ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಬೀಳಿಸಲು ಯತ್ನಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರು ಆಪರೇಷನ್ ಕಮಲ ಮಾಡುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ಬೀಳಿಸಲು ಆಪರೇಷನ್ ಕಮಲ ಮಾಡ್ತಿದ್ದಾರೆ” ಎಂದರು
ಕಾಂಗ್ರೆಸ್ ಶಾಸಕ ಗಣಿಗ ರವಿ ಬಿಜೆಪಿ ಆಪರೇಷನ್ ಕಮಲದ ಬಗ್ಗೆ ನಿನ್ನೆ ಹೇಳಿಕೆ ಕೊಟ್ಟಿದ್ದರು. ”ಹಿಂದಿನ ಗ್ಯಾಂಗ್ ಮತ್ತೆ ಆಯಕ್ಟಿವ್ ಆಗಿದೆ. ನಿಮ್ಮನ್ನು ಅಮಿತ್ ಶಾ ಭೇಟಿ ಮಾಡಿಸ್ತೇವೆ. ಚಾರ್ಟರ್ ಫ್ಲೈಟ್ ಬುಕ್ ಮಾಡಿದ್ದೇವೆ ಅಂತಾರೆ. ಎನ್.ಆರ್. ಸಂತೋಷ್ 10 ದಿನದ ಹಿಂದೆ ನಮ್ಮ ಶಾಸಕರನ್ನು ನಗರದ ಖಾಸಗಿ ಹೊಟೇಲ್ನಲ್ಲಿ ಭೇಟಿ ಮಾಡಿದ್ದರು. ಒಬ್ಬರು ಮೈಸೂರು ಭಾಗದ ಮಾಜಿ ಎಂಎಲ್ಸಿ, ಇನ್ನೊಬ್ಬರು ಬೆಳಗಾವಿಯ ಮಾಜಿ ಸಚಿವರು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಸಮಯ ಬರಲಿ ಎಲ್ಲವನ್ನೂ ಬಿಚ್ಚಿಡ್ತೇವೆ” ಎಂದು ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ”ಬಿಜೆಪಿಯವರು ಆಪರೇಷನ್ ಕಮಲ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಉರುಳಿಸಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.