Home ಬೆಂಗಳೂರು ನಗರ ಚಿಕ್ಕಬಳ್ಳಾಪುರಕ್ಕೆ ಮಾರ್ಗ ಸಂಖ್ಯೆ 298ಎಂಎನ್ ವೋಲ್ವೋ ಬಸ್ ಸೇವೆ ಆರಂಭಿಸಿದ ಬಿಎಂಟಿಸಿ

ಚಿಕ್ಕಬಳ್ಳಾಪುರಕ್ಕೆ ಮಾರ್ಗ ಸಂಖ್ಯೆ 298ಎಂಎನ್ ವೋಲ್ವೋ ಬಸ್ ಸೇವೆ ಆರಂಭಿಸಿದ ಬಿಎಂಟಿಸಿ

203
0
BMTC starts Volvo bus service on route number 298mn to Chikkaballapur
Advertisement
bengaluru

ಬೆಂಗಳೂರು:

ಯುಗಾದಿ ಹಬ್ಬಕ್ಕೆ ಚಿಕ್ಕಬಳ್ಳಾಪುರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವೋಲ್ವೋ ಎರಡು ಹವಾನಿಯಂತ್ರಿತ ಬಸ್​ಗಳ ಸೇವೆಯನ್ನು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ.

ಇದು ಬಿಎಂಟಿಸಿಯ ಅತಿ ಉದ್ದದ ಸೇವೆಯಾಗಿದ್ದು, ಇದೇ ಮೊದಲ ಬಾರಿಗೆ ನಿಗಮವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಬಸ್‌ಗಳನ್ನು ನಿರ್ವಹಣೆ ಮಾಡಲು ಮುಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್‌ಆರ್‌ಟಿಸಿ) ಅನುಮತಿ ಪಡೆದ ನಂತರವೇ ಬಿಎಂಟಿಸಿ ಈ ಸೇವೆಯನ್ನು ವಿಸ್ತರಿಸಬಹುದಾಗಿದೆ. ಮಾರ್ಗ ಸಂಖ್ಯೆ 298ಎಂಎನ್ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಹೆಬ್ಬಾಳ, ಯಲಹಂಕ ಮತ್ತು ರಾಣಿ ಕ್ರಾಸ್/ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಈ ಬಸ್ ಗಳು ಚಲಿಸಲಿವೆ.

bengaluru bengaluru

ಚಿಕ್ಕಬಳ್ಳಾಪುರ ಸಿವಿಲ್ ಬಸ್ ನಿಲ್ದಾಣದಲ್ಲಿ ಸ್ಥಳೀಯ ಶಾಸಕ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಎರಡು ವೋಲ್ವೋ ಬಸ್‌ಗಳನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿದ್ದು, ಪ್ರತಿ ದಿನ ಆರು ರೌಂಡ್ ಟ್ರಿಪ್‌ಗಳನ್ನು ಈ ಬಸ್’ಗಳು ಮಾಡಲಿವೆ. ಸಂದರ್ಭಕ್ಕೆ ಅನುಗುಣವಾಗಿ ಟಿಕೆಟ್ ದರವನ್ನು ರೂ.80ಕ್ಕೆ ನಿಗದಿ ಮಾಡಲಾಗಿದೆ.

ಪ್ರಾಯೋಗಿಕ ಹಂತವಾಗಿರುವ ಕಾರಣ ಚಿಕ್ಕಬಳ್ಳಾಪುರ ಬಸ್ ಸಂಚಾರಕ್ಕೆ ಕಡಿಮೆ ದರವನ್ನು ನಿಗದಿ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯಾವ ಬಸ್ ನಿಲ್ದಾಣಗಳಿಂದ ಎಷ್ಟು ಗಂಟೆಗೆ ಬಸ್​ ಹೊರಡಲಿದೆ ವೇಳಾಪಟ್ಟಿ ಇಲ್ಲಿದೆ..

ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬಸ್​ ಹೊರಡಲಿರುವ ಸಮಯ ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ಸಂಜೆ 7.15, 7.35 ಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್​ ಹೊರಡಲಿರುವ ಸಮಯ ಬೆಳಿಗ್ಗೆ 10.25, 11.00, ಸಂಜೆ 5.30, 5.45, ರಾತ್ರಿ 9.15, 9. 35 ಕ್ಕೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸಲಿದೆ.


bengaluru

LEAVE A REPLY

Please enter your comment!
Please enter your name here