Home ಅಪರಾಧ ಬಿಎಂಟಿಎಫ್ ಇನ್ಸೆಕ್ಟರ್ ವಿಕ್ಟರ್ ಸೈಮನ್ ಬಂಧನ

ಬಿಎಂಟಿಎಫ್ ಇನ್ಸೆಕ್ಟರ್ ವಿಕ್ಟರ್ ಸೈಮನ್ ಬಂಧನ

182
0

ಬೆಂಗಳೂರು:

ಎಸಿಬಿ ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾದ ಹಿನ್ನಲೆಯಲ್ಲಿ ಬಿಎಂಟಿಎಫ್ ಇನ್ಮಕ್ಕರ್‌ ವಿಕ್ಕರ್ ಸೈಮನ್ ಅವರನ್ನು ಬಂಧಿಸಲಾಗಿದೆ.

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಸೈಮನ್ ಮನೆ ಮೇಲೆ ಎಸಿಬಿ ಎಸ್ಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.

ದಾಳಿ ವೇಳೆ 22.36 ಲೀಟರ್ ಗೂ ಅಧಿಕ ವಿದೇಶಿ ಮದ್ಯ ಶೇಕಡ 257.46 ರಷ್ಟು ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿತ್ತು . ಇಂದು ಅವರನ್ನು ಬಂಧನ ಮಾಡಿದ ಎಸಿಬಿ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿದರು.

ಮಾರ್ಚ್ 13 ರವರೆಗೆ ಸೈಮನ್ ಅವರ ಪೊಲೀಸ್ ಕಸ್ಟಡಿಯನ್ನು ಪಡಿಸಿದರು ಮತ್ತು ಅವರು ತನಿಖೆಗೆ ಸಹಕರಿಸದ ಕಾರಣ ನ್ಯಾಯಾಲಯದಿಂದ ಹೆಚ್ಚಿನ ಕಸ್ಟಡಿ ಪಡೆಯಬಹುದು ಎಂದು ಎಸಿಬಿ ಅಧಿಕಾರಿಯೊಬ್ಬರು ಹೇಳಿದರು. ಬಿಎಂಟಿಎಫ್‌ಗೆ ಮುಂಚಿತವಾಗಿ, ಸೈಮನ್ ಬೆಲ್ಲಂದೂರು ಮತ್ತು ಎಚ್‌ಎಸ್‌ಆರ್ ಲೆಔಟ್ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

screenshot of ACB press note

ಎಸಿಬಿ ದಾಳಿ ವೇಳೆ ನ್ಯಾಷನಲ್ ಗೇಮ್ ವಿಲೇಜ್‌ನಲ್ಲಿ 1 ಪಾಟ್ , ಮೈಸೂರಿನಲ್ಲಿನ ಸುಮಾರು 129 ಚ.ಅಡಿಯಲ್ಲಿ ಬೃಹತ್ ಮನ , ಮೈಸೂರಿನಲ್ಲಿ 2 ನಿವೇಶನ , ಮೈಸೂರು ಜಿಲ್ಲೆಯ ಹಂಪಾಪುರ ಹೋಬಳಿಯಲ್ಲಿ 2 ಕಡೆಗಳಲ್ಲಿ 10 ಎಕರೆ ಕೃಷಿ ಜಮೀನು , 1 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಪೇಪರ್ , ಬ್ಯಾಂಕ್ ಲಾಕರ್‌ಗಳಲ್ಲಿ 500 ಗ್ರಾಂ ಚಿನ್ನ , ಬೆಂಗಳೂರಿನ ವಾಸದ ಮನೆಯಲ್ಲಿ 7.26 ಲಕ್ಷ ರೂ . ನಗದು , ವಿದೇಶಿ ಮದ್ಯ ಸೇರಿ ಅಂದಾಜು 22.36 ಲೀ . ಮದ್ಯದ ಬಾಟಲ್‌ಗಳು , 1 ಹುಂಡೈ ವರ್ನ ಕಾರ್ ಹಾಗೂ 21.61 ಲಕ್ಷ ರೂ . ಮೌಲ್ಯದ ಗಯೋಪಯೋಗಿ ವಸ್ತುಗಳು ಪತ್ತೆಯಾಗಿವೆ.

LEAVE A REPLY

Please enter your comment!
Please enter your name here