ಬೆಂಗಳೂರು:
ಬೆಂಗಳೂರು ಉಸ್ತುವಾರಿ ಪಡೆಯಲು ಸಿಎಂ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿರುವ ಸಚಿವ ಆರ್.ಅಶೋಕ್ ವಿರುದ್ಧ ಬೆಂಗಳೂರು ನಗರ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದು,ಉಸ್ತುವಾರಿಯನ್ನು ಯಾರಿಗೂ ನೀಡದೇ ತಮ್ಮ ಬಳಿಯಲ್ಲಿಯೇ ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಬೆಂಗಳೂರು ಉಸ್ತುವಾರಿಗೆ ಆರ್.ಅಶೋಕ್, ವಿ.ಸೋಮಣ್ಣ, ಡಾ.ಅಶ್ವಥ್ ನಾರಾಯಣ ನಡುವೆ ಫೈಟ್ ಹೆಚ್ಚಾಗಿದ್ದು ಇತ್ತ ವಲಸಿಗ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಕೂಡ ಸಿಎಂ ಅನ್ನು ಭೇಟಿ ಮಾಡಿದ್ದಾರೆ.
ತಮಗೆ ಕಂದಾಯ ಇಲಾಖೆ ಮೀಸಲಿಟ್ಟಿದ್ದರೂ ಆರ್.ಅಶೋಕ್ ಬೆಂಗಳೂರಿನ ಇತರೆ ಬಿಜೆಪಿ ಸಚಿವರುಗಳ ಖಾತೆಯಲ್ಲಿ ಗುತೂರಿಸುವುದು,ಹಸ್ತಕ್ಷೇಪ ಮಾಡುವ ನಡೆಗೆ ಈ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.ಅಶೋಕ್, ಬೊಮ್ಮಯಿ ಸಿಎಂ ಆದ ಬಳಿಕ ಅವರ ನೆರಳಿನಂತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಲ್ಲದೇ ಅಧಿಕಾರಿಗಳ ಬಳಿ ಹೇಳಿ ನಮ್ಮ ಕೆಲಸಗಳಿಗೆ ಬ್ರೇಕ್ ಹಾಕಿಸಿದ್ದಾರೆ.
ಅಶೋಕ್‌ರನ್ನು ಗೆ ಕರೆದು ಹೇಳುವಂತೆ ವಲಸಿಗರ ಸಚಿವರು ಸಿಎಂ ಬಳಿ ದೂರಿದ್ದಾರೆನ್ನಲಾಗಿದೆ.
ಇತ್ತ ಬಿಬಿಎಂಪಿ ಚುನಾವಣೆ ಹಿನ್ನೆಲೆ ಉಸ್ತುವಾರಿ ಕೊಡುವಂತೆ ಸಿಎಂ ಮೇಲೆ ಅಶೋಕ್ ಒತ್ತಡ ಹೇರುತ್ತಿದ್ದು,ವಲಸಿಗರಂತೆ ಮೂಲ ಬಿಜೆಪಿ ನಗರ ಶಾಸಕ ಹಾಗೂ ಸಚಿವರು ಸಹ ಅಶೋಕ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.