Home ಬೆಂಗಳೂರು ನಗರ ಆಡಳಿತ ಪಕ್ಷದ ಶಾಸಕರಿಂದಲೇ ತಾರತಮ್ಯ ವಿರೋಧಿಸಿ ಪ್ರತಿಭಟನೆ

ಆಡಳಿತ ಪಕ್ಷದ ಶಾಸಕರಿಂದಲೇ ತಾರತಮ್ಯ ವಿರೋಧಿಸಿ ಪ್ರತಿಭಟನೆ

52
0
BJP MLA stages protest against party govt in Karnataka

ಬೆಂಗಳೂರು:

ಆಡಳಿತ ಪಕ್ಷದ ಶಾಸಕರಿಂದಲೇ ಸರ್ಕಾರದ ವಿರುದ್ಧ ಪ್ರತಿಭಟನೆಯಾದ ಘಟನೆಗೆ ವಿಧಾನಸೌಧ – ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆಯ ಸ್ಥಳ ಸಾಕ್ಷಿಯಾಯಿತು. ಭಿತ್ತಿಪತ್ರಗಳೊಂದಿಗೆ ಪ್ರತಿಭಟನೆ ನಡೆಸಿದ್ದು ಸಹ ಗಮನ ಸೆಳೆಯಿತು.

“ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವಿಕೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಹಲವು ಸ್ಥಳಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರವಾಹದಿಂದ ತತ್ತರಿಸಿವೆ. ಅಪಾರ ಹಾನಿ ಸಂಭವಿಸಿದೆ. ಸಂಕಷ್ಟಕ್ಕೊಳಗಾಗಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ವಿತರಣೆಯಾಗಿಲ್ಲ. ಇದಕ್ಕೆ ರಾಷ್ಟ್ರ, ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗಳಿಂದ ಹಣ ಬಿಡುಗಡೆಯಾಗದಿರುವುದೇ ಕಾರಣ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಆರೋಪಿಸಿದರು.

ನೆರೆಯ ಶೃಂಗೇರಿ ತಾಲ್ಲೂಕಿನಲ್ಲಿ ಆಗಿರುವ ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ನೀಡಲಾಗಿದೆ. ತಮ್ಮ ಕ್ಷೇತ್ರದಲ್ಲಾಗಿರುವ ಭಾರಿ ಹಾನಿಗಳಿಗೆ ಇನ್ನೂ ಏಕೆ ಪರಿಹಾರ ವಿತರಣೆ ಮಾಡಿಲ್ಲವೆಂದು ಜನತೆ ತನನ್ನು ಪ್ರಶ್ನಿಸುತ್ತಿದ್ದಾರೆ. ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಆಗಿದೆಯೆಂದು ಅವರಿಗೆ ವಿವರಿಸುತ್ತಾ ಕೂರಲು ಆಗುವುದಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡಿದ್ದಾಗಿ ಹೇಳಿದರು.

ಈಗಾಗಲೇ ಸಂಬಂಧಿಸಿದವರಿಗೆ ಮೂಡಿಗೆರೆ ಕ್ಷೇತ್ರದಲ್ಲಿ ಭಾರಿ ಮಳೆಯಿಂದಾಗಿ ಕಳೆದೊಂದು ವರ್ಷದಿಂದ ಆಗಿರುವ ಹಾನಿ ಬಗ್ಗೆ ಸಮೀಕ್ಷೆಯಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ವರದಿಯನ್ನೂ ಸಲ್ಲಿಸಲಾಗಿದೆ. ಇಷ್ಟಾದರೂ ಪರಿಹಾರ ಬಿಡುಗಡೆಯಾಗದಿರುವುದು ಸರಿಯಲ್ಲ ಎಂದವರು ಹೇಳಿದರು.

ಅವರು ಹಿಡಿದಿದ್ದ ಭಿತ್ತಿಪತ್ರಗಳಲ್ಲಿ ಎನ್.ಡಿ.ಆರ್.ಎಫ್., ಎಸ್.ಡಿ,ಆರ್.ಎಫ್. ಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ ಹಾಗೂ ಮನೆ, ಜಮೀನು ಮತ್ತು ಬೆಳೆ ಹಾನಿ ಆದವರಿಗೆ ಪರಿಹಾರ ಕೊಡಿ ಮಾನ್ಯ ಮುಖ್ಯಮಂತ್ರಿಯವರೇ,ಎಂದು ಬರೆಯಲಾಗಿತ್ತು. ಕೇಂದ್ರ ರಾಜ್ಯ ಎರಡೂ ಕಡೆಯೂ ಬಿಜೆಪಿಯದೇ ಸರ್ಕಾರಗಳಿವೆ. ಹೀಗಿದ್ದೂ ಆಡಳಿತ ಪಕ್ಷದ ಶಾಸಕರೇ ಪರಿಹಾರ ಹಣ ವಿತರಣೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಪ್ರತಿಭಟನೆ ಮಾಡಿರುವುದು ಏಕಕಾಲದಲ್ಲಿ ಸರ್ಕಾರಗಳು ಹಾಗೂ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದೆ.

LEAVE A REPLY

Please enter your comment!
Please enter your name here