Home ಬೆಂಗಳೂರು ನಗರ ದಸರಾ ವೇಳೆಗೆ ಮೈಸೂರು- ಬೆಂಗಳೂರು 10 ಹತ್ತು ಪಥಗಳ ಕಾಮಗಾರಿ ಪೂರ್ಣ: ಗಡ್ಕರಿ

ದಸರಾ ವೇಳೆಗೆ ಮೈಸೂರು- ಬೆಂಗಳೂರು 10 ಹತ್ತು ಪಥಗಳ ಕಾಮಗಾರಿ ಪೂರ್ಣ: ಗಡ್ಕರಿ

89
0

ಬೆಂಗಳೂರು:

ಮೈಸೂರು- ಬೆಂಗಳೂರು ನಡುವಿನ ಪ್ರಯಾಣದ ಅವಧಿ ಇನ್ನು ಕೇವಲ ಒಂದೂವರೆ ಗಂಟೆ ಮಾತ್ರ..! ಅರ್ಥಾತ್ ಕೇವಲ 90 ನಿಮಿಷ. ಹೌದು ಇದು ಹೇಗೆ ಸಾಧ್ಯ ??

ಸದ್ಯ ಈ ಎರಡು ನಗರಗಳ ನಡುವೆ 3 ಗಂಟೆ ಪ್ರಯಾಣ ಮಾಡಬೇಕಾಗಿದೆ. 8 ಸಾವಿರದ 172 ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಪಥಗಳ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು ಮುಂದಿನ ದಸರಾ ವೇಳೆಗೆ ರಾಜ್ಯದ ಜನತೆಗೆ ದಸರಾ ಕೊಡುಗೆಯಾಗಿ ಸಂಚಾರದ ಅವಧಿ ಕಡಿಮೆಯಾಗಲಿದೆ.

ಸದ್ಯ ಮೈಸೂರು ಮತ್ತು ಬೆಂಗಳೂರು ನಡುವಣ ಹೆದ್ದಾರಿಯನ್ನು ಹತ್ತು ಪಥಗಳ ಹೆದ್ದಾರಿಯನ್ನಾಗಿ ಪರಿವರ್ತನೆ ಮಾಡುತ್ತಿದ್ದು ಮುಂದಿನ ವರ್ಷದ ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಹೆದ್ದಾರಿ ಅನುವಾಗಲಿದೆ.

ಹಾಲಿ ಕಾಮಗಾರಿ ಪೂರ್ಣಗೊಂಡರೆ ಎರಡು ನಗರಗಳ ಸಂಚಾರದ ಅವಧಿ ಕೇವಲ 90 ನಿಮಿಷಕ್ಕೆ ಇಳಿಯಲಿದೆ . ಮುಂದಿನ ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಂಡು ಹೆದ್ದಾರಿ ಸಾರ್ವಜನಿಕರ ಸಂಚಾರ ಸೇವೆಗೆ ಲಭ್ಯವಾಗಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ರಾಜ್ಯದ ಜನತೆಗೆ ಟ್ವೀಟ್ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ಭಾರತಮಾಲಾ ಪರಿಯೋಜನ ಹಂತ-1ರ ಅಡಿಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಎರಡು ಪ್ಯಾಕೇಜ್ಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಚಿವ ನಿತಿನ್ ಗಡ್ಕರಿ ಕಾಮಗಾರಿಗಳ ಚಿತ್ರಗಳನ್ನು ಸಹ ಟ್ವೀಟ್ ಮಾಡಿದ್ದಾರೆ.ಪ್ರಸ್ತುತ ಇರುವ 135 ಕಿಲೋಮೀಟರ್ ರಸ್ತೆ ಸದ್ಯ 4 ಪಥದ ಹೆದ್ದಾರಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಾದ ಕಾರಣ 10 ಪಥವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.

LEAVE A REPLY

Please enter your comment!
Please enter your name here