಳೂರು
  • ಅಪರಾಧ

ಹುಳಿಮಾವು ಕಾರು ಬಾಡಿಗೆ ವಂಚನೆ: ₹1.20 ಕೋಟಿ ಮೌಲ್ಯದ 12 ಕಾರು ವಶ

November 11, 2026 4:55 PM
ಇಂದಿರಾನಗರ ಮನೆ ಕಳವು ಪ್ರಕರಣ: ಎಂಟು ಅಂತರರಾಷ್ಟ್ರೀಯ ಪದಕ ವಶ, ಇಬ್ಬರ ಬಂಧನ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪದಕಗಳ ಚಿತ್ರಗಳಿರುವ ಇಂದಿರಾನಗರ ಪೊಲೀಸರ ಪ್ರದರ್ಶನ ಫಲಕ
  • ಬೆಂಗಳೂರು
  • ಅಪರಾಧ

ಇಂದಿರಾನಗರ ಮನೆ ಕಳವು ಪ್ರಕರಣ: ಎಂಟು ಅಂತರರಾಷ್ಟ್ರೀಯ ಪದಕ ವಶ, ಇಬ್ಬರ ಬಂಧನ

November 11, 2026 4:50 PM
ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಫಲಕ ಹಿಡಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು
  • ಬೆಂಗಳೂರು
  • ರಾಜಕೀಯ

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

November 11, 2026 4:30 PM
ನಮ್ಮ ಮೆಟ್ರೋ ಪಿಂಕ್ ಲೈನ್: ನವೆಂಬರ್ 14ರಿಂದ ಪ್ರತಿ ಎಂಟು ನಿಮಿಷಕ್ಕೆ ಒಂದು ರೈಲು; ಆರಂಭದಲ್ಲಿ ಐದು ರೈಲು, ನಂತರ ಅಂತರ ಇಳಿಕೆ ಮೈಕ್ರೋಫೋನ್‌ಗಳಿರುವ ಪತ್ರಿಕಾಗೋಷ್ಠಿ ಮೇಜಿನ ಬಳಿ ಇಬ್ಬರು ಅಧಿಕಾರಿಗಳ ನಡುವೆ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು

ನಮ್ಮ ಮೆಟ್ರೋ ಪಿಂಕ್ ಲೈನ್: ನವೆಂಬರ್ 14ರಿಂದ ಪ್ರತಿ ಎಂಟು ನಿಮಿಷಕ್ಕೆ ಒಂದು ರೈಲು; ಆರಂಭದಲ್ಲಿ ಐದು ರೈಲು, ನಂತರ ಅಂತರ ಇಳಿಕೆ

November 11, 2026 4:09 PM
ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ ಬಿಳಿ ಕುರ್ತಾ ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮೇಜಿನ ಮೇಲಿನ ಅಂಗಾಂಶ ಕೃಷಿ ಜಾರ್‌ಗಳು ಮತ್ತು ಪೆಟ್ರಿ ಡಿಶ್‌ಗಳನ್ನು ಸಿಬ್ಬಂದಿಯೊಂದಿಗೆ ಪರಿಶೀಲಿಸುತ್ತಿರುವುದು
  • ಕರ್ನಾಟಕ

ಕಲಬುರಗಿ ಬಯೋ-ಇಕಾನಮಿ ಮಿಷನ್ 2026: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ₹50 ಕೋಟಿಯ ಮೂರು ವರ್ಷಗಳ ಯೋಜನೆ ಪ್ರಸ್ತಾವ

November 11, 2026 3:02 PM

ನೀವು ತಪ್ಪಿಸಿಕೊಂಡಿರಬಹುದು

ಮೈಸೂರಿನ ಬಿಡುಗಡೆ ಸಮಾರಂಭದಲ್ಲಿ ನಾಲ್ಕನೇ ಸಂಪುಟದ ಪ್ರತಿಗಳನ್ನು ಹಿಡಿದ ಡಿ.ಕೆ. ಶಿವಕುಮಾರ್, ವೀರಪ್ಪ ಮೊಯಿಲಿ ಮತ್ತು ಗಣ್ಯರು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ

The Bengaluru Live November 11, 2026 5:04 PM
ಹುಳಿಮಾವು ಕಾರು ಬಾಡಿಗೆ ವಂಚನೆ ಪ್ರಕರಣದ ಅಧಿಕೃತ ಪ್ರಕಟಣೆಯಲ್ಲಿರುವ ಕಾರುಗಳ ಸಾಲು
  • ಬೆಂಗಳೂರು
  • ಅಪರಾಧ

ಹುಳಿಮಾವು ಕಾರು ಬಾಡಿಗೆ ವಂಚನೆ: ₹1.20 ಕೋಟಿ ಮೌಲ್ಯದ 12 ಕಾರು ವಶ

The Bengaluru Live November 11, 2026 4:55 PM
ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪದಕಗಳ ಚಿತ್ರಗಳಿರುವ ಇಂದಿರಾನಗರ ಪೊಲೀಸರ ಪ್ರದರ್ಶನ ಫಲಕ
  • ಬೆಂಗಳೂರು
  • ಅಪರಾಧ

ಇಂದಿರಾನಗರ ಮನೆ ಕಳವು ಪ್ರಕರಣ: ಎಂಟು ಅಂತರರಾಷ್ಟ್ರೀಯ ಪದಕ ವಶ, ಇಬ್ಬರ ಬಂಧನ

The Bengaluru Live November 11, 2026 4:50 PM
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಫಲಕ ಹಿಡಿದ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು
  • ಬೆಂಗಳೂರು
  • ರಾಜಕೀಯ

ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

The Bengaluru Live November 11, 2026 4:30 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಮೈಸೂರಿನಲ್ಲಿ ವೀರಪ್ಪ ಮೊಯಿಲಿ ಅವರ ವಿಶ್ವಸಂಸ್ಕೃತಿಯ ಮಹಾಯಾನ ನಾಲ್ಕನೇ ಸಂಪುಟ ಬಿಡುಗಡೆ
  • ಹುಳಿಮಾವು ಕಾರು ಬಾಡಿಗೆ ವಂಚನೆ: ₹1.20 ಕೋಟಿ ಮೌಲ್ಯದ 12 ಕಾರು ವಶ
  • ಇಂದಿರಾನಗರ ಮನೆ ಕಳವು ಪ್ರಕರಣ: ಎಂಟು ಅಂತರರಾಷ್ಟ್ರೀಯ ಪದಕ ವಶ, ಇಬ್ಬರ ಬಂಧನ
  • ಬೆಲೆ ಏರಿಕೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ
©Copyright 2025 The Bengaluru Live All rights reserved. | MoreNews by AF themes.