Home ಆರೋಗ್ಯ ಜನೌಷಧಿ ಮಳಿಗೆಗಳಿಂದ ಉತ್ತಮ ಗುಣಮಟ್ಟದ ಔಷಧ : ಮನ್ಸುಖ್ ಮಾಂಡವೀಯ

ಜನೌಷಧಿ ಮಳಿಗೆಗಳಿಂದ ಉತ್ತಮ ಗುಣಮಟ್ಟದ ಔಷಧ : ಮನ್ಸುಖ್ ಮಾಂಡವೀಯ

17
0
High quality medicine to be made available at Janushadhi stores Mansukh Mandaviya1

ಬೆಂಗಳೂರು:

ಜನೌಷಧಿ ಮಳಿಗೆಗಳಲ್ಲಿನ ಔಷಧಗಳು ಉನ್ನತ ಗುಣಮಟ್ಟ ಹೊಂದಿವೆ. ಪ್ರತಿತಿಂಗಳು ಔಷಧ ನಿಯಂತ್ರಕರಿಂದ ಸೂಕ್ತ ತಪಾಸಣೆಗೆ ಒಳಪಡುತ್ತಿವೆ. ಈ ಮೂಲಕ ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಆರೋಗ್ಯ ವಲಯದಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ.

ನಗರದ ಬಸವನಗುಡಿಯಲ್ಲಿ ಫಾರ್ಮಸಿಟಿಕಲ್ಸ್ ಅಂಡ್ ಮೆಡಿಕಲ್ ಡಿವೈಸ್ ಬ್ಯೂರೋ ಆಫ್ ಇಂಡಿಯಾ- ಪಿಎಂಬಿಐನಿಂದ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಜನೌಷಧಿ ಮಳಿಗೆ ಕಾರ್ಯಕ್ರಮದಡಿ ನಾಗರಿಕರಿಗೆ ಅಗತ್ಯವಾಗಿರುವ ಔಷಧಿಗಳನ್ನು ಯುವ ಸಮೂಹ ಒಳಗೊಂಡಿರುವ ಜನಮಿತ್ರ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ತಲುಸುತ್ತಿದ್ದಾರೆ. ಕೇಂದ್ರದ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ರೈತಪರ, ಜನಪರ ಮತ್ತು ಕೈಗಾರಿಕಾ ಸ್ನೇಹಿಯಾಗಿ ಆಡಳಿತ ನಡೆಸುತ್ತಿದೆ ಎಂದರು.

High quality medicine to be made available at Janushadhi stores Mansukh Mandaviya1

ಜನೌಷಧಿ ಮಳಿಗೆಗಳಿಂದ ಬಡವರು ಮತ್ತು ಮಧ್ಯಮವರ್ಗದವರಿಗೆ ಹೆಚ್ಚಿನ ರೀತಿಯಲ್ಲಿ ಲಾಭವಾಗುತ್ತಿದೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಮಾಸಿಕ ಕನಿಷ್ಠ 4 ಸಾವಿರ ರೂಪಾಯಿ ಮೊತ್ತದ ಔಷಧಿ ಅಗತ್ಯವಿದೆ. ಆದರೆ, ಜನೌಷಧಿ ಮಳಿಗೆಗಳಲ್ಲಿ ಕೆಲವೇ ನೂರು ರೂಪಾಯಿಗಳಲ್ಲಿ ಈ ಎಲ್ಲಾ ರೀತಿಯ ಔಷಧಿಗಳು ದೊರೆಯುತ್ತಿವೆ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಜೀವನ ಪರ್ಯಂತ ಔಷಧ ಪಡೆಯುವ ಪರಿಸ್ಥಿತಿ ಇದ್ದು, ಇವರ ಮಾಸಿಕ ವೆಚ್ಚವನ್ನು ಸರ್ಕಾರ ಗಣನೀಯವಾಗಿ ಕಡಿಮೆ ಮಾಡಿದೆ. ದೇಶದಲ್ಲಿ ಇಂದು ೮ ಸಾವಿರಕ್ಕೂ ಹೆಚ್ಚು ಜನೌಷಧಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಯೋಜನೆಯ ಯಶಸ್ಸಿಗೆ ಇದು ಸಾಕ್ಷಿಯಾಗಿದೆ ಎಂದು ಸಚಿವ ಮನ್ಸುಖ್ ಮಾಂಡವೀಯಾ ತಿಳಿಸಿದರು.

ಜನೌಷಧಿ ಮಳಿಗೆಗಳಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತಿದ್ದು, ಪ್ರತಿ ತಿಂಗಳು ಔಷಧಗಳನ್ನು ಔಷಧ ನಿಯಂತ್ರಕರು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ. ಈ ಹಿಂದೆ ಜಾಹೀರಾತುಗಳ ಮೂಲಕ ಔಷಧಗಳಿಗೆ ಮಾರುಕಟ್ಟೆ ಮತ್ತು ಬ್ರಾಂಡ್ ಒದಗಿಸಲಾಗುತ್ತಿತ್ತು. ಇದನ್ನು ಮನಗಂಡು ಪ್ರಧಾನಮಂತ್ರಿ ಅವರು ಜನರಿಕ್ ಔಷಧಿಗಳಿಗೆ ಪ್ರತ್ಯೇಕ ಬ್ರ್ಯಾಂಡ್ ರೂಪಿಸುವಂತೆ ಸೂಚನೆ ನೀಡಿದ್ದರು. ಇದರಿಂದ ಇದೀಗ ಜನರಿಕ್ ಔಷಧಗಳಿಗೆ ತನ್ನದೇ ಆದ ಮಾನ್ಯತೆ ದೊರೆತಿದೆ. ಒಂದು ಜನೌಷಧಿ ಮಳಿಗೆ ಕನಿಷ್ಠ 25ರಿಂದ 50 ಮಂದಿ ಜನೌಷಧಿ ಮಿತ್ರರನ್ನು ಒಳಗೊಂಡಿದ್ದು, ಕೋವಿಡ್ ಸಂದರ್ಭದಲ್ಲೂ ಅಗತ್ಯವಿರುವವರಿಗೆ ಸಮರ್ಪಕವಾಗಿ ಔಷಧಿಗಳನ್ನು ಪೂರೈಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರು, ಕೇವಲ ಯೋಜನೆಗಳನ್ನು ಘೋಷಿಸುವುದಿಲ್ಲ. ಅದನ್ನು ಸೂಕ್ತ ರೀತಿಯಲ್ಲಿ ಜನರಿಗೆ ತಲುಪಿಸುವಂತೆ ಸೂಕ್ತ ಕಾರ್ಯ ಯೋಜನೆಗಳನ್ನು ರೂಪಿಸಿ ಪ್ರಚಾರಕ್ಕೂ ಸಹ ಆದ್ಯತೆ ನೀಡುತ್ತಿದ್ದಾರೆ. ಈವರೆಗೆ ಯಾವುದೇ ಪ್ರಧಾನಮಂತ್ರಿ ಅವರು ಯೋಚಿಸದ ಮತ್ತು ಯೋಜಿಸದ ರೀತಿಯಲ್ಲಿ ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದ್ದು, ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಅದಮ್ಯ ಚೇತನ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಪಿಎಂಬಿಐನ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥ್ ಗೌತಮ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here