Home ರಾಜಕೀಯ ಬಿಜೆಪಿಯಿಂದ ಕೃಷಿಕರ ಬದುಕು ಹಸನಾಗಿದೆ : ಡಿಸಿಎಂ ಅಶ್ವತ್ಥ ನಾರಾಯಣ್

ಬಿಜೆಪಿಯಿಂದ ಕೃಷಿಕರ ಬದುಕು ಹಸನಾಗಿದೆ : ಡಿಸಿಎಂ ಅಶ್ವತ್ಥ ನಾರಾಯಣ್

59
0

ಚಿಂತಾಮಣಿ:

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಕೃಷಿಕರ ಬದುಕು ಹಸನು ಮಾಡು ವ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಳೆದ ಒಂದೂವರೆ ವರ್ಷದಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಂಡಿದೆ ಎಂ ದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಚಿಂತಾಮಣಿಯಲ್ಲಿಂದು ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ʼಗ್ರಾಮ ಸ್ವರಾಜ್ಯʼ ಕಾರ್ಯಕ್ರಮದಲ್ಲಿ ಪಾ ಲ್ಗೊಂಡು ಮಾತನಾಡಿದ ಅವರು,ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಕಾಯ್ದೆ ಉತ್ತಮ ರೀತಿಯಲ್ಲಿ ತಿದ್ದು ಪಡಿ ತರಲಾಗಿದ್ದು,ರೈತರು ತಾವು ಬೆಳೆದ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಯಾರಿಗೆ ಬೇಕಾದರೂ ಮಾರಿಕೊಳ್ಳಬಹುದು.ಇದರಿಂದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತದಲ್ಲದೆ, ಅವರ ಜೀವನವೂ ಉತ್ತಮವಾಗುತ್ತದೆ ಎಂದರು.

IMG 20201129 WA0011

ಮುಖ್ಯವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ತೋಟಗಾರಿಕೆ,ಹೈನುಗಾರಿಕೆ,ತರಕಾರಿ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಆದರೆ,ಅನೇಕ ವರ್ಷಗಳಿಂದ ನ್ಯಾಯಯುತ ಬೆಲೆ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಅಂತಹ ದುರ್ಬರ ದಿನಗಳು ಇನ್ನಿರಲಾರವು.ಮುಂದೆ ರೈತರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ.ಗ್ರಾಮ ಪಂಚಾಯತಿ ಗಳು ನಮ್ಮ ಅಡಳಿತ ವ್ಯವಸ್ಥೆಯ ಅತ್ಯುತ್ತಮ ಭಾಗ.ಹೀಗಾಗಿ ಜನರಿಗೆ ಅತಿ ಹತ್ತಿರವಾಗಿರುವ ಪಂಚಾಯಿತಿಗಳಲ್ಲಿ ಅತ್ಯುತ್ತ ಮ ಪ್ರತಿನಿಧಿಗಳು ಬರಬೇಕು.ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು.ಸಮರ್ಪಣಾ ಮನೋಭಾವದಿಂದ ಜನ ಸೇವೆ ಮಾಡುವ ನಾಯಕರು ಆಯ್ಕೆಯಾಗಿ ಬರಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಿಗೆ ಬಿಜೆಪಿಯೊಂದೇ ಉತ್ತ ಮ ಆಯ್ಕೆ.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಭಾಗವಹಿಸಿ ಮಾತನಾಡಿದರು.ಕೋಲಾರದ ಸಂಸತ್‌ ಸದಸ್ಯ ಮುನಿಸ್ವಾಮಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪಕ್ಷದ ಚಿಕ್ಕಬಳ್ಳಾ ಪುರ ಜಿಲ್ಲೆಯ ಪಕ್ಷದ ಮುಖಂಡರು ಪಾಲ್ಗೊಂಡು ಮಾತನಾಡಿದರು.

LEAVE A REPLY

Please enter your comment!
Please enter your name here