Home ಸಿನಿಮಾ “ಕಬ್ಜ” ಭಾರ್ಗವ್ ಭಕ್ಷಿಯಾಗಿ ಕಿಚ್ಚನ ಅಬ್ಬರ

“ಕಬ್ಜ” ಭಾರ್ಗವ್ ಭಕ್ಷಿಯಾಗಿ ಕಿಚ್ಚನ ಅಬ್ಬರ

77
0

ಬೆಂಗಳೂರು:

ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿದ್ದು, ಭಾರ್ಗವ್ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.

ಸಂಕ್ರಾತಿಯಂದು ವಿಶೇಷ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಆರ್ ಚಂದ್ರು ಈ ಸುದ್ದಿ ತಿಳಿಸಿದ್ದು, ಭಾರ್ಗವ್ ಭಕ್ಷಿ ಪಾತ್ರದಲ್ಲಿ ಸುದೀಪ್ ರಗಡ್ ಲುಕ್ ನಲ್ಲಿ ಕಾಣಿಸಿದ್ದಾರೆ.

ಸುದೀಪ್ ಮತ್ತು ಉಪೇಂದ್ರ ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ನಂದಕಿಶೋರ್ ನಿರ್ದೇಶನದಲ್ಲಿ ಬಂದಿದ್ದ ಈ ಸಿನಿಮಾದಲ್ಲಿ ಸುದೀಪ್ ಕೃಷ್ಣನ ಪಾತ್ರ ನಿರ್ವಹಿಸಿದ್ದರೆ, ದೇವರು ಇಲ್ಲ ಎಂಬ ವಾದವನ್ನು ಮಂಡಿಸುವ ಸಾಮಾನ್ಯ ವ್ಯಕ್ತ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. UNI

LEAVE A REPLY

Please enter your comment!
Please enter your name here